ಮೈಸೂರು: ಚಾಮುಂಡಿಗೆ ರಾಷ್ಟ್ರಪತಿ ನಮನ

By Kannadaprabha News  |  First Published Oct 12, 2019, 8:07 AM IST

ರಾಷ್ಟ್ರಪತಿ ರಮನಾಥ್‌ಕೋವಿಂದ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೆಳಗ್ಗೆ 9.45 ರಿಂದ ಮಧ್ಯಾಹ್ನ 11.45 ರವರೆಗೆ ಪ್ರವೇಶ ನಿಷೇಧಿಸಲಾಗಿತ್ತು.


ಮೈಸೂರು(ಅ.12): ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪತ್ನಿ ಸವಿತಾ ಕೋವಿಂದ್‌ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.

ಬೆಳಗ್ಗೆ 10.40ಕ್ಕೆ ರಸ್ತೆ ಮೂಲಕ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ದಂಪತಿಗೆ ಪೂರ್ಣಕುಂಭ ಸ್ವಾಗತ ದೊರೆಯಿತು. ಮೈಸೂರು ಪೇಟೆ, ಶಾಲು ತೊಡಿಸಿ ಬರಮಾಡಿಕೊಳ್ಳಲಾಯಿತು. ಪ್ರಮುಖ ಅರ್ಚಕ ಶಶಿಶೇಖರ ದೀಕ್ಷಿತ್‌ ಮುಂದಾಳತ್ವದಲ್ಲಿ ಪೂಜೆ ನಡೆಯಿತು. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೆಳಗ್ಗೆ 9.45 ರಿಂದ ಮಧ್ಯಾಹ್ನ 11.45 ರವರೆಗೆ ಪ್ರವೇಶ ನಿಷೇಧಿಸಲಾಗಿತ್ತು.

Tap to resize

Latest Videos

ಮೈಸೂರು: ಕಾಲಿಗೆ ಬೀಳಲು ಬಂದ ಶಾಸಕನನ್ನು ತಡೆದ ರಾಷ್ಟ್ರಪತಿ

ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಎಸ್ಪಿ ಸಿ.ಬಿ. ರಿಷ್ಯಂತ್‌, ಮುಜರಾಯಿ ತಹಸೀಲ್ದಾರ್‌ ಯತಿರಾಜ್‌ ಸಂಪತ್‌ಕುಮಾರ್‌, ಎಇಒ ಗೋವಿಂದರಾಜ್‌ ಇದ್ದರು.

ಎಚ್‌.ಡಿ. ದೇವೇಗೌಡರ ಭೇಟಿ

ಇದಕ್ಕೂ ಮೊದಲು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ನವರಾತ್ರಿ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರಿಂದ ನಾನು ಬಂದಿರಲಿಲ್ಲ. ಇವತ್ತು ಶುಕ್ರವಾರವಾದ್ದರಿಂದ ದೇವಿಗೆ ಪೂಜೆ ಸಲ್ಲಿಸಿ, ರಾಜ್ಯದ ಜನತೆಗೆ ಒಳಿತು ಮಾಡುವಂತೆ ಪ್ರಾರ್ಥಿಸಿದ್ದೇನೆ ಎಂದು ದೇವೇಗೌಡ ಹೇಳಿದ್ದಾರೆ.

ಒಡೆಯರ ತತ್ವಾದರ್ಶ ಪಾಲಿಸುವುದೇ ಗೌರವ: ರಾಷ್ಟ್ರಪತಿ ಕರೆ

click me!