ಪ್ರತಾಪ್ ಸಿಂಹ VS ಪ್ರಕಾಶ್ ರೈ, ಒಂದು ರೂಪಾಯಿ ಕೇಸ್  ಹಾಕಿದ ಅಸಲಿ ಕಾರಣ

By Web DeskFirst Published Feb 25, 2019, 6:55 PM IST
Highlights

ಸಂಸದ ಪ್ರತಾಪ್ ಸಿಂಹ ಮತ್ತು ಪ್ರಕಾಶ್ ರಾಜ್ ನಡುವಿನ ಕಿತ್ತಾಟ ನ್ಯಾಯಾಲಯದ ಮೆಟ್ಟಿಲು ಏರಿದ್ದು  ನಂತರ ಕೋರ್ಟ್  ಪ್ರತಾಪ್ ಸಿಂಹ ಅವರಿಗೆ ವಾರೆಂಟ್ ಸಹ ಜಾರಿ ಮಾಡಿತ್ತು. ಈಗ ಪ್ರತಾಪ್ ಸಿಂಹ ಪ್ರತಿಕ್ರೆಯೆ ಒಂದನ್ನು ನೀಡಿದ್ದಾರೆ.

ಮೈಸೂರು[ಫೆ. 25]  ಸಂಸದ ಪ್ರತಾಪ್ ಸಿಂಹ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ವಾರೆಂಟ್ ನೀಡಿತ್ತು.  ಈ ಬಗ್ಗೆ ಪ್ರತಾಪ್ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ನಟ ಪ್ರಕಾಶ್ ರೈ ಹಾಕಿರೋ ಕೇಸ್ ಟೊಳ್ಳು ಕೇಸ್.  ನಮ್ಮ ಕಚೇರಿಗೆ ಸಮನ್ಸ್ ಬಂದಿದೆ , ಅದನ್ನು ಕಚೇರಿ ಸಿಬ್ಬಂದಿ ರಿಸೀವ್ ಮಾಡಿದ್ದಾರೆ. ಆದ್ರೆ ನನ್ನ ಗಮನಕ್ಕೆ ಬಂದಿರಲಿಲ್ಲ, ಹೀಗಾಗಿ ನಾನು ಕೂಡ ಹಾಜರಾಗಿಲ್ಲ. ಆ ಕೇಸ್ ನಿಲ್ಲೊದಿಲ್ಲ, ಅದ್ರಲ್ಲಿ ಯಾವುದೇ ಹುರುಳಿಲ್ಲ. ನಾನು ಮತ್ತೆ ಆ ಕೇಸ್ ರೀ ಕಾಲ್ ಮಾಡಿಸುತ್ತೇನೆ ಎಂದಿದ್ದಾರೆ.

 

ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ವಾರೆಂಟ್​ ಜಾರಿ

ಕೇವಲ ಪ್ರಚಾರಕ್ಕೆ ಪ್ರಕಾಶ್ ರೈ ಕೇಸ್ ಹಾಕಿದ್ದಾರೆ ಅಷ್ಟೇ. ಮಾರ್ಚ್ 19 ಕ್ಕೆ ನಾನು ಜನಪ್ರತಿನಿಗಳ ನ್ಯಾಯಾಲಕ್ಕೆ ಕೇಸ್ ಸಂಬಂಧ ಹಾಜರಾಗ್ತೀನಿ. ನಾನು ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್ ಶೇರ್ ಮಾಡಿದ್ದೆ ಅಷ್ಟೇ. ಹೀಗೆ ನೋಡಿದ್ರೆ ಆ ಬರವಣಿಗೆ ಬರದವರ ಮೇಲೆ ಕೇಸ್ ಹಾಕಬಹುದಿತ್ತು ಎಂದರು.

ಜನಸಾಮಾನ್ಯ ಮಾಡೋ ತರ ನಾನ್ ಶೇರ್ ಮಾಡಿದ್ದಕ್ಕೆ ನನ್ನ ಮೇಲೆ 1 ರೂಪಾಯಿಗೆ ರೈ ಕೇಸ್ ಹಾಕಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

click me!