ದಸರಾ ಯಶಸ್ವಿ, ಇನ್ನೇನಿದ್ದರೂ ನಿರಾಶ್ರಿತರಿಗೆ ಮನೆ: ಸೋಮಣ್ಣ

By Kannadaprabha NewsFirst Published Oct 10, 2019, 8:17 AM IST
Highlights

ನೆರೆ ಪೀಡಿತ ಜಿಲ್ಲೆಗಳ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕೆಲಸದಲ್ಲಿ ಸಂಪೂರ್ವಾಗಿ ತೊಡಗಿಸಿಕೊಳ್ಳುತ್ತೇನೆ. ಇಷ್ಟುದಿನ ದಸರಾ ಹೊಣೆ ಹೊತ್ತು ಯಶಸ್ವಿಯಾಗಿ ಪೂರೈಸಲಾಗಿದೆ. ಇಂದಿನಿಂದ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರು(ಅ.10): ನಾಡಹಬ್ಬ ದಸರಾ ಮಹೋತ್ಸವವು ಯಶಸ್ವಿಯಾಗಿ ನಡೆದಿದೆ. ಇನ್ನೇನಿದ್ದನೂ ನೆರೆ ಪೀಡಿತ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಪೀಡಿತ ಜಿಲ್ಲೆಗಳ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕೆಲಸದಲ್ಲಿ ಸಂಪೂರ್ವಾಗಿ ತೊಡಗಿಸಿಕೊಳ್ಳುತ್ತೇನೆ. ಇಷ್ಟುದಿನ ದಸರಾ ಹೊಣೆ ಹೊತ್ತು ಯಶಸ್ವಿಯಾಗಿ ಪೂರೈಸಲಾಗಿದೆ. ಇಂದಿನಿಂದ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಜಂಬೂ ಸವಾರಿ ವೀಕ್ಷಕರಿಂದ ಅರಮನೆಗೆ ಪ್ಲಾಸ್ಟಿಕ್‌ ಗಿಫ್ಟ್‌..!

ಇಷ್ಟುದಿನದವರೆಗೂ ದಸರಾ ಎಂದರೆ ಜಂಬೂಸವಾರಿ ಮೆರವಣಿಗೆ, ಅದನ್ನು ನಿರಾಯಾಸವಾಗಿ ಮಾಡಿ ಮುಗಿಸಿ ಬಿಡಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಇಷ್ಟೊಂದು ಆಳವಾಗಿದೆ ಎಂದು ನನಗೆ ಗೊತ್ತಿರಲಿಲ್ಲ. ಎಲ್ಲರ ಸಹಕಾರದಿಂದ ದಸರಾ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ, ಯಾವ ವಿಚಾರ?

ದಸರಾ ಮಹೋತ್ಸವದ ಎಲ್ಲ ಖರ್ಚಿನ ಲೆಕ್ಕವನ್ನು ಹಾಕುತ್ತೇವೆ. ಲೆಕ್ಕ ಪರಿಶೋಧನೆ ಬಳಿಕ ಹಣ ಉಳಿದರೆ ನೆರೆ ಸಂತ್ರಸ್ತರ ಪರಿಹಾರಕ್ಕೆ ಬಳಸಲು ನೀಡಲಾಗುವುದು. ನಾವು ಪ್ರತಿ ಪೈಸೆಗೂ ಲೆಕ್ಕ ಇಡಲು ಹೇಳಿದ್ದೇನೆ. ಚೆಕ್‌ ಮತ್ತು ಆರ್‌ಟಿಜಿಎಸ್‌ ಮೂಲಕ ಹಣ ಸಂದಾಯವಾಗಿದೆ. ಪ್ರತಿಯೊಂದು ಪಾರದರ್ಶಕವಾಗಿ ನಡೆದಿದೆ.

ಗೋಮ ಬಗ್ಗೆ ಮೆಚ್ಚುಗೆ

ದಸರಾ ಜಂಬೂಸವಾರಿಯ ವೀಕ್ಷಕ ವಿವರಣೆ ನೀಡಿದ ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ್‌ ಅವರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ.1ರಿಂದ ಕನ್ನಡ ನಾಮಫಲಕ ಕಡ್ಡಾಯ: ಆದೇಶ ಪಾಲಿಸದಿದ್ದರೆ ಲೈಸೆನ್ಸ್‌ ರದ್ದು!

ಮೂರು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಗೋ. ಮಧುಸೂದನ್‌ ಅವರ ವೀಕ್ಷಕ ವಿವರಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರೂ ಎಲ್ಲಿಯಾದರೂ ಅಪ್ಪಿತಪ್ಪಿ ರಾಜಕೀಯ ವಿಚಾರ ಪ್ರಸ್ತಾಪಿಸುತ್ತಾರೋ ಎಂಬ ಆತಂಕ ಯಡಿಯೂರಪ್ಪ ಅವರಿಗಿತ್ತು ಎಂದು ಗೋ. ಮಧುಸೂದನ್‌ ಅವರ ಕಾಲೆಳೆದಿದ್ದಾರೆ.

click me!