ಜೆಸಿಬಿ ಏರಿ ಖಾಲಿ ನಿವೇಶನ ಸ್ವಚ್ಛ ಮಾಡಿದ ಶಾಸಕ

By Web DeskFirst Published Oct 15, 2019, 12:36 PM IST
Highlights

ಮೈಸೂರಿನ ಕೆ. ಆರ್ ನಗರದ ಶಾಸಕ ಎಸ್‌. ಎ. ರಾಮದಾಸ್ ಅವರು ಜೆಸಿಬಿ ಏರಿ ಖಾಲಿ ನಿವೇಶನವನ್ನು ಸ್ವಚ್ಛ ಮಾಡಿದ್ದಾರೆ. ಈ ಮೂಲಕ ಖಾಲಿ ನಿವೇಶನದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಮೈಸೂರು(ಅ.15): ಮೈಸೂರಿನ ಕೆ. ಆರ್ ನಗರದ ಶಾಸಕ ಎಸ್‌. ಎ. ರಾಮದಾಸ್ ಅವರು ಜೆಸಿಬಿ ಏರಿ ಖಾಲಿ ನಿವೇಶನವನ್ನು ಸ್ವಚ್ಛ ಮಾಡಿದ್ದಾರೆ. ಈ ಮೂಲಕ ಖಾಲಿ ನಿವೇಶನದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಸ್ವತಃ ಜೆಸಿಬಿಯನ್ನು ಏರಿ ಖಾಲಿ ನಿವೇಶನವನ್ನು ಸ್ವಚ್ಛಗೊಳಿಸಿ, ಜೆ.ಪಿ‌.ನಗರದ ಪೊಲೀಸ್ ಬೂತ್‌ ಬಳಿ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.  ಸ್ವಚ್ಛತೆ ಮಾಡಿದ ಬಳಿಕ ಚದರಡಿಗೆ 2 ರೂ. ನಂತೆ ಸೆಸ್ ಸಂಗ್ರಹ ಮಾಡಲಾಗಿದೆ.

ಎನ್‌ಟಿಎಂಸ್ ಶಾಲೆ ಹಸ್ತಾಂತರವಿಲ್ಲ, ಯಥಾಸ್ಥಿತಿಯಲ್ಲಿ ನಡೆಸಲು ಸೂಚನೆ

ಪಾಲಿಕೆಯಿಂದ 20 ಸಾವಿರ ಸೈಟ್‌ಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಚದರಡಿಗೆ 2 ರೂ.ನಂತೆ ಸೈಟ್ ಮಾಲೀಕರಿಂದ ಹಣ ಸಂಗ್ರಹಿಸಲಾಗುತ್ತಿದೆ. ಹಾಗೆಯೇ ಇನ್ನೂ ಖಾಲಿ ಸೈಟ್‌ಗಳಿದ್ದಲ್ಲಿ ಅವುಗಳ ಬಗ್ಗೆ ಮಾಹಿತಿ ರವಾನಿಸಲು ಸೂಚನೆ ನೀಡಲಾಗಿದೆ.

ಖಾಲಿ ಸೈಟ್‌ನಲ್ಲಿ ಗಿಡಗಂಟೆಗಳು ತುಂಬಿ ನಿಂತಿರುವುದು ಸಾಮಾನ್ಯ. ಈ ರೀತಿ ಇದ್ದಲ್ಲಿ ಅಂತ ಗಿಡಗಂಟೆಗಳ ಫೋಟೋ ತೆಗೆದು ಪಾಲಿಕೆ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡಲು ಸೂಚನೆ ನೀಡಲಾಗಿದೆ. ನಂತರ ಅವುಗಳನ್ನೂ ಸ್ವಚ್ಛಗೊಳಿಸುವ ಕ್ರಮ ಕೈಗೊಳ್ಳಲಾಗುತ್ತದೆ.

ಸೆಸ್ ಹಣ ಸಂಗ್ರಹ:

ಸೈಟ್ ಸ್ವಚ್ಛತೆ ಮಾಡಿ ಟೆಂಡರ್‌ದಾರನಿಂದ ಹಣ ಸಂಗ್ರಹಿಸಲು ಕಾರ್ಯಕ್ರಮ ರೂಪಿಸಲಾಗಿದ್ದು, ಸ್ವಚ್ಛವಾದ ಬಳಿಕ ಸೆಸ್ ಹಣ ನಿಗದಿ ಮಾಡಿ ಸಂಗ್ರಹಿಸಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ಖಾಲಿ ಸೈಟ್‌ಗಳ ಸ್ವಚ್ಛತೆ ನಡೆಯಲಿದೆ. ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳೂ ಶಾಸಕರಿಗೆ ಕೈ ಜೋಡಿಸಿದ್ದಾರೆ.

ಮೈಸೂರು ವಿಶ್ವದ್ಯಾಲಯದಲ್ಲಿ ಬೌದ್ಧ ಅಧ್ಯಯನ ಕೇಂದ್ರ

click me!