ಅಭಿವೃದ್ಧಿಯೇ ಗುರಿ, ರಾಜಕಾರಣ ಮಾಡಲ್ಲ: ಸುಮಲತಾ

By Kannadaprabha News  |  First Published Oct 17, 2019, 12:00 PM IST

ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಮತದಾರರ ಋುಣ ತೀರಿಸುವುದು ನನ್ನ ಗುರಿಯಾಗಿದ್ದು, ಎಂದಿಗೂ ನಾನು ರಾಜಕಾರಣ ಮಾಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ. ಕೆ.ಆರ್‌.ನಗರದ ಶ್ರೀ ಕೃಷ್ಣಮಂದಿರದಲ್ಲಿ ತಾಲೂಕು ಸ್ವಾಭಿಮಾನಿ ಬಳಗದ ವತಿಯಿಂದ ನಡೆದ ಮತದಾರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ್ದಾರೆ.


ಮೈಸೂರು(ಅ.17): ಪಕ್ಷಾತೀತ ಮತ್ತು ಜಾತ್ಯತೀತವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಮತದಾರರ ಋುಣ ತೀರಿಸುವುದು ನನ್ನ ಗುರಿಯಾಗಿದ್ದು, ಎಂದಿಗೂ ನಾನು ರಾಜಕಾರಣ ಮಾಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ.

ಕೆ.ಆರ್‌.ನಗರದ ಶ್ರೀ ಕೃಷ್ಣಮಂದಿರದಲ್ಲಿ ತಾಲೂಕು ಸ್ವಾಭಿಮಾನಿ ಬಳಗದ ವತಿಯಿಂದ ನಡೆದ ಮತದಾರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು ನಾನು ಸಮಾಜ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆಯೇ ಹೊರತು ರಾಜಕೀಯಕ್ಕೆ ಅಲ್ಲ, ಆದ್ದರಿಂದ ಎಲ್ಲರನ್ನು ಆತ್ಮೀಯವಾಗಿ ನೋಡುತ್ತೇನೆ ಎಂದಿದ್ದಾರೆ.

Tap to resize

Latest Videos

ಮೈಸೂರು: ಪಿಎಚ್‌ಡಿ ಮಾಡ್ತಿದ್ದಾರೆ ಸಚಿವ ಸಿ. ಟಿ. ರವಿ

ಚುನಾವಣೆ ಸಂದರ್ಭದಲ್ಲಿ ಎಲ್ಲರೂ ನನ್ನ ಬೆನ್ನೆಲುಬಾಗಿ ನಿಂತು ಆರ್ಶೀವಾದ ಮಾಡಿದ್ದಾರೆ, ಹಾಗಾಗಿ ಮುಂದಿನ 5 ವರ್ಷಗಳಲ್ಲಿ ಅವರ ಋುಣ ತೀರಿಸುವುದು ನನ್ನ ಗುರಿಯಾಗಿದ್ದು, ಇದರ ಜತೆಗೆ ಪಕ್ಷದ ಆದೇಶವನ್ನು ಧಿಕ್ಕರಿಸಿ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಅಭ್ಯರ್ಥಿಯನ್ನು ಸ್ಪರ್ಧಾಕಣಕ್ಕಿಳಿಸಿದೆ ಗೆಲುವನ್ನು ಹತ್ತಿರವನ್ನಾಗಿಸಿದ ಬಿಜೆಪಿಯವರಿಗೂ ಕೃತಜ್ಞಳಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಪಕ್ಷ ಮತ್ತು ಜಾತಿಯನ್ನು ಧಿಕ್ಕರಿಸಿ ಸ್ವಾಭಿಮಾನವನ್ನು ಎತ್ತಿ ಹಿಡಿದವರನ್ನು ಜೀವಮಾನವಿರುವವರೆಗೂ ಮರೆಯಲು ಸಾಧ್ಯವಿಲ್ಲ, ಸಾಮಾನ್ಯ ಮತದಾರರಿಂದ ಹಿಡಿದು ರೈತರವರೆಗೂ ಜನಬೆಂಬಲವಿದ್ದು, ಮುಂದೆಯೂ ಇದು ನಿರಂತರವಾಗಿರಬೇಕು, ಅದನ್ನು ಉಳಿಸಿಕೊಳ್ಳಲು ನಾನು ಕ್ರಿಯಾಶೀಲಳಾಗಿರುತ್ತೇನೆ ಎಂದಿದ್ದಾರೆ.

'ಕಾಂಗ್ರೆಸಿಗರೇ ಒದ್ದಾಡ್ತಿದ್ದಾರೆ, ಬಿಜೆಪಿಯವ್ರು ಅಲ್ಲೋಗಿ ಏನ್ಮಾಡ್ತಾರೆ'..?

ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಕೊಡಿಸುವುದರದೊಂದಿಗೆ ನಿಮ್ಮೆಲ್ಲರ ಸೇವೆಯನ್ನು ಮಾಡಲು ಬದ್ದಳಾಗಿದ್ದು, ಎಲ್ಲರೂ ನನಗೆ ಸಲಹೆ ಮತ್ತು ಸಹಕಾರ ನೀಡಬೇಕು ಎಂದು ಸಂಸದರು ಕೋರಿದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ ಮಾತನಾಡಿ, ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಕೆ.ಆರ್‌. ನಗರ ತಾಲೂಕು ತುಂಬಾ ದೂರದಲ್ಲಿದ್ದು, ಮತದಾರರು ಸಂಸದರು ಮತ್ತು ಅವರ ಸಿಬ್ಬಂದಿಯನ್ನು ಭೇಟಿ ಮಾಡಿ ಅಹವಾಲು ಹೇಳಿಕೊಳ್ಳಲು ತೊಂದರೆಯಾಗಲಿದ್ದು, ಇದನ್ನು ನೀಗಿಸಲು ಪಟ್ಟಣದಲ್ಲಿಯೇ ಕಚೇರಿ ಆರಂಭಿಸಬೇಕು ಎಂದು ಸಂಸದರನ್ನು ಮನವಿ ಮಾಡಿದ್ದಾರೆ.

ಶಾಸಕ ಸ್ಥಾನಕ್ಕೆ JDS ಶಾಸಕ ಸಾ ರಾ ಮಹೇಶ್ ರಾಜೀನಾಮೆ!?

ಸಭೆಯ ನಂತರ ಸಂಸದರು ಸಾರ್ವಜನಿಕರಿಂದ ಅಹವಾಲು ಆಲಿಸಿ ಅವುಗಳಿಗೆ ಸ್ಪಂದಿಸುವುದಾಗಿ ಭರವಸೆಯಿತ್ತರು. ತಾಪಂ ಅಧ್ಯಕ್ಷೆ ಮಲ್ಲಿಕಾರವಿಕುಮಾರ್‌, ಚಿತ್ರನಟ ಮತ್ತು ನಿರ್ಮಾಪಕ ರಾಕ್‌ಲೈನ್‌ವೆಂಕಟೇಶ್‌, ಜಿಪಂ ಮಾಜಿ ಸದಸ್ಯರಾದ ಜಿ.ಆರ್‌. ರಾಮೇಗೌಡ, ರಾಜಯ್ಯ, ಚುಂಚನಕಟ್ಟೆಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಹಾಡ್ಯಕುಮಾರ್‌, ಕೆಪಿಸಿಸಿ ಸದಸ್ಯ ಎಸ್‌.ಪಿ. ತಮ್ಮಯ್ಯ ಮಾತನಾಡಿದ್ದಾರೆ.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌. ಮಹದೇವ್‌, ಉದಯಶಂಕರ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಗಡ್ಡಮಹೇಶ್‌, ಪುರಸಭೆ ಮಾಜಿ ಉಪಾಧ್ಯಕ್ಷ ಶಿವಶಂಕರ್‌, ಪುರಸಭೆ ಸದಸ್ಯರಾದ ಪ್ರಕಾಶ್‌, ಶಂಕರ್‌, ನಟರಾಜು, ತಾಪಂ ಸದಸ್ಯ ಕುಮಾರ್‌, ಮಾಜಿ ಸದಸ್ಯರಾದ ಸಣ್ಣಪ್ಪ, ಶಕುಂತಲಮ್ಮ, ಉಮೇಶ್‌, ಮುಖಂಡರಾದ ನಾಗರಾಜನಾಯಕ, ಜಗದೀಶ್‌, ದೇವರಾಜು, ಗುಣಪಾಲ್‌ಜೈನ್‌, ಡಿ.ಜೆ. ಬಸವರಾಜು ಇದ್ದರು.

click me!