ಧಾರವಾಡ ಸಮ್ಮೇಳನ ಕಲಿಸಿದ 10 ಪಾಠಗಳು

By Web DeskFirst Published Jan 7, 2019, 9:40 AM IST
Highlights

ಧಾರವಾಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿದೆ. ಮೂರು ದಿನ ಧಾರವಾಡ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನ ಕಲಿಸಿದ 10 ಪಾಠಗಳು ಇಲ್ಲಿವೆ. 

ಧಾರವಾಡ (ಜ. 07):  ಅಖಿಲ ಭಾರತ 84ನೇ ಸಾಹಿತ್ಯ ಸಮ್ಮೇಳನ ತೆರೆ ಕಂಡಿದೆ. ಎಂದಿನಂತೆ ಈ ಸಮ್ಮೇಳನದಲ್ಲೂ ಕೆಲವೊಂದು ಲೋಪದೋಷಗಳಿದ್ದವು. ಅಂಥ ಹತ್ತು ಅಂಶಗಳನ್ನಿಲ್ಲಿ ಪಟ್ಟಿಮಾಡಲಾಗಿದೆ. ಮುಂದಿನ ಸಮ್ಮೇಳನದಲ್ಲಿ ಇವು ಮರುಕಳಿಸದಂತೆ ನೋಡಿಕೊಂಡರೆ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಯಶಸ್ವಿಯಾಗಬಹುದು.

1.ರಾಜಕಾರಣಿಗಳಿಂದಾಗಿ ಈ ಸಮ್ಮೇಳನದ ಆರಂಭದ ದಿನವೇ ಸಾಕಷ್ಟುವಿಳಂಬವಾಯಿತು. ಸಮ್ಮೇಳನಾಧ್ಯಕ್ಷರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಸವåಸ್ಯೆಯಾಯಿತು. ಮುಂದಿನ ಸಮ್ಮೇಳನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಾಯುವ ಪರಿಪಾಠ ತಪ್ಪಿಸಬೇಕು.

2.ಲಕ್ಷಾಂತರ ಮಂದಿ ಆಗಮಿಸುವ ಸಭಾಂಗಣದಲ್ಲಿ ಧೂಳಿನದು ದೊಡ್ಡ ಸಮಸ್ಯೆ. ಇದರಿಂದ ಲಕ್ಷಾಂತರ ಜನ ಸಮಸ್ಯೆ ಅನುಭವಿಸುತ್ತಾರೆ. ಈ ಕಿರಿಕಿರಿ ಮುಂದಿನ ಸಮ್ಮೇಳನದಲ್ಲಿ ಇಲ್ಲವಾಗಲಿ.

3.ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಕವಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಒಂದು ಗೋಷ್ಠಿಯಲ್ಲಿ 40-50 ಕವಿಗಳಿಗೆ ಅವಕಾಶ ಕೊಡಬಾರದು. ಹೀಗೆ ಮಾಡಿದರೆ ಕವಿಗಳಿಗೂ ಕಿವಿಗಳಿಗೂ ತ್ರಾಸ. ಜೊತೆಗೆ ಕವಿತಾ ವಾಚನದ ಸಮಯವನ್ನು ನಿರೂಪಕರು, ಸ್ವಾಗತ, ವಂದನಾರ್ಪಣೆ ಮಾಡುವವರು ತಿನ್ನದೇ ಇರಲಿ. ಸಾಧ್ಯವಾದರೆ ನಿರೂಪಕರೇ ಚುಟುಕಾಗಿ ಸ್ವಾಗತ, ವಂದನಾರ್ಪಣೆ ಮಾಡಲಿ.

4.ಹಳೆಯ ವಿಚಾರಗಳು ಇಂದಿನವರಿಗೆ ರುಚಿಸುವುದಿಲ್ಲ. ಅವವೇ ಹಳೇ ಮಾದರಿ ಗೋಷ್ಠಿಗಳ ಬದಲಾಗಿ ಗೋಷ್ಠಿಗಳ ವಿನ್ಯಾಸ ಬದಲಾಗಲಿ. ಹೊಸ ಹೊಸ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿ.

5.ಸ್ಥಳೀಯ ವಿಶೇಷತೆಗಳ ಬಗ್ಗೆ ಗಮನಸೆಳೆಯುವ ಗೋಷ್ಠಿಗಳಿರಲಿ. ಉದಾಹರಣೆಗೆ ಧಾರವಾಡದ ಪೇಡಾ ಬಗ್ಗೆ, ಆ ಪರಂಪರೆ ಬಗ್ಗೆ ಈ ಬಾರಿ ಯಾವ ಗೋಷ್ಠಿಯೂ ನಡೆದ ಹಾಗಿಲ್ಲ.

6.ಸಂಪನ್ಮೂಲ ವ್ಯಕ್ತಿಗಳು ಜನ ಸಾಮಾನ್ಯರ ಜ್ಞಾನ ಹೆಚ್ಚಿಸುವಂತವರಾಗಿರಲಿ. ಮುಖ್ಯವಾಗಿ ಕೃಷಿಗೋಷ್ಠಿಗಳಲ್ಲಿ ಅಕಾಡೆಮಿಕ್‌ ವಲಯದ ಚರ್ಚೆಗಳಿಗಿಂತ ಕೃಷಿ ಕ್ಷೇತ್ರದ ಸಾಧಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆರಿಸಿದರೆ ಅನುಕೂಲ.

7.ಸಮ್ಮೇಳನದ ಅವಿಭಾಜ್ಯ ಅಂಗ ಪುಸ್ತಕ ಪ್ರದರ್ಶನ. ಈ ಪ್ರದರ್ಶನದಲ್ಲಿ ಯಾವ್ಯಾವ ಪುಸ್ತಕ ಮಳಿಗೆಗಳಿವೆ ಎಂಬ ಕುರಿತಾದ ಮಾಹಿತಿ ಪ್ರಧಾನವೇದಿಕೆ ಬಳಿಯೇ ಸಿಗುವಂತಾಗಲಿ. ಲೈಬ್ರರಿಯಲ್ಲಿರುವಂತೆ ಕಂಪ್ಯೂಟರ್‌ ಮೂಲಕ ಸಚ್‌ರ್‍ ಮಾಡುವ ಅವಕಾಶ ಕಲ್ಪಿಸಬಹುದು.

8.ಪುಸ್ತಕ ಮಳಿಗೆಗಳ ಪಕ್ಕ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳಿರಲಿ. ಈ ಬಾರಿ ಪುಸ್ತಕ ಪ್ರದರ್ಶನದಲ್ಲಿ ಜನ ಮೂಲಭೂತ ಸೌಕರ್ಯಕ್ಕಾಗಿ ಅಲೆದಾಡುತ್ತಿದ್ದದ್ದು ಕಂಡುಬಂತು.

9.ಪುಸ್ತಕ ಮಳಿಗೆಗಳ ಪಕ್ಕವೇ ಭೋಜನಾಲಯಕ್ಕೆ ಹೋಗುವ ದಾರಿ ಇಡಬಾರದು, ಇದರಿಂದ ಪುಸ್ತಕ ಪ್ರೇಮಿಗಳಿಗೆ ಹಾಗೂ ಮಾರಾಟಗಾರರಿಗೆ ಸಮಸ್ಯೆಯಾಗುತ್ತದೆ.

10.ಊಟಕ್ಕೋಸ್ಕರ ಬಡಿದಾಟ ತಪ್ಪಲಿ. ನೋಂದಣಿ ಕಡ್ಡಾಯವಾಗಲಿ. 

click me!