ಮೈಸೂರು: ಮೂರು ವರ್ಷದ ಗಂಡು ಚಿರತೆ ಬೋನಿಗೆ

By Kannadaprabha NewsFirst Published Oct 29, 2019, 3:18 PM IST
Highlights

ಹಳ್ಳಿಗಾಡಿನ ಜನರಲ್ಲಿ ಭಯಭೀತಿ ಹುಟ್ಟಿಸಿದ್ದ ಚಿರತೆಗಳನ್ನು ಸೆರೆ ಹಿಡಿಯುವ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಕಾರ್ಯಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಟಿ. ನರಸೀಪುರ ತಾಲೂಕಿನ ಕುಪ್ಯ ಗ್ರಾಮದ ಬಳಿ ಮೂರು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.

ಮೈಸೂರು(ಅ.29): ಹಳ್ಳಿಗಾಡಿನ ಜನರಲ್ಲಿ ಭಯಭೀತಿ ಹುಟ್ಟಿಸಿದ್ದ ಚಿರತೆಗಳನ್ನು ಸೆರೆ ಹಿಡಿಯುವ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಕಾರ್ಯಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಟಿ. ನರಸೀಪುರ ತಾಲೂಕಿನ ಕುಪ್ಯ ಗ್ರಾಮದ ಬಳಿ ಮೂರು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.

ತಾಲೂಕಿನಾದ್ಯಂತ ನಾಲ್ಕೈದು ತಿಂಗಳಿನಿಂದ ಚಿರತೆಗಳು ಕಾಣಿಸಿಕೊಂಡು ಕುರಿ ಮತ್ತು ನಾಯಿಗಳನ್ನು ತಿಂದು ಹಾಕುವ ಮೂಲಕ ಗ್ರಾಮೀಣ ಪ್ರದೇಶಗಳ ಜನರನ್ನು ಭಯ ಬೀಳಿಸಿದ್ದವು. ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ಚಿರತೆಗಳನ್ನು ಸೆರೆ ಹಿಡಿಯಲು ಚಿರತೆಗಳ ಚಲನವಲನ ಗಮನಿಸಿ ಹಲವೆಡೆ ಬೋನುಗಳನ್ನ ಇರಿಸಿದ್ದರು.

ಮಾಜಿ ಹೆಂಡ್ತಿಗೆ ಜೀವನಾಂಶ ಕೊಡ್ಲಿಲ್ಲ: ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಕೋರ್ಟ್ ಆದೇಶ

ತಾಲೂಕಿನ ಕಸಬಾ ಹೋಬಳಿಯ ಕುಪ್ಯ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಜಮೀನೊಂದರಲ್ಲಿ ಬೋನು ಇರಿಸಲಾಗಿತ್ತು. ಕಳೆದ ಅ. 26 ರಾತ್ರಿ ಅಥವಾ ಮುಂಜಾನೆಯ ವೇಳೆ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾಗಿದೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಬಂಡೀಪುರ ಅರಣ್ಯಕ್ಕೆ ಚಿರತೆ ಬಿಡಲಾಯಿತು.

ಕೆಲವು ದಿನಗಳ ಹಿಂದೆಯೇ ಸೋಸಲೆ ಹೋಬಳಿಯ ಚಿಟಗಯ್ಯನಕೊಪ್ಪಲು ಗ್ರಾಮದ ಬಳಿಯೂ ಒಂದು ಚಿರತೆ ಸೆರೆಯಾಗಿತ್ತು. ಕುಪ್ಯ ಬಳಿ ಎರಡನೇ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆ ಕಾರ್ಯಾಚರಣೆಗೆ ಉಪ ಅರಣ್ಯಾಧಿಕಾರಿಗಳಾದ ಎಂ.ಎಸ್‌. ಉಮೇಶ್‌, ಎಸ….ಎಂ. ಮಂಜುನಾಥ್‌, ಅರಣ್ಯ ರಕ್ಷಕರಾದ ನಾಗರಾಜು, ಚಂದ್ರಪ್ಪ ಲಮಾಣಿ ಭಾಗವಹಿಸಿದ್ದರು.

ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರು ಬಾಲಕಿಯರ ರಕ್ಷಣೆ

click me!