ಆಗಸ್ಟ್ 1ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ.. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ ಸಾಂಸ್ಕೃತಿಕ ನಗರಿ..!

Published : Jul 26, 2026, 09:29 AM IST
Narendra Modi Eid Greetings

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1 ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಲಿದ್ದು, ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾದ ಬಹುನಿರೀಕ್ಷಿತ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಲೇಖನವು ಅವರ ಮೈಸೂರು ಪ್ರವಾಸದ ಸಂಪೂರ್ಣ ನಿಮಿಷ-ನಿಮಿಷದ ವೇಳಾಪಟ್ಟಿಯನ್ನು ವಿವರಿಸುತ್ತದೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಬಹುನಿರೀಕ್ಷಿತ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲು ಪ್ರಧಾನಿಗಳು ಆಗಮಿಸುತ್ತಿದ್ದು, ಅವರ ಮಿನಿಟ್-ಟು-ಮಿನಿಟ್ ಪ್ರವಾಸದ ವೇಳಾಪಟ್ಟಿ ಸಿದ್ಧವಾಗಿದೆ.

ಮೋದಿ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

  • ಮಧ್ಯಾಹ್ನ 2.55: ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮನ.
  • ಮಧ್ಯಾಹ್ನ 3.15: ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ತಲುಪಲಿರುವ ಮೋದಿ.
  • ಮಧ್ಯಾಹ್ನ 3.25: ಓವಲ್ ಮೈದಾನದಿಂದ ರಸ್ತೆಯ ಮೂಲಕ ವಿವೇಕ ಸ್ಮಾರಕಕ್ಕೆ ಪ್ರಯಾಣ.
  • ಮಧ್ಯಾಹ್ನ 3.30 ರಿಂದ ಸಂಜೆ 5.15: ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ. ಇದೇ ವೇಳೆ 'ವಿವೇಕ ಸ್ಮಾರಕ' ಉದ್ಘಾಟನೆ.
  • ಸಂಜೆ 5.20: ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ.
  • ಸಂಜೆ 5.30: ಓವಲ್ ಮೈದಾನಕ್ಕೆ ವಾಪಸ್ ಆಗಿ, ಅಲ್ಲಿಂದ ಮೈಸೂರು ವಿಮಾನ ನಿಲ್ದಾಣದತ್ತ ಪ್ರಯಾಣ.
  • ಸಂಜೆ 5.55: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸ್.

ಕಾರ್ಯಕ್ರಮದ ಮಹತ್ವ

ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ನೆನಪಿಗಾಗಿ ನಿರ್ಮಿಸಲಾದ ಈ ವಿವೇಕ ಸ್ಮಾರಕವು ಅತ್ಯಂತ ಮಹತ್ವದ ಯೋಜನೆಯಾಗಿದೆ. ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

PREV
Read more Articles on
click me!

Recommended Stories

ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ, 416ನೇ ಮೈಸೂರು ದಸರಾ ಮಹೋತ್ಸವಕ್ಕೆ ಗವಿಶ್ರೀಗಳಿಂದ ಚಾಲನೆ
ಮೈಸೂರಿನ ಈ ಕಾರ್ಖಾನೆಯಲ್ಲಿ ಒಂದಲ್ಲ, ಎರಡಲ್ಲ… ಗಂಟೆಗೆ 20,000 ಪಾನಿಪುರಿ ತಯಾರಿ! ವಿಶೇಷತೆ ಏನು ಗೊತ್ತಾ?