ಹುಣಸೂರು ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಫಿಕ್ಸ್

By Web DeskFirst Published Oct 12, 2019, 2:33 PM IST
Highlights

ರಾಜ್ಯದಲ್ಲಿ ಉಪ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳಲ್ಲಿ ಭರ್ಜರಿ ತಯಾರಿ ನಡೆದಿದ್ದು, ಹುಣಸೂರು ಕ್ಷೇತ್ರಕ್ಕೆ ಬಹುತೇಕ ಜೆಡಿಎಸ್ ಅಭ್ಯರ್ಥಿ ಫಿಕ್ಸ್ ಆದಂತಾಗಿದೆ. 

ಹುಣಸೂರು [ಅ.12] : ರಾಜ್ಯದಲ್ಲಿ ಇನ್ನೊಂದು ತಿಂಗಳಲ್ಲಿ ಉಪ ಚುನಾವಣೆ ಸಮೀಪಿಸುತ್ತಿದೆ. 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ವಿವಿಧ ಪಕ್ಷಗಳಲ್ಲಿ ತಯಾರಿ ಜೋರಾಗಿದೆ. 

ವಿಶ್ವನಾಥ್ ಅನರ್ಹತೆಯಿಂದ ತೆರವಾಗಿರುವ ಹುಣಸೂರು ಕ್ಷೇತ್ರಕ್ಕೆ ಜೆಡಿಎಸ್‌ ಸ್ಥಳೀಯ ಮುಖಂಡ ಪಕ್ಷದಲ್ಲಿ ಸಕ್ರಿಯವಾಗಿದ್ದ ಮೂಲತಃ ಗುತ್ತಿಗೆದಾರರಾಗಿರುವ ದೇವರಹಳ್ಳಿ ಸೋಮಶೇಖರ್‌ ಈ ಬಾರಿ ಜೆಡಿಎಸ್‌ನಿಂದ ಅಭ್ಯರ್ಥಿಯಾಗಲಿದ್ದಾರೆಂಬ ಸುದ್ದಿ ತಾಲೂಕಿನಾದ್ಯಂತ ಹರಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶುಕ್ರವಾರ ನಡೆದ ಜೆಡಿಎಸ್‌ ಸಭೆಯ ಉದ್ಘಾಟನೆ ವೇಳೆ ದೂರದಲ್ಲಿ ನಿಂತಿದ್ದ ಸೋಮಶೇಖರ್‌ ಅವರನ್ನು ದೇವೇಗೌಡರು ಕರೆಸಿ ದೀಪ ಹಚ್ಚಲು ಸೂಚಿಸಿದರು.  ಮಾತ್ರವಲ್ಲ ಹೆಗಲ ಮೇಲೆ ಕೈಹಾಕಿಕೊಂಡು ಬೆನ್ನುತಟ್ಟಿದರು. 

ಬಳಿಕ ಸೋಮಶೇಖರ್‌ಗೆ ಭಾಷಣ ಮಾಡಲು ತಾಕೀತು ಮಾಡಿದರು. ಸೋಮಶೇಖರ್‌ ಮಾತನಾಡುವಾಗ ಕಾರ್ಯಕರ್ತರು ಜೈಕಾರ ಕೂಗಿದರು, ಆಗ ದೇವೇಗೌಡರು ಮುಗುಳ್ನಗೆ ನಗು ಬೀರಿದ್ದು ಸೋಮಶೇಖರ್‌ ಈ ಕ್ಷೇತ್ರ ಅಭ್ಯರ್ಥಿಯಾಗಬಹುದೆಂಬ ಅನುಮಾನಕ್ಕೆ ಪುಷ್ಟಿ ನೀಡಿದಂತಿತ್ತು.

click me!