ಮಹಿಳೆ ಸೇರಿ 9 ಆತ್ಮಾಹುತಿ ಬಾಂಬರ್‌ಗಳಿಂದ ದಾಳಿ!

By Web DeskFirst Published Apr 25, 2019, 9:22 AM IST
Highlights

ಮಹಿಳೆ ಸೇರಿ 9 ಆತ್ಮಾಹುತಿ ಬಾಂಬರ್‌ಗಳಿಂದ ದಾಳಿ!| ಬಾಂಬರ್‌ಗಳು ಎನ್‌ಟಿಜೆಯ ಉಪ ಸಂಘಟನೆಗೆ ಸೇರಿದವರು| ಬಾಂಬರ್‌ಗಳು ಶಿಕ್ಷಿತರು, ಮಧ್ಯಮ, ಸಿರಿವಂತ ಕುಟುಂಬದವರು

ಕೊಲಂಬೋ[ಏ.25]: 359 ಜನರನ್ನು ಬಲಿಪಡೆದ ಲಂಕಾ ಸರಣಿ ಸ್ಫೋಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ 9 ಆತ್ಮಾಹುತಿ ಬಾಂಬರ್‌ಗಳು ಇದ್ದರು ಎಂದು ಶ್ರೀಲಂಕಾ ಸರ್ಕಾರ ಬಹಿರಂಗಪಡಿಸಿದೆ. ಜೊತೆಗೆ ಈ ಮೊದಲು ಅಂದುಕೊಂಡಂತೆ ಇವರಾರ‍ಯರು ನೇರವಾಗಿ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆಗೆ ಸೇರಿದವರಲ್ಲ. ಬದಲಾಗಿ ಅದರದ್ದೇ ಉಪ ಪಂಗಡಗಳಿಗೆ ಸೇರಿದವರು. ಬಹುತೇಕ ಉಗ್ರರು ಶಿಕ್ಷಿತರಾಗಿದ್ದು, ಈ ಪೈಕಿ ಕೆಲವರು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದರೆ, ಇನ್ನು ಕೆಲವರು ಶ್ರೀಮಂತ ಕುಟುಂಬದಿಂದ ಬಂದವರು ಎಂದು ಸರ್ಕಾರ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಲಂಕಾದ ರಕ್ಷಣಾ ಸಚಿವ ರುವಾನ್‌ ವಿಜೆವರ್ದೆನೆ, ದಾಳಿ ನಡೆಸುವ ಕುರಿತು ಸಂಘಟನೆಯ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ದಾಳಿಕೋರರ ತಂಡ ಎನ್‌ಟಿಜೆಯಿಂದ ಹೊರಬಂದಿತ್ತು. ಸದ್ಯಕ್ಕೆ ಈ ಗುಂಪಿಗೆ ಯಾವುದೇ ವಿದೇಶಿ ನಂಟಿನ ಸುಳಿವು ಸಿಕ್ಕಿಲ್ಲ. ಆದರೆ ಈ ಕುರಿತು ಸರ್ಕಾರ ಸಮಗ್ರವಾಗಿ ತನಿಖೆ ನಡೆಸುತ್ತಿದೆ. ದಾಳಿಯಲ್ಲಿ 8 ಪುರುಷರು ಭಾಗಿಯಾಗಿದ್ದರು. ಇನ್ನು 9ನೇ ಬಾಂಬರ್‌ ಆಗಿದ್ದ ಮಹಿಳೆ, ಓರ್ವ ದಾಳಿಕೋರನ ಪತ್ನಿ ಎಂಬುದು ಪ್ರಾಥಮಿಕ ತನಿಖೆಯಿಂದ ಖಚಿತಪಟ್ಟಿದೆ ಎಂದು ಹೇಳಿದರು.

ದಾಳಿ ಪ್ರಕರಣ ಸಂಬಂಧ ಈವರೆಗೆ 60 ಜನರನ್ನು ಬಂಧಿಸಲಾಗಿದೆ. ಇವರೆಲ್ಲರೂ ಲಂಕಾ ಮೂಲದವರು. ಲಂಕಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟುದಾಳಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದೇ ಕಾರಣಕ್ಕಾಗಿ ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿಯನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದರು.

click me!