'12ನೇ ದಿನಕ್ಕೆ ಪಾಕಿಸ್ತಾನದ ತಿಥಿ ಮಾಡಿದ್ದೇವೆ'

By Web DeskFirst Published Feb 28, 2019, 4:07 PM IST
Highlights

ಪುಲ್ವಾಮಾ ದಾಳಿ ನಂತರದ ಬೆಳವಣಿಗೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ನರೇಂದ್ರ ಮೋದಿ ಅವರನ್ನುಯ ಗುಣಗಾನ ಮಾಡುತ್ತಾ ಹಿಂದಿನ ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೈಸೂರು(ಫೆ.28)  ನರೇಂದ್ರ‌ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಪುಲ್ವಾಮಾ ದಾಳಿಯಾದ ನಂತರ ಅರಿವಾಗಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಭಾರತದ ಮೇಲೆ ಹಲವಾರು ದಾಳಿಗಳಾದವು. ಹೈದ್ರಾಬಾದ್, ನವದೆಹಲಿ, ಚಿನ್ನಸ್ವಾಮಿ ಸ್ಟೇಡಿಯಂ, ಮಲ್ಲೇಶ್ವರಂ ಸೇರಿದಂತೆ ಹಲವು ದಾಳಿ ನಡೆದವು ಆದರೆ ಅಂದಿನ ಯುಪಿಎ ಸರಕಾರ ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದರು.

ಮುಂಬೈ ಮೇಲೆ ದಾಳಿ ನಡೆದು 160ಕ್ಕೂ ಹೆಚ್ಚು ಜನ ಸತ್ತರು. ಪಾಕಿಸ್ತಾನ ನಮ್ಮ ಇಬ್ಬರು ಯೋಧರ ಶಿರಛೇದನ ಮಾಡಿ ರುಂಡ ಕಳುಹಿಸಿತು. ಪ್ರಧಾನಿಯಾಗಿದ್ದ ಮಹಮೋಹನ್ ಸಿಂಗ್ ಗಡಿದಾಟಿ ಪ್ರತಿದಾಳಿ ಮಾಡುವ ಧೈರ್ಯ ತೋರಲಿಲ್ಲ. ಆದರೆ ಪುಲ್ವಾಮಾದಲ್ಲಿ ದಾಳಿಯಾದ 12ನೇ ದಿನಕ್ಕೆ ಪಾಕಿಸ್ತಾನದ ಬಾಲಕೋಟ್ ಮೇಲೆ ದಾಳಿಯಾಗಿದೆ. 

ಸರ್ಜಿಕಲ್ ದಾಳಿ ಮಾಸ್ಟರ್ ಪ್ಲ್ಯಾನ್ ಗೊತ್ತಿದ್ದುದು ಈ 7 ಮಂದಿಗೆ ಮಾತ್ರ!

ನೂರಾರು ಉಗ್ರರನ್ನು ಸಾಯಿಸುವ ಮೂಲಕ ಪಾಕಿಸ್ತಾನದ ತಿಥಿ ಮಾಡಿದ್ದೇವೆ. ದೇಶಕ್ಕೆ ಇಂಥ ಪ್ರಧಾನಿಯೊಬ್ಬ ಬೇಕು ಅಂತ ಜನ ಕಾಯುತ್ತಿದ್ದರು. ಈಗ ನರೇಂದ್ರ ಮೋದಿ ಅವರು ಸಿಕ್ಕಿದ್ದಾರೆ. ಅವರನ್ನು ಇನ್ನಷ್ಟು ವರ್ಷ ಪ್ರಧಾನಿಯಾಗಿ ಉಳಿಸಿಕೊಳ್ಳಬೇಕು ಎಂದು ಮೇರಾ ಬೂತ್ ಸಬಸೆ ಮಜಬೂತ್ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಹೇಳಿದರು.

 

click me!