ಇಂದಿನಿಂದ 10 ದಿನ ಮಳೆಗಾಲದ ಅಧಿವೇಶನ: ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜು

By Suvarna Web DeskFirst Published Jun 5, 2017, 8:59 AM IST
Highlights

ಹಲವು ವಿಷಯಗಳ ಚರ್ಚೆಗೆ ವೇದಿಕೆಯಾಗಲಿರುವ ಮಳೆಗಾಲದ ವಿಧಾನಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರದ ಮುಗಿ ಬೀಳಲು ವಿಪಕ್ಷಗಳು ರೆಡಿಯಾಗಿವೆ. ಸರ್ಕಾರ ಕೂಡ ಪ್ರತಿಪಕ್ಷ ಗಳ ಅಸ್ತ್ರಕ್ಕೆ  ಪ್ರತ್ಯಸ್ತ್ರಗಳೊಡನೆ ಹೋರಾಟಕ್ಕೆ ಸಜ್ಜಾಗಿದೆ.

ಬೆಂಗಳೂರು(ಜೂ.05): ಹಲವು ವಿಷಯಗಳ ಚರ್ಚೆಗೆ ವೇದಿಕೆಯಾಗಲಿರುವ ಮಳೆಗಾಲದ ವಿಧಾನಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರದ ಮುಗಿ ಬೀಳಲು ವಿಪಕ್ಷಗಳು ರೆಡಿಯಾಗಿವೆ. ಸರ್ಕಾರ ಕೂಡ ಪ್ರತಿಪಕ್ಷ ಗಳ ಅಸ್ತ್ರಕ್ಕೆ  ಪ್ರತ್ಯಸ್ತ್ರಗಳೊಡನೆ ಹೋರಾಟಕ್ಕೆ ಸಜ್ಜಾಗಿದೆ.

 

ಇಂದಿನಿಂದ 10 ದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಯಲಿದೆ. ಸರ್ಕಾರದ ವೈಫಲ್ಯಗಳನ್ನು ಹಿಡಿದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಲು ವಿಪಕ್ಷಗಳು ಸಜ್ಜಾಗಿವೆ. ರಾಜ್ಯ ಪ್ರವಾಸ ಮಾಡಿರುವ ಬಿಜೆಪಿ ಬರ ಪರಿಹಾರ ಕಾಮಗಾರಿ ವಿವರ ಇಟ್ಟುಕೊಂಡು ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡ ರೈತರ ಸಾಲಮನ್ನಾ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಸರ್ಕಾರ ಬೆವರಿಳಿಸಲು ತಯಾರಾಗಿದ್ದಾರೆ.

ವಿಪಕ್ಷಗಳ ಬತ್ತಳಿಕೆಯಲ್ಲೇನಿದೆ?

. ರಾಜ್ಯ ಬರ ಪರಿಹಾರ ವಿವರ

. ರೈತರ ಸಾಲಮನ್ನಾ ವಿಚಾರ

. ಉಡುಪಿ ಡಿಸಿ, ಎಸಿ ಮೇಲೆ ಮರಳು ಮಾಫಿಯಾ ದಾಳಿ

. ಆರ್ ಎಸ್ ಎಸ್, ಬಿಜೆಪಿ ಕಾರ್ಯಕರ್ತರ ಕೊಲೆ

. ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು

. ಮೆಗ್ಗಾನ್ ಆಸ್ಪತ್ರೆ ನರಕ ದರ್ಶನ

ಹೀಗೆ ಹಲವಾರು ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿವೆ. ಅದರಲ್ಲೂ  ೇಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣವನ್ನು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಲು ಸಿದ್ದತೆ ನಡೆಸಿದೆ. ಸರ್ಕಾರ ಕೂಡ ವಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರ ನೀಡಲು ಸಜ್ಜುಗೊಂಡಿದೆ.

ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್​.

click me!