ಸುಶಾಂತ್ ಹಳೆ ಸಿನಿಮಾ ನೋಡೋರಿಗೆ ಕ್ಲಾಸ್ ತೆಗೆದುಕೊಂಡ ನಟಿ!

By Suvarna News  |  First Published Jul 28, 2020, 4:44 PM IST

ಭಾರೀ ಜನ ಮೆಚ್ಚುಗೆ ಪಡೆದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದ ಕೊನೆಯ ಸಿನಿಮಾ ದಿಲ್ ಬೇಚಾರಾ| ಸುಶಾಂತ್ ಮರೆಯಲಾಗದೆ ಹಳೆ ಸಿನಿಮಾಗಳನ್ನೂ ನೊಡುತ್ತಿದ್ದಾರೆ ಅಭಿನಮಾನಿಗಳು| ಸುಶಾಂತ್ ಹಳೆ ಸಿನಿಮಾ ವೀಕ್ಷಿಸುತ್ತಿರುವವರ ವಿರುದ್ಧ ಕಿಡಿ ಕಾರಿದ ನಟಿ ಮುಖರ್ಜಿ


ಮುಂಬೈ(ಜು.28): ಸುಶಾಂತ್ ಸಿಂಗ್ ರಜಪೂತ್‌ರವರ ಕೊನೆ ಸಿನಿಮಾ ದಿಲ್ ಬೇಚಾರ ಶುಕ್ರವಾರವಷ್ಟೇ ರಿಲೀಸ್ ಆಗಿದೆ. ಈ ಸಿನಿಮಾ ವೀಕ್ಷಕರಿಗೆ ಬಹಳಷ್ಟು ಹಿಡಿಸಿದೆ. ಹೀಗಿರುವಾಗ ಅನೇಕ ಮಂದಿ ಅವರ ಹಳೆ ಸಿನಿಮಾಗಳನ್ನೂ ನೋಡಲಾರಂಭಿಸಿದ್ದಾರೆ. ಸುಶಾಂತ್ ನಿಧನದ ಬಳಿಕ ಜನರು ಅವರನ್ನೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆಂದರೆ ಬಾಕ್ಸಾಪೀಸ್‌ನಲ್ಲಿ ಮಕಾಡೆ ಮಲಗಿದ ಸಿನಿಮಾಗಳನ್ನೂ ನೋಡಲಾರಂಭಿಸಿದ್ದಾರೆ. ಹೀಗಿರುವಾಗ ಈ ವಿಚಾರ ಸಂಬಂಧ ಬಾಲಿವುಡ್ ನಟಿ ಹಾಗೂ ಸುಶಾಂತ್‌ರವರ ಕೊನೆ ಸಿನಿಮಾದಲ್ಲಿ ನಟಿಸಿದ್ದ ಸಹ ನಟಿ ಸ್ವಸ್ತಿಕಾ ಮುಖರ್ಜಿ ಟ್ವೀಟ್ ಒಂದನ್ನು ಮಾಡುತ್ತಾ ಸುಶಾಂತ್ ಹಳೆ ಸಿನಿಮಾ ನೋಡುತ್ತಿರುವವರ ವಿರುದ್ಧ ಕಿಡಿ ಕಾರಿದ್ದಾರೆ/.

Thousands and literally thousands of people are watching now. NOW is the word that’s most important.
Where were all of them when the film released I wonder ?!
Regret is better and bigger than gratitude 😊

— Swastika Mukherjee (@swastika24)

ಸ್ವಸ್ತಿಕಾ ಮುಖರ್ಜಿ ತಮ್ಮ ಟ್ವೀಟ್ ಒಂದರಲ್ಲಿ 'ಸಾವಿರಾರು ಮಂದಿ ಈಗ ಡಿಟೆಕ್ಟಿವ್ ಬ್ಯೋಂಕೇಶ್ ಬಕ್ಷೀ ಸಿನಿಮಾ ನೋಡಲಾರಂಭಿಸಿದ್ದಾರೆ. ಆದರೀಗ ಮಾತನಾಡುವುದು ಬಹಳ ಅಗತ್ಯ. ಸಿನಿಮಾ ರಿಲೀಸ್ ಆದಾಗ ಇವರೆಲ್ಲರೂ ಎಲ್ಲಿಗೆ ಹೋಗಿದ್ದರೆಂದು ಆಶ್ಚರ್ಯವಾಗುತ್ತಿದೆ. ಕೃತಜ್ಞತೆ ತೋರಿಸುವುದಕ್ಕಿಂತ ಪಶ್ಚಾತಾಪ ವ್ಯಕ್ತಪಡಿಸುವುದೇ ಬಹಳ ದೊಡ್ಡದು' ಎಂದಿದ್ದಾರೆ. ಅವರ ಈ ಟ್ವೀಟ್‌ಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Tap to resize

Latest Videos

ಸ್ವಸ್ತಿಕಾ ಮುಖರ್ಜಿಯವರು ಸುಶಾಂತ್ ಸಿಂಗ್ ರಜಪೂತ್‌ ಜೊತೆ ದಿಲ್ ಬೆಚಾರಾ ಹಾಗೂ ಡಿಟೆಕ್ಟಿವ್ ಬ್ಯೋಂಕೇಶ್ ಬಕ್ಷೀ ಈ ಎರಡೂ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಡಿಟೆಕ್ಟಿವ್ ಬ್ಯೋಂಕೇಶ್ ಬಕ್ಷೀ ಸಿನಿಮಾ ಪ್ಲಾಪ್ ಆಗಿತ್ತೆಂಬುವುದು ಉಲ್ಲೇಖನೀಯ.

click me!