ಹಿರಿಯ ನಟಿ ಹಾಗೂ ಜಾನಪದ ಗಾಯಕಿ ಮುನಿಯಮ್ಮ ನಿಧನ!

By Suvarna News  |  First Published Mar 30, 2020, 12:00 PM IST

ತಮಿಳು ಚಿತ್ರರಂಗದ ಹಿರಿಯ ನಟಿ ಮುನಿಯಮ್ಮ (83)  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಮಧುರೈನ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. 


ದೇವಾಲಯಗಳಲ್ಲಿ ಜಾನಪದ ಗೀತೆಗಳನ್ನು ಹೇಳುವ ಮೂಲಕ ಬದುಕು ಕಟ್ಟಿಕೊಂಡಿದ್ದ  ಗಾಯಕಿ ಪರವಾಯಿ ಮುನಿಯಮ್ಮ ಹಲವು ವರ್ಷಗಳಿಂದ  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.  ಮಾರ್ಚ್‌ 29ರಂದು ತಮ್ಮ ಮಧುರೈ ನಿವಾಸದಲ್ಲಿ ನಿಧನರಾಗಿದ್ದಾರೆ.

 ಅಂತಿಮ ವಿಧಿ ವಿಧಾನಗಳನ್ನು ನೆರೆವೇರಿಸಿದ ಪುತ್ರ, ಮುನಿಯಮ್ಮನವರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಚಿತ್ರರಂಗದ ಹಿರಿಯ ಕಲಾವಿದರು ಮುನಿಯಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Tap to resize

Latest Videos

ಕಲಾವಿದ, ಭಿತ್ತಿಚಿತ್ರ ರಚನೆಕಾರ ಮತ್ತು ವಾಸ್ತುಶಿಲ್ಪಿ ಸತೀಶ್‌ ಗುಜ್ರಾಲ್‌ಗೆ ನುಡಿ ನಮನ

ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುನಿಯಮ್ಮ, ಕಳೆದ ವರ್ಷವೇ ಆಸ್ಪತ್ರೆಗೆ ದಾಖಲಾಗಿದ್ದು ನಿಧನರಾಗಿದ್ದಾರೆ, ಎಂಬ ಸುಳ್ಳು ಸುದ್ದಿ ಹಬ್ಬಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರು ವಿಡಿಯೋ ಮೂಲಕ ಮುನಿಯಮ್ಮನವರ ಆರೋಗ್ಯ ವದಂತಿಗೆ ಬ್ರೇಕ್‌ ಹಾಕಿದ್ದರು. 

ದೇವಾಲಯದಲ್ಲಿ ಹಾಡೇಳುತ್ತಿದ್ದ ಮುನಿಯಮ್ಮ ಲಕ್ಷ್ಮಣ್‌ ಶ್ರುತಿ ಆರ್ಕೇಸ್ಟ್ರಾ ಸೇರಿಕೊಂಡು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಾ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು ಹಾಗೂ 2003ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹಿರಿಯ ನಿರ್ದೇಶಕ, ನಟ ಎಂ.ಆರ್‌. ವಿಶ್ವನಾಥನ್‌ ನಿಧನ

click me!