ನಾನು ತಾಂತ್ರಿಕವಾಗಿ JDSನಲ್ಲಿದ್ದೇನೆ ಹೊರತು ಮಾನಸಿಕವಾಗಿ ಇಲ್ಲ : ದೇವೇಗೌಡ

By Web Desk  |  First Published Nov 5, 2019, 12:26 PM IST

ನಾನು ತಾಂತ್ರಿಕವಾಗಿ ಜೆಡಿಎಸ್ ನಲ್ಲಿ ಇದ್ದೇನೆಯೇ ಹೊರತು ಮಾನಸಿಕವಾಗಿ ಇಲ್ಲ ಎನ್ನುವ ಮೂಲಕ ದೇವೇಗೌಡರು ತಮ್ಮ ಮುಂದಿನ ರಾಜಕೀಯದ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದ್ದಾರೆ. 


ಮೈಸೂರು [ನ.05]: ನಾನು ತಾಂತ್ರಿಕವಾಗಿ ಜೆಡಿಎಸ್ ನಲ್ಲಿದ್ದೇನೆಯೇ ಹೊರತು ಮಾನಸಿಕವಾಗಿ ಇಲ್ಲ ಎನ್ನುವುದು ಸತ್ಯ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಮೂರು ವರ್ಷಗಳು ಬಾಕಿ ಇದೆ. ಮುಂದೇನಾಗಲಿದೆ ಎನ್ನುವುದನ್ನು ಕಾದು ನೋಡೋಣ ಎಂದು ಹೇಳಿದ್ದಾರೆ. 

Latest Videos

ತಮ್ಮ ಪತ್ನಿ ಸಹಕಾರ ಕ್ಷೇತ್ರದ ಅಧ್ಯಕ್ಷೆಯಾಗಿದ್ದು ಅವರಿಗೂ ಶಾಸಕಿಯಾಗುವ ಅರ್ಹತೆ ಇದೆ. ನನ್ನ ಮಗನೂ ಎರಡು ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಿದ್ದಾನೆ. ಅವನಿಗೂ  ಶಾಸಕನಾಗುವ ಅರ್ಹತೆ ಇದೆ ಎಂದು ಕುಟುಂಬ ಸದಸ್ಯರು ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೇ ತಮಗಿನ್ನೂಚುನಾವಣೆ ಸಂಬಂಧ ಯಾವುದೇ ಪಕ್ಷದಿಂದ ಆಹ್ವಾನ ಬಂದಿಲ್ಲ. ನಾನು ಎಲ್ಲಿಗೆ ಹೋಗುವ ಪ್ರಶ್ನೆಯೂ ಇಲ್ಲ. ನನಗೆ ಚುನಾವಣೆಗೆ ಸಂಬಂಧವೂ ಇಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದರು. 

ಈಗಾಗಲೇ ಜಿ.ಟಿ ದೇವೇಗೌಡರು ಬಿಜೆಪಿ ನಾಯಕರೊಂದಿಗೆ ಆತ್ಮೀಯತೆ ಹೊಂದಿದ್ದು, ಹಲವು ಕಾರ್ಯಕ್ರಮಗಳಲ್ಲಿಯೂ ಬಿಜೆಪಿ ಮುಖಂಡರೊಂದಿಗೆ ಕಾಣಿಸಿಕೊಂಡಿದ್ದರು.  ಅಲ್ಲದೇ ಜೆಡಿಎಸ್ ತೊರೆಯಲಿದ್ದಾರೆ ಎನ್ನುವ ಚರ್ಚೆಯೂ ನಡೆದಿತ್ತು. ಆದರೆ ಸದ್ಯಕ್ಕೆ ತಾವೆಲ್ಲಿಯೂ ಹೋಗಲ್ಲ ಎಂದಿದ್ದಾರೆ. ಆದರೂ ದೂರಾಗುವ ಬಗ್ಗೆ ತಮ್ಮ ಮಾತಿನಲ್ಲಿ ಸುಳಿವು ನೀಡಿದ್ದಾರೆ. 

1970ರಲ್ಲಿ ಕಾಂಗ್ರೆಸಿನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಜಿ.ಟಿ ದೇವೇಗೌಡರು ಬಳಿಕ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕಳೆದ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. 

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!