ನನ್ನ ಕಾರಣದಿಂದಾಗಿ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದ ಅನರ್ಹ ಶಾಸಕ

By Kannadaprabha News  |  First Published Oct 9, 2019, 10:58 AM IST

ನನ್ನಿಂದಾಗಿಯೇ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎಂದು ಅನರ್ಹ ಶಾಸಕರೋರ್ವರು ಹೇಳಿದರು. ಅಲ್ಲದೇ ಮುಂದಿನ ಚುನಾವಣೆ ಬಗ್ಗೆಯೂ ಕೂಡ ಈ ವೇಳೆ ಹೇಳಿದ್ದು ಸ್ಪರ್ಧೆ ಖಚಿತಪಡಿಸಿದರು. 


ಮೈಸೂರು [ಅ.09]:  ನನ್ನ ಕಾರಣದಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಎಂದು ಅನರ್ಹಗೊಂಡಿರುವ ಶಾಸಕ ಎಚ್‌. ವಿಶ್ವನಾಥ್‌ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಇಂದು ಯಾವುದೇ ರೀತಿಯ ಚರ್ಚೆ ನಡೆಸಿಲ್ಲ. ಅವರನ್ನು ಫುಲ್‌ ಫ್ರೀ ಬಿಟ್ಟಿದ್ದೇವೆ ಎಂದು ಹೇಳಿದರು.

Tap to resize

Latest Videos

ಮುಂಬರುವ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಅಥವಾ ನನ್ನ ಕುಟುಂಬ ಸದಸ್ಯರೊಬ್ಬರು ಸ್ಪರ್ಧಿಸುತ್ತಾರೆ. ಯಾವುದೇ ಕಾರಣಕ್ಕೂ ನಮ್ಮ ಕುಟುಂಬ ಉಪಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುತ್ತೂರು ಶ್ರೀಗಳ ಆಹ್ವಾನದ ಮೇರೆಗೆ ಸುತ್ತೂರು ಶಾಖಾ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದೇನೆ. ಇದು ನಮ್ಮೆಲ್ಲರ ಮಠವಾಗಿದೆ ಎಂದರು.

click me!