1 ಲೀಟರ್‌ ಪೆಟ್ರೋಲ್‌ ಉಚಿತ : ಭರ್ಜರಿ ಆಫರ್

Published : Sep 22, 2018, 10:04 AM IST
1 ಲೀಟರ್‌ ಪೆಟ್ರೋಲ್‌ ಉಚಿತ : ಭರ್ಜರಿ ಆಫರ್

ಸಾರಾಂಶ

ಇಲ್ಲಿ ಒಂದು ಕೆಜಿ ಕೇಕ್ ಕೊಂಡರೆ ಅದರ ಜೊತೆಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ತಮಿಳುನಾಡಿನ ಬೇಕರಿ ಮಾಲಿಕರೋರ್ವರು ಘೋಷಿಸಿದ್ದಾರೆ. 

ಚೆನ್ನೈ: ಪೆಟ್ರೋಲ್‌ ಬೆಲೆ ಗಗನಕ್ಕೇರಿದ ಮೇಲೆ ಅದನ್ನು ಉಡುಗೊರೆಯಾಗಿ ನೀಡುವುದು ಹೊಸ ಸಂಪ್ರದಾಯವಾಗಿದೆ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ನವದಂಪತಿಗೆ, ಸ್ನೇಹಿತರು 5 ಲೀಟರ್‌ ಪೆಟ್ರೋಲ್‌ ನೀಡಿ ಸುದ್ದಿಯಾಗಿದ್ದರು. 

ಇದೀಗ ತಮಿಳುನಾಡಿನ ಚೆನ್ನೈನ ಬೇಕರಿ ಮಾಲೀಕರೊಬ್ಬರು 499 ರು.ನ ಒಂದು ಕೆಜಿ ಕೇಕ್‌ ಖರೀದಿ ಮಾಡಿದವರಿಗೆ 1 ಲೀ.ಪೆಟ್ರೋಲ್‌ ಉಚಿತ ನೀಡುವುದಾಗಿ ಘೋಷಿಸಿ ಜನರನ್ನು ಸೆಳೆಯುವ ಯತ್ನ ಮಾಡಿದ್ದಾರೆ.

ಅಲ್ಲದೇ ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಕೃಷ್ಣಗಿರಿಯ ರಾಯಕೊಟ್ಟೈ ರಸ್ತೆಯಲ್ಲಿನ ಎಚ್‌ಪಿ ಪೆಟ್ರೋಲ್ ಪಂಪ್ ನಲ್ಲಿ ಈ ವಿಶೇಷ ಕೊಡುಗೆ ನೀಡಲಾಗಿತ್ತು. ನಗದು ರಹಿತ ವಹಿವಾಟು ಉತ್ತೇಜನಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!