ಮೈಸೂರು: ಪಿಎಚ್‌ಡಿ ಮಾಡ್ತಿದ್ದಾರೆ ಸಚಿವ ಸಿ. ಟಿ. ರವಿ

By Kannadaprabha NewsFirst Published Oct 17, 2019, 11:15 AM IST
Highlights

ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಸಂಶೋಧನೆ ಮಾಡ್ತಿದ್ದಾರೆ. ತಾವು ಪಿಎಚ್‌ಡಿ ಮಾಡುತ್ತಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಅವರೇ ಮೈಸೂರಿನಲ್ಲಿ ತಿಳಿಸಿದ್ದಾರೆ. ಹಾಗೆಯೇ ತಮಗೆ ಸಂಬಂಧಿಸಿದ ಅಧ್ಯಯನ ವಿಷಯವನ್ನು ಆರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮೈಸೂರು(ಅ.17): ನಾನು ಪಿಎಚ್‌ಡಿ ಮಾಡುತ್ತಿದ್ದೇನೆ. ಅಧ್ಯಯನ ನಿರಂತರ, ಸಾಯುವವರೆಗೆ ಮಾಡುತ್ತಿರಬೇಕು. ನನಗೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು  ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸಾಂಸ್ಥಿಕ ಚುನಾವಣೆ ಕುರಿತ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ.

'ಸಾ.ರಾ. ಮಹೇಶ್‌ ತಾಲೂಕನ್ನೇ ಒಡೆದಿದ್ದಾರೆ, ಹುಣಸೂರು ಜಿಲ್ಲೆ ಯಾಕಾಗ್ಬಾರ್ದು'..?

ನಾನು ಪಿಎಚ್‌ಡಿ ಮಾಡುತ್ತಿದ್ದೇನೆ. ಅಧ್ಯಯನ ನಿರಂತರ, ಸಾಯುವವರೆಗೆ ಮಾಡುತ್ತಿರಬೇಕು. ನನಗೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳು ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯ ಕುರಿತು ಸಂಶೋಧನೆ ಮಾಡಲಾಗುತ್ತಿದೆ. ಇದು ಕೋರ್ಸ್‌ ಪರೀಕ್ಷೆ. ಇನ್ನು ಮುಂದೆ ಫಲಿತಾಂಶ ನಂತರ ಸಂಶೋಧನ ಪ್ರಬಂಧ ಮಂಡಿಸಬೇಕು. 1 ಪೇಪರ್‌ ಮೆಥಾಡಾಲಜಿ ಅರ್ಥವಾಗಲಿಲ್ಲ ಅನುಭವದಿಂದ ಬರೆದಿದ್ದೇನೆ. ಇನ್ನು ಪೊಲಟಿಕಲ್‌ ಸೈನ್ಸ್‌ ಮತ್ತು ಕೋರ್ಸ್‌ ಸಬ್ಜೆಕ್ಟ್ ಚೆನ್ನಾಗಿ ಮಾಡಿದ್ದೇನೆ. ಅಧ್ಯಯನ ಅವಧಿ ನ. 15 ರವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

ಮೈಸೂರು ಪ್ರವಾಸೋದ್ಯಮ ಸಮಗ್ರ ಯೋಜನೆ

ತಜ್ಞರ ಜೊತೆ ಕುರಿತು ಚರ್ಚಿಸಿ ದಸರಾ ಸಂಬಂಧಿಸಿದಂತೆ ಹಾಗೂ ಮೈಸೂರು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನೆ ರೂಪಿಸಲಾಗುವುದು. ಮೈಸೂರಿನಲ್ಲಿ ಅರಮನೆ ಇದೆ, ಡ್ಯಾಂ ಇದೆ, ಜಲಪತಾವಿದೆ, ಅರಣ್ಯವಿದೆ, ಹೊಯ್ಸಳರ ಕಾಲದ ದೇವಾಲಯವಿದೆ, ವೆಲ್‌ನೆಸ್‌ ಸೆಂಟರ್‌ ಹಾಗೂ ಫಿಲಂ ಸಿಟಿ ತೆರೆಯುವ ಅವಕಾಶವಿದೆ. ಇದೆಲ್ಲವನ್ನೂ ಸಮಗ್ರವಾಗಿ ಸೇರಿಸಿಕೊಂಡು ಯೋಜನೆ ರೂಪಿಸಬೇಕು ಎಂದಿದ್ದಾರೆ.

ಶಾಸಕ ಸ್ಥಾನಕ್ಕೆ JDS ಶಾಸಕ ಸಾ ರಾ ಮಹೇಶ್ ರಾಜೀನಾಮೆ!?

ರಾಜಕೀಯ ಅಸ್ಥಿರತೆ, ಅನಿಶ್ಚಿತತೆಯಿಂದ ದಸರಾಗೆ ತೊಂದರೆ ಆಗಬಾರದು, ನಿರಂತರವಾಗಿ ನಡೆದುಕೊಂಡು ಹೋಗಬೇಕು. ದಸರಾ ಕಾರ್ಯಕ್ರಮಗಳಲ್ಲಿ ಏಕತಾನತೆ ಆಕರ್ಷಣೆ ಕಡಿಮೆ ಮಾಡುತ್ತದೆ. ಅದನ್ನು ಹೋಗಲಾಡಿಸಲು ಸಾಂಸ್ಕೃತಿಕ ವಿನಿಮಯವಾಗಬೇಕು. ಇದಕ್ಕಾಗಿ ದೀರ್ಘ ಕಾಲದ ತಯಾರಿ ಆಗಬೇಕು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

'ಗುರುವಾರ ಚಾಮುಂಡಿ ಬೆಟ್ಟಕ್ಕೆ ಬನ್ನಿ, ಜತೆಗೆ ಕೊಂಡುಕೊಂಡವರನ್ನು ಕರೆತನ್ನಿ

click me!