
ಹೈದರಾಬಾದ್(ಮಾ.02): ತೆಲಂಗಾಣ ಹಾಗೂ ಛತ್ತೀಸ್ಘಡ ಗಡಿಯಲ್ಲಿ ನಕ್ಸಲ್ ನಿಗ್ರಹ ದಳದ ಕಮಾಂಡೋ'ಗಳು ನಡೆಸಿದ ಕಾರ್ಯಾಚರಣೆಯಲ್ಲಿ 10 ಮಾವೋವಾದಿ ಉಗ್ರರು ಹತರಾಗಿದ್ದಾರೆ.
ತಡಪಲಗುಟ್ಟ-ಪೂಜಾರಿ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಡುವಿನ ಘರ್ಷಣೆಯಲ್ಲಿ ಓರ್ವ ಕಮಾಂಡೋ ಕುಡ ಹುತಾತ್ಮರಾಗಿದ್ದಾರೆ. ಹತ್ಯೆಯಾದವರಲ್ಲಿ 6 ಮಹಿಳೆಯರು ಒಳಗೊಂಡಿದ್ದು ಇಂದು ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಕಾರ್ಯಾಚರಣೆ ನಡೆದಿದೆ. ತೆಲಂಗಾಣ ಹಾಗೂ ಛತ್ತೀಸ್'ಘಡ ಪೊಲಿಸರು ಜಂಟಿ ಕಾರ್ಯಚರಣೆ ಕೈಗೊಂಡಿದ್ದವು. ಹತ್ಯೆಯಾದವರ ಬಳಿಯಿಂದ ಎಕೆ 47 ರೈಫಲ್, ಎಸ್'ಎಲ್'ಆರ್ ಹಾಗೂ ಐಎನ್'ಎಸ್'ಎಎಸ್ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.
ಹತ್ಯೆಯಾದವರಲ್ಲಿ ಸಿಪಿಐ ಮಾವೋದ ತೆಲಂಗಾಣ ರಾಜ್ಯ ಸಮಿತಿಯ ಕಾರ್ಯದರ್ಶಿ, ಕರೀಂ'ನಗರ ಜಿಲ್ಲಾ ವಿಭಾಗೀಯ ಸಮಿತಿ ಕಾರ್ಯದರ್ಶಿ ಸೇರಿದ್ದಾರೆ. ಉಳಿದವರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ. ಕಳೆದ 3 ದಿನಗಳಿಂದ 150ಕ್ಕೂ ಹೆಚ್ಚು ಮಾವೂ ಉಗ್ರರು ಸಭೆ ಸೇರಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸದ್ ಕಾರ್ಯಾಚರಣೆ ನಡೆಸಿತ್ತು.
ಇತ್ತೀಚಿನ ದಿನಗಳಲ್ಲಿ ಮಾವೋ ವಿರುದ್ಧ ಕೈಗೊಂಡ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ. ಆದಾಗ್ಯೂ ಮಾವೋ ಚಿಂತಕ ಪಿ.ವರವರ ರಾವ್ ನಕಲಿ ಎನ್'ಕೌಂಟರ್ ಎಂದು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.