
ಬೆಂಗಳೂರು : ರಾಜಕಾರಣ ಮತ್ತು ಆಡಳಿತ ಕ್ಷೇತ್ರಗಳಲ್ಲಿ ದಕ್ಷ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿಅವರ ಸಾವನ್ನು ಸಂಭ್ರಮಿಸುವ ಜನರಿದ್ದಾರೆ ಎಂದು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಬಂಟರ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಮಧುಕರ ಶೆಟ್ಟಿಅವರಿಗೆ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ ಶೆಟ್ಟಿಅವರದು ಸಾಯುವ ವಯಸ್ಸಲ್ಲ. ಅವರು ಇನ್ನಷ್ಟುಕಾಲ ಇದ್ದಿದ್ದರೆ ಮತ್ತಷ್ಟುಉತ್ತಮ ಕಾರ್ಯ ಮಾಡುತ್ತಿದ್ದರು. ಸೃಷ್ಟಿಕರ್ತ ಬಹಳ ಬೇಗ ಕರೆದುಕೊಂಡು ತಪ್ಪು ಮಾಡಿದ. ಕೆಲವರು ಇನ್ನು ನಮಗೆ ಯಾವ ಕಂಟಕವೂ ಇಲ್ಲ ಎಂದು ಮಧುಕರ ಸಾವನ್ನು ಸಂಭ್ರಮಿಸುತ್ತಾರೆ ಎಂದರು.
ನಾನು ಲೋಕಾಯುಕ್ತದಲ್ಲಿ ಇದ್ದಾಗ ಮಧುಕರ ಶೆಟ್ಟಿಬಗ್ಗೆ ಹಲವರು ಹೇಳಿದ್ದರು. ಆಗ ಮಧುಕರ್ ರಾಜ್ಯಪಾಲರಿಗೆ ಎಡಿಸಿ ಆಗಿದ್ದರು. ಅವರನ್ನು ಲೋಕಾಯುಕ್ತ ಸಂಸ್ಥೆಗೆ ಕರೆತರುವಂತೆ ಕೆಲ ಮಿತ್ರರು ಸಲಹೆ ಇತ್ತರು. ಅದರಂತೆ ಮಧುಕರ ಅವರನ್ನು ಸಂಪರ್ಕಿಸಿ ಲೋಕಾಯುಕ್ತಕ್ಕೆ ಬರುವಂತೆ ಆಹ್ವಾನಿಸಿದಾಗ ಒಪ್ಪಿಕೊಂಡಿದ್ದರು.
ಬಳಿಕ ಸರ್ಕಾರಕ್ಕೆ ಮನವಿ ಮಾಡಿ ಅವರನ್ನು ಲೋಕಾಯುಕ್ತಕ್ಕೆ ಕರೆಸಿಕೊಂಡೆ. ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ಮಧುಕರ ಲೋಕಾಯುಕ್ತಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಗಣಿ ಹಗರಣದಲ್ಲಿ ಸತ್ಯಾಂಶ ಹೊರತೆಗೆಯಲು ಕಷ್ಟಪಟ್ಟಅಧಿಕಾರಗಳ ಪೈಕಿ ಮಧುಕರ ಕೂಡ ಒಬ್ಬರು. ವಿಮಾನ ನಿಲ್ದಾಣದ ಆಸುಪಾಸಿನಲ್ಲಿ ರೈತರನ್ನು ಬೆದರಿಸಿ, ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸಿದ್ದ ಮಂತ್ರಿ ಹಾಗೂ ಅವರ ಮಗನನ್ನು ಜೈಲಿಗೆ ಕಳುಹಿಸುವಲ್ಲಿ ಸಾಕಷ್ಟುಶ್ರಮಿಸಿದ್ದರು ಎಂದು ಸ್ಮರಿಸಿದರು.
ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ, ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್, ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿ ಮಧುಕರ ಎಂ.ಶೆಟ್ಟಿ, ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.