ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

Published : Sep 20, 2019, 08:02 AM IST
ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

ಸಾರಾಂಶ

ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

ನವದೆಹಲಿ [ಸೆ.20]: ಆರೋಗ್ಯಕ್ಕೆ ಮಾರಕವಾಗಿರುವ ಇ-ಸಿಗರೆಟ್‌ ನಿಷೇಧಿಸಲು ಬುಧವಾರವಷ್ಟೇ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಗುರುವಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

ಮೊದಲ ಬಾರಿಯ ತಪ್ಪಿತಸ್ಥರಿಗೆ ಒಂದು ವರ್ಷದವರೆಗೂ ಜೈಲು ಹಾಗೂ 1 ಲಕ್ಷ ರು. ದಂಡ ವಿಧಿಸಬಹುದಾಗಿದೆ. ಅಪರಾಧ ಪುನರಾವರ್ತನೆಯಾದರೆ ಮೂರು ವರ್ಷಗಳವರೆಗೆ ಜೈಲು ಹಾಗೂ 5 ಲಕ್ಷ ರು. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಇ- ಸಿಗರೆಟ್‌ ದಾಸ್ತಾನು ಇಟ್ಟಿದ್ದು ಕಂಡು ಬಂದರೆ ಆರು ತಿಂಗಳು ಜೈಲು ಹಾಗೂ 50 ಸಾವಿರ ರು. ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಅಲ್ಲದೇ ಅಕ್ರಮವಾಗಿ ಇ- ಸಿಗರೆಟ್‌ ದಾಸ್ತಾನು ಇಟ್ಟಮಳಿಗೆಗಳ ಮೇಲೆ ಶೋಧ ನಡೆಸಲು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಅಧಿಕಾರಿಗಳಿಗೆ ಸುಗ್ರೀವಾಜ್ಞೆ ಅಧಿಕಾರವನ್ನು ನೀಡಲಾಗಿದೆ. ಅಂಗಡಿಕಾರರು ತಮ್ಮ ಬಳಿ ಇ- ಸಿಗರೆಟ್‌ ದಾಸ್ತಾನು ಇಟ್ಟುಕೊಂಡಿದ್ದರೆ ಕೂಡಲೇ ಸ್ವಯಂಪ್ರೇರಿತವಾಗಿ ಅವುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇ- ಸಿಗರೆಟ್‌ಗಳನ್ನು ಬಳಕೆಯನ್ನು ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಬುಧವಾರದಂದು ನಿರ್ಣಯ ಅಂಗೀಕರಿಸಿತ್ತು. ಇದೇ ವೇಳೆ ಇ- ಸಿಗರೆಟ್‌ ಬಳಕೆದಾರರ ಸಂಘಟನೆ ಅಸೋಸಿಯೇಷನ್‌ ಆಫ್‌ ವ್ಯಾಪ​ರ್ಸ್ ಇಂಡಿಯಾ ಸರ್ಕಾರದ ನಿರ್ಧಾರವನ್ನು ಖಂಡಿಸಿದೆ. ಇದು ಭಾರತದಲ್ಲಿರುವ 11 ಕೋಟಿ ಇ- ಸಿಗರೆಟ್‌ ಬಳಕೆದಾರರಿಗೆ ಕರಾಳ ದಿನ ಎಂದು ಆರೋಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು