
ಟೀಮ್ ಇಂಡಿಯಾ ವೇಗಿ ಅರ್ಶದೀಪ್ ಸಿಂಗ್ 'ಕ್ಲೀನ್ ಬೌಲ್ಡ್'! ಯಾರೀಕೆ ಅರ್ಶದೀಪ್ ಮನಗೆದ್ದ ಸುಂದರಿ ಸಮ್ರೀನ್ ಕೌರ್?
ಮೈದಾನದಲ್ಲಿ ಘಾತಕ ಯಾರ್ಕರ್‌ಗಳ ಮೂಲಕ ಎದುರಾಳಿ ಬ್ಯಾಟರ್‌ಗಳ ವಿಕೆಟ್ ಹಾರಿಸುವ ಅರ್ಶದೀಪ್ ಸಿಂಗ್ (Arshdeep Singh) ಈಗ ತಾವೇ 'ಕ್ಲೀನ್ ಬೌಲ್ಡ್' ಆಗಿದ್ದಾರೆ! ಹೌದು, ಕಳೆದ ಕೆಲವು ತಿಂಗಳುಗಳಿಂದ ಅರ್ಷ್‌ದೀಪ್ ಸಿಂಗ್ ಯಾರ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗುಸುಗುಸು ಸುದ್ದಿಗೆ ಈಗ ಅವರೇ ಸ್ವತಃ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿರೋ ಈ ಕ್ರಿಕೆಟರ್, ಮಾಡೆಲ್ ಮತ್ತು ನಟಿ ಸಮ್ರೀನ್ ಕೌರ್ (Samreen Kaur) ಅವರನ್ನು 'ನನ್ನ ಪ್ರೀತಿಯ ವ್ಯಕ್ತಿ' (My Person) ಎಂದು ಜಗತ್ತಿಗೆ ಪರಿಚಯಿಸಿದ್ದಾರೆ. ಇನ್ನು ಈ ಪೋಸ್ಟ್ ನೋಡಿದ ಅಭಿಮಾನಿಗಳು "ಅರ್ಶದೀಪ್ ಜೀವನದ ಅತ್ಯುತ್ತಮ ವಿಕೆಟ್ ಇದು" ಎಂದು ಕಾಮೆಂಟ್ ಮಾಡುತ್ತಾ ಹಾರೈಸುತ್ತಿದ್ದಾರೆ.
ಯಾರು ಈ ಸಮ್ರೀನ್ ಕೌರ್? ಬ್ಯೂಟಿ ವಿತ್ ಬ್ರೈನ್!
ಅಷ್ಟಕ್ಕೂ ಅರ್ಶದೀಪ್ ಹೃದಯ ಕದ್ದ ಈ ಸಮ್ರೀನ್ ಕೌರ್ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಸೆಪ್ಟೆಂಬರ್ 7, 1999 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಸಮ್ರೀನ್ ಕೌರ್, ಮಾಡೆಲಿಂಗ್ ಲೋಕದ ಖ್ಯಾತ ಮುಖ. 2018ರ 'ಫೆಮಿನಾ ಮಿಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸಿ ಫೈನಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಸಮ್ರೀನ್ ಬರೀ ಸುಂದರಿ ಅಷ್ಟೇ ಅಲ್ಲ, ವಿದ್ಯಾಭ್ಯಾಸದಲ್ಲೂ ಸೈ ಎನಿಸಿಕೊಂಡಿದ್ದಾರೆ. ಪುಣೆಯ ಖ್ಯಾತ ಸಿಂಬಯೋಸಿಸ್ ಕಾಲೇಜಿನಿಂದ ಬಿಕಾಂ (ಆನರ್ಸ್) ಪದವಿ ಪಡೆದಿದ್ದಾರೆ.
ಮಾಡೆಲಿಂಗ್ ನಂತರ ನಟನೆಯತ್ತ ವಾಲಿದ ಸಮ್ರೀನ್, ಕಬೀರ್ ಖಾನ್ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ '83' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ZEE5 ನ 'ನೈಲ್ ಪಾಲಿಶ್' ಮತ್ತು ಪಂಜಾಬಿ ಸಿನಿಮಾ 'ಸರ್ದಾರ್ ಜಿ 2' ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಾದ್‌ಶಾ, ಗುರು ರಾಂಧವಾ, ಜುಬಿನ್ ನೌಟಿಯಾಲ್, ಜಸ್ ಮಾನಕ್ ಮತ್ತು ಮನಿಂದರ್ ಬುಟ್ಟರ್ ಅವರಂತಹ ಖ್ಯಾತ ಗಾಯಕರ ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫಾಲೋಯಿಂಗ್ ಸಂಪಾದಿಸಿದ್ದಾರೆ.
ಆಶಿಶ್ ಚಂಚಲಾನಿ ಜೊತೆ ತಳುಕು ಹಾಕಿಕೊಂಡಿದ್ದ ಹೆಸರು!
ಅರ್ಶದೀಪ್ ಅವರೊಂದಿಗೆ ಅಧಿಕೃತವಾಗಿ ಕಾಣಿಸಿಕೊಳ್ಳುವ ಮೊದಲು, ಸಮ್ರೀನ್ ಹೆಸರು ಖ್ಯಾತ ಯೂಟ್ಯೂಬರ್ ಆಶಿಶ್ ಚಂಚಲಾನಿ ಜೊತೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗಾಸಿಪ್ ಹಬ್ಬಿತ್ತು. ಆದರೆ, ಆಗ ಸಮ್ರೀನ್ "ನಾವಿಬ್ಬರೂ ಕೇವಲ ಆತ್ಮೀಯ ಸ್ನೇಹಿತರು ಅಷ್ಟೇ" ಎಂದು ಸ್ಪಷ್ಟನೆ ನೀಡಿದ್ದರು.
ಅರ್ಶದೀಪ್ ಮತ್ತು ಸಮ್ರೀನ್ ಪ್ರೀತಿಯ ವಿಷಯ ಮೊದಲು ಚರ್ಚೆಗೆ ಬಂದಿದ್ದು ಐಪಿಎಲ್ 2024ರ ಸಮಯದಲ್ಲಿ. ಪಂಜಾಬ್ ಕಿಂಗ್ಸ್ ಪರ ಆಡುವ ಅರ್ಶದೀಪ್ ಅವರನ್ನು ಬೆಂಬಲಿಸಲು ಸಮ್ರೀನ್ ಪದೇ ಪದೇ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅರ್ಶದೀಪ್ ವಿಕೆಟ್ ಪಡೆದಾಗಲೆಲ್ಲಾ ಸಮ್ರೀನ್ ಅವರ ಮುಖದಲ್ಲಿ ಅರಳುತ್ತಿದ್ದ ನಗು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿಯನ್ನು ಮೂಡಿಸಿತ್ತು. ಈಗ ಅರ್ಶದೀಪ್ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತ ಮೊಹರು ಒತ್ತಿದ್ದು, ಪ್ರೇಮಿಗಳ ಪಟ್ಟಿಗೆ ಹೊಸ ಜೋಡಿಯ ಎಂಟ್ರಿಯಾಗಿದೆ.
ಒಟ್ಟಿನಲ್ಲಿ, ಮೈದಾನದಲ್ಲಿ ಬ್ಯಾಟರ್‌ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ "ಪರ್ಫೆಕ್ಟ್ ಮ್ಯಾಚ್" ಎಂದು ಸಂಭ್ರಮಿಸುತ್ತಿದ್ದಾರೆ!
ಸಂಕ್ಷಿಪ್ತವಾಗಿ: ಜಮ್ಮು ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಈಗ ಅರ್ಶದೀಪ್ ಸಿಂಗ್ ಅವರ ಬಾಳಸಂಗಾತಿಯಾಗಿ ಬರಲು ಸಿದ್ಧರಾಗಿದ್ದಾರೆ. ವಿವಾದಗಳಿಗಿಂತ ಹೆಚ್ಚಾಗಿ ತಮ್ಮ ನಟನೆ ಮತ್ತು ಸೌಂದರ್ಯದಿಂದ ಸದ್ದು ಮಾಡಿದ್ದ ಸಮ್ರೀನ್, ಈಗ ಟೀಮ್ ಇಂಡಿಯಾದ 'ಫ್ಯೂಚರ್ ಸ್ಟಾರ್' ಪತ್ನಿಯಾಗುವ ಹಾದಿಯಲ್ಲಿದ್ದಾರೆ. ಇನ್ಮುಂದೆ ಅಸಲಿ ಮಜಾ ಶುರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.