
ಶಿವಮೊಗ್ಗ (ಸೆ.16): ಭದ್ರಾವತಿಯಲ್ಲಿ 150 ನಾಯಿಗಳನ್ನು ಜೀವಂತವಾಗಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಐಂದ್ರಿತಾ ರೈ, ರಕ್ಷಿತ್ ಶೆಟ್ಟಿಸೇರಿ ಹಲವು ಕನ್ನಡ ಸಿನಿಮಾ ನಟ-ನಟಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಟ್ವಿಟರ್ ಮೂಲಕ ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಟ್ವೀಟ್ ಮಾಡಿರುವ ಐಂದ್ರಿತಾ, ಇದು ನಿಜವಾಗಿಯೂ ಮನಸ್ಸು ಕದಡುವ ಸುದ್ದಿ ಎಂದಿದ್ದಾರೆ.
150 ನಾಯಿಗಳ ಜೀವಂತ ಸಮಾಧಿ ಪ್ರಕರಣ : 12 ಜನರ ಬಂಧನ
ಜತೆಗೆ ರಿಪ್ ಮ್ಯಾನ್ಸ್ ಬೆಸ್ಟ್ ಫ್ರೆಂಡ್ ಎಂದು ಹಾಷ್‌ಟ್ಯಾಗ್ ಬಳಸಿ ಕಮೆಂಟ್ ಮಾಡಿರುವ ಅವರು, ಕಿಚ್ಚಸುದೀಪ್, ರಕ್ಷಿತ್ ಶೆಟ್ಟಿ, ನಟ ಗಣೇಶ್, ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಟ್ವೀಟ್ ಮಾಡಿ ಇದರ ವಿರುದ್ಧ ಧ್ವನಿಯಾಗಲು ಕೋರಿದ್ದಾರೆ.
ಐಂದ್ರಿತಾ ಟ್ವೀಟ್‌ಗೆ ರಕ್ಷಿತ್ ಶೆಟ್ಟಿಕೂಡ ಧ್ವನಿಗೂಡಿಸಿದ್ದು, ಇದು ನಿಜವಾಗಿಯೂ ಮನುಷ್ಯತ್ವವನ್ನು ಪ್ರಶ್ನಿಸುವ ಘಟನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಿಮ್ಮೊಂದಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.