ಮೂಗು ತೂರಿಸೋಕಾಗಲ್ಲ, ವಾಸಿಸೋದೇಗೆ, ಅಧಿಕಾರಿಗಳಿಗೆ ಸೋಮಣ್ಣ ತರಾಟೆ

By Kannadaprabha NewsFirst Published Nov 3, 2019, 1:02 PM IST
Highlights

ಇಲ್ಲಿ ಮೂಗು ತೂರಿಸೋಕೆ ಆಗ್ತಿಲ್ಲ, ಜನ ಹೇಗ್ರೀ ವಾಸಿಸ್ತಾರೆ ಎಂದು ಸಚಿವ ವಿ. ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಾರ್ವಜನಿಕರು ಇಲ್ಲಿ ವಾಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಚಾಮರಾಜನಗರ(ನ.03): ಇಲ್ಲಿ ಮೂಗು ತೂರಿಸೋಕೆ ಆಗ್ತಿಲ್ಲ, ಜನ ಹೇಗ್ರೀ ವಾಸಿಸ್ತಾರೆ ಎಂದು ಸಚಿವ ವಿ. ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಾರ್ವಜನಿಕರು ಇಲ್ಲಿ ವಾಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ವಿ.ಸೋಮಣ್ಣ, ನಿಮ್ಮಲ್ಲಿ ಇಚ್ಛಾಸಕ್ತಿ ಕೊರತೆ ಎದ್ದು ಕಾಣುತ್ತಿದೆ. ನಮಗೆ ಇಲ್ಲಿ ಮೂಗು ತೂರಿಸಲು ಆಗುತ್ತಿಲ್ಲ. ಇನ್ನು ಜನರ ಪರಿಸ್ಥಿತಿ ಹೇಗಾಗಬೇಕು? ಸಾರ್ವಜನಿಕರು ಇಲ್ಲಿ ವಾಸ ಮಾಡುವುದಾದರೂ ಹೇಗೆ ಎಂದಿದ್ದಾರೆ.

ಚಾಮರಾಜನಗರ: ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ!

ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಅವರ ಗಮನಕ್ಕೆ ಇದು ಬಂದರೆ ನಾವು ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಅಧಿಕಾರಿಗಳು ಇತ್ತ ಮುಖ ಹಾಕಿಲ್ಲ ಎಂಬುದು ಗೊತ್ತಾಗುತ್ತದೆ. ನಾನು ಬರುತ್ತೇನೆ ಎಂಬ ಕಾರಣಕ್ಕೆ ಇವತ್ತು ಮಾತ್ರ ತಾತ್ಕಾಲಿಕ ವ್ಯವಸ್ಥೆ ಮಾಡಿರುವಂತಿದೆ ಎಂದಿದ್ದಾರೆ.

ಇನ್ನು ಮುಂದಾದರೂ ಸರಿಯಾಗಿ ಕೆಲಸ ನಿರ್ವಹಿಸಿ. ಸರ್ಕಾರದಿಂದ ನೀಡುವ ಅನುದಾನದಲ್ಲಿ 1 ರುಪಾಯಿಯೂ ದುರ್ಬಳಕೆ ಆಗಬಾರದು. ಪಾರದರ್ಶಕತೆಯಿಂದ ಕೆಲಸ ಮಾಡಬೇಕು. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

ಮಂಗಳೂರು ಮೀನು ಸಾರಿಗೆ ಉಪರಾಷ್ಟ್ರಪತಿ ಫಿದಾ..!

click me!