SURIYA: 'ಇನ್ನು ಹೀರೋ ಆಗಿ ಮಾಡ್ಬೇಕಾ? ವಿಲನ್‌ ಆಗ್ಬೇಕಾ?' ಈ ಪ್ರಶ್ನೆ ಕೇಳಿದ್ಯಾಕೆ ತಮಿಳು ಸ್ಟಾರ್ ನಟ ಸೂರ್ಯ?

Published : Nov 03, 2026, 12:51 PM IST
Suriya Rolex

ಸಾರಾಂಶ

'ವಿಕ್ರಮ್' ಸಿನಿಮಾದ ಕೊನೆಯ ಭಾಗದಲ್ಲಿ ಸೂರ್ಯ ಅವರು ರೋಲೆಕ್ಸ್ ಎಂಬ ಭಯಾನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಮಂದಿರಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕೆಲವೇ ನಿಮಿಷಗಳ ಅವರ ಪಾತ್ರವೇ ಪ್ರೇಕ್ಷಕರ ಮನಸ್ಸಿನಲ್ಲಿ ದೊಡ್ಡ ಕುತೂಹಲ ಮೂಡಿಸಿತ್ತು. ಇನ್ಮುಂದೆ ‘ರೋಲೆಕ್ಸ್‌’ ಬರಲಿದೆ.

ರೋಲೆಕ್ಸ್ ಸಿನಿಮಾದಲ್ಲಿ ಸೂರ್ಯ ಹೀರೋನಾ ಅಥವಾ ವಿಲನ್ನಾ? ಪ್ರೇಕ್ಷಕರ ಮುಂದೆಯೇ ಪ್ರಶ್ನೆ ಕೇಳಿದ ನಟ!

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Suriya) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ಹೊಸ ಕಥೆಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಅವರು, ಮತ್ತೊಂದೆಡೆ ಲೋಕೇಶ್ ಕನಗರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್‌ನ ಬಹುನಿರೀಕ್ಷಿತ 'ರೋಲೆಕ್ಸ್' ಚಿತ್ರದ (Rolex Movie) ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಬಹಳ ದಿನಗಳಿಂದ ಮನೆಮಾಡಿದೆ. ಇದೀಗ ಸ್ವತಃ ಸೂರ್ಯ ಅವರೇ ಈ ಪ್ರಶ್ನೆಗೆ ಪ್ರೇಕ್ಷಕರಿಂದ ಉತ್ತರ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ತಮ್ಮ ಮುಂಬರುವ 'ಸೀನ್' ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸೂರ್ಯ ಅವರಿಗೆ ಅಭಿಮಾನಿಗಳು ರೋಲೆಕ್ಸ್ ಚಿತ್ರದ ಅಪ್‌ಡೇಟ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಟ, ತಾವು ಈ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಬೇಕಾ ಅಥವಾ ವಿಲನ್ ಆಗಿ ನಟಿಸಬೇಕಾ ಎಂದು ನೆರೆದಿದ್ದ ಪ್ರೇಕ್ಷಕರನ್ನೇ ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ಬಹುತೇಕರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸೂರ್ಯ, 'ತುಂಬಾ ದಿನಗಳಿಂದ ಹೀರೋ ಆಗಿಯೇ ನಟಿಸಿದ್ದೇನೆ. ಈಗ ವಿಲನ್ ಆಗಿ ಮಾಡೋಣವೇ?' ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಮೂಲಕ ರೋಲೆಕ್ಸ್ ಪಾತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.

ಏನಿದು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್?

ನಿರ್ದೇಶಕ ಲೋಕೇಶ್ ಕನಗರಾಜ್ ತಮ್ಮದೇ ಆದ ಸಿನಿಮ್ಯಾಟಿಕ್ ಯೂನಿವರ್ಸ್ ಮೂಲಕ ತಮಿಳು ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಈ ಯೂನಿವರ್ಸ್‌ನಲ್ಲಿ ಮೊದಲಿಗೆ ಬಿಡುಗಡೆಯಾದ ಸಿನಿಮಾ ಕಾರ್ತಿ ಅಭಿನಯದ 'ಕೈದಿ'. ಆರಂಭದಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯದಿದ್ದರೂ, ನಂತರ ಕಮಲ್ ಹಾಸನ್ ನಟನೆಯ 'ವಿಕ್ರಮ್' ಬಿಡುಗಡೆಯಾದ ಬಳಿಕ ಕೈದಿ ಚಿತ್ರದ ಬಗ್ಗೆಯೂ ಪ್ರೇಕ್ಷಕರ ಆಸಕ್ತಿ ಹೆಚ್ಚಾಯಿತು.

'ವಿಕ್ರಮ್' ಸಿನಿಮಾದ ಕೊನೆಯ ಭಾಗದಲ್ಲಿ ಸೂರ್ಯ ಅವರು ರೋಲೆಕ್ಸ್ ಎಂಬ ಭಯಾನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಮಂದಿರಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕೆಲವೇ ನಿಮಿಷಗಳ ಅವರ ಪಾತ್ರವೇ ಪ್ರೇಕ್ಷಕರ ಮನಸ್ಸಿನಲ್ಲಿ ದೊಡ್ಡ ಕುತೂಹಲ ಮೂಡಿಸಿತ್ತು. ಬಳಿಕ ವಿಜಯ್ ಅಭಿನಯದ 'ಲಿಯೋ' ಕೂಡ ಈ ಸಿನಿಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿ ಗುರುತಿಸಿಕೊಂಡಿತು.

ರೋಲೆಕ್ಸ್ ಸಿನಿಮಾ ಯಾವಾಗ?

ಸದ್ಯ ಈ ಯೂನಿವರ್ಸ್‌ನ ಮುಂದಿನ ಭಾಗಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 'ವಿಕ್ರಮ್ 2', 'ಲಿಯೋ 2' ಹಾಗೂ ಸೂರ್ಯ ಅಭಿನಯದ 'ರೋಲೆಕ್ಸ್' ಸಿನಿಮಾಗಳು ಬರಲಿವೆ ಎಂಬ ನಿರೀಕ್ಷೆಯಿದೆ. ಆದರೆ ಈ ಚಿತ್ರಗಳ ಕುರಿತ ಸಂಪೂರ್ಣ ಅಧಿಕೃತ ಮಾಹಿತಿ ಮತ್ತು ಬಿಡುಗಡೆ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನೊಂದೆಡೆ ಸೂರ್ಯ ಕೂಡ ಇತ್ತೀಚಿನ ಸಿನಿಮಾಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. 'ಕರುಪ್ಪು', 'ವಿಶ್ವನಾಥ್ & ಸನ್ಸ್' ಸೇರಿದಂತೆ ಹಲವು ಚಿತ್ರಗಳ ಮೂಲಕ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇದರ ಜೊತೆಗೆ ನಟಿ ನಜ್ರಿಯಾ ಜೊತೆಗಿನ 'ಸೀನ್' ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

ಅಂದಹಾಗೆ, ರೋಲೆಕ್ಸ್ ಸಿನಿಮಾದಲ್ಲಿ ಸೂರ್ಯ ಮತ್ತೊಮ್ಮೆ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಅಥವಾ ಈ ಬಾರಿ ಕಥೆಯಲ್ಲಿ ಹೊಸ ತಿರುವು ಇರಲಿದೆಯಾ? ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ. ಪ್ರೇಕ್ಷಕರೇ ವಿಲನ್ ಪಾತ್ರಕ್ಕೆ ಒಲವು ತೋರಿಸಿರುವುದರಿಂದ ಲೋಕೇಶ್ ಕನಗರಾಜ್ ಅವರ ಮುಂದಿನ ನಡೆ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿವಾದದ ಸುಳಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಮೊದಲ ಸಿನಿಮಾ; ನಿರ್ದೇಶಕನಿಗೇ ಗೇಟ್ ಪಾಸ್ ಕೊಟ್ರಾ!?
2026ರ ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಸೌತ್ ನಟಿ; 300, 350, 500 ಕೋಟಿ ಕಲೆಕ್ಷನ್ಸ್