ಗೋವಾದಲ್ಲಿ ಸೇತುವೆ ಕುಸಿದು 30 ಕ್ಕೂ ಹೆಚ್ಚು ಮಂದಿ ನಾಪತ್ತೆ; ಕನಿಷ್ಠ 1 ಸಾವು

By Suvarna Web DeskFirst Published May 18, 2017, 10:06 PM IST
Highlights

ಗೋವಾದ ದಕ್ಷಿಣ ಭಾಗದಲ್ಲಿರುವ ಚರ್ಚೋರಂನಲ್ಲಿರುವ ಪೋರ್ಚುಗೀಸರ ಕಾಲದ ಸೇತುವೆಯೊಂದು ಇಂದು ಸಂಜೆ ಕುಸಿದು 30 ಮಂದಿ ನದಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಪಣಜಿ (ಮೇ.18): ಗೋವಾದ ದಕ್ಷಿಣ ಭಾಗದಲ್ಲಿರುವ ಚರ್ಚೋರಂನಲ್ಲಿರುವ ಪೋರ್ಚುಗೀಸರ ಕಾಲದ ಸೇತುವೆಯೊಂದು ಇಂದು ಸಂಜೆ ಕುಸಿದು 30 ಮಂದಿ ನದಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ನೌಕಾದಳವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ರಕ್ಷಣಾ ಕಾರ್ಯದ  ಬಗ್ಗೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದಾರೆ.

ನದಿಯಿಂದ ಕೆಳಗೆ ಬಿದ್ದ ಯುವಕನೊಬ್ಬನನ್ನು ರಕ್ಷಿಸಲು ಪೊಲೀಸರು ನದಿಗೆ ಧುಮುಕಿದ್ದಾರೆ. ಇದನ್ನು ನೋಡಲು ಸಾಕಷ್ಟು ಜನ ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸೇತುವೆ ಕುಸಿದು ಸುಮಾರು 30 ಜನ ನದಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ರಕ್ಷಣಾ ಹಾಗೂ ಶೋಧ ಕಾರ್ಯ ಮುಂದುವರೆದಿದೆ.

(ಫೋಟೋ ಕೃಪೆ: ಎನ್ ಡಿಟಿವಿ)

click me!