ಯುದ್ಧೋಪಕರಣ ಖರೀದಿಗಾಗಿ ಸೇನೆಯಲ್ಲಿ 1.5 ಲಕ್ಷ ಹುದ್ದೆ ಕಡಿತ?

Published : Sep 11, 2018, 08:18 AM ISTUpdated : Sep 19, 2018, 09:22 AM IST
ಯುದ್ಧೋಪಕರಣ ಖರೀದಿಗಾಗಿ ಸೇನೆಯಲ್ಲಿ 1.5 ಲಕ್ಷ ಹುದ್ದೆ ಕಡಿತ?

ಸಾರಾಂಶ

ಉದ್ಯೋಗ ಕಡಿತಕ್ಕೆ ಮುಂದಾದ ಭಾರತೀಯ ಸೇನೆ | 1.5 ಲಕ್ಷ ಜನರ ಉದ್ಯೋಗ ಕಡಿತ ಸಾಧ್ಯತೆ | ಸೇನಾ ಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಭವಿಷ್ಯದ ಯುದ್ಧಗಳಿಗೆ ಸನ್ನದ್ಧಗೊಳಿಸುವ ಉದ್ದೇಶದೊಂದಿಗೆ ಸೇನಾ ಸಿಬ್ಬಂದಿ ಪರಿಶೀಲನೆ ಕಾರ್ಯಾಚರಣೆ ಆರಂಭ  

ನವದೆಹಲಿ (ಸೆ. 11): ಭಾರತೀಯ ಸೇನೆ ಈಗ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಪರಿಣಾಮವಾಗಿ ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಭಾರತೀಯ ಸೇನೆಯು ಯೋಧರ ಸಂಖ್ಯೆಯನ್ನು 1.50 ಲಕ್ಷದಷ್ಟು ಕಡಿತಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

ಸೇನಾ ಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಭವಿಷ್ಯದ ಯುದ್ಧಗಳಿಗೆ ಸನ್ನದ್ಧಗೊಳಿಸುವ ಉದ್ದೇಶದೊಂದಿಗೆ ಸೇನಾ ಸಿಬ್ಬಂದಿ ಪರಿಶೀಲನೆ ಕಾರ್ಯಾಚರಣೆಯನ್ನು ಸೇನೆ ಆರಂಭಿಸಿದೆ. ಜೂ.21 ರಂದು ಈ ಕುರಿತು ಆದೇಶವಾಗಿದ್ದು, ಲೆ|ಜ| ಜೆ.ಎಸ್. ಸಂಧು ನೇತೃತ್ವದಲ್ಲಿ 11 ಸದಸ್ಯರ ತಂಡ ರಚಿಸಲಾಗಿದೆ.

ಈ ತಂಡ ಮಾಸಾಂತ್ಯಕ್ಕೆ ಪ್ರಾಥಮಿಕ ಹಾಗೂ ನವೆಂಬರ್ಗೆ ಅಂತಿಮ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಸದ್ಯ ಸೇನೆಯಲ್ಲಿ 12 ಲಕ್ಷ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಘಟಕಗಳನ್ನು ವಿಲೀನಗೊಳಿಸಿದರೆ 2 ವರ್ಷಗಳಲಿ 50 ಸಾವಿರ ಉದ್ಯೋಗಗಳು ಕಡಿತವಾಗುತ್ತವೆ. 2022-23 ರ ವೇಳೆಗೆ ಇನ್ನೂ 1 ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸಬಹುದೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ