
ಚಿಕ್ಕಮಗಳೂರು (ಮೇ. 17): ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಮಲತಾ ಗೆಲುವುಗಾಗಿ ಹೊರನಾಡು ಅನ್ನಪೂಣೇಶ್ವರಿ ಸನ್ನಿಧಿಯಲ್ಲಿ ರಾಕ್‌ಲೈನ್ ವೆಂಕಟೇಶ್ ವಿಶೇಷ ಪೂಜೆ ಸಲ್ಲಿಸಿದರು.
ಸಹಜವಾಗಿ ಸಮಲತಾ ಗೆಲುವಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಗೆಲುವಿನ ಆಸೆ, ನಿರೀಕ್ಷೆ ಇದೆ. ಮಂಡ್ಯ ಕ್ಷೇತ್ರದ ಜನರು ಸೇರಿದಂತೆ ಇತರೆ ಜನರು ಕೂಡ ಸಮಲತಾ ಜಯ ಸಾಧಿಸಲಿ ಎಂದು ಹೇಳುತ್ತಿದ್ದಾರೆ. ಇವರ ಆಶೀರ್ವಾದವೇ ಸುಮಲತಾ ಗೆಲುವಿಗೆ ವರ. ನಾನು ಕೂಡಾ ತಾಯಿ ಅನ್ನಪೂಣೇಶ್ವರಿ ದೇವಿಯಲ್ಲಿ ಸಮಲತಾ ಗೆಲುವಿಗೆ ಪ್ರಾರ್ಥನೆ ಮಾಡಿದ್ದೇನೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಎದುರಾದ ಟೈಟಲ್ ಗಳ ಬಗ್ಗೆ ನಂಬಿಕೆ ಇಲ್ಲ. ಜೋಡೆತ್ತು, ನಿಖಿಲ್ ಎಲ್ಲಿದ್ದಿಯಪ್ಪ ಎನ್ನುವ ಟೈಟಲ್ ಇವುಗಳ ಮೇಲೆ ನಂಬಿಕೆ ಇಲ್ಲ. ಟೈಟಲ್ ಯಿಂದ ಸಿನಿಮಾ ಹೋಗುವುದಿಲ್ಲ. ಟೈಟಲ್ ನಿಂದ ಸಿನಿಮಾ ಹೋಗುತ್ತೇ ಎನ್ನುವುದು ತಪ್ಪು ಕಲ್ಪನೆ. ಸಿನಿಮಾಗೆ ಕಥೆ, ನಾಯಕ ಮುಖ್ಯ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.