ಕಾಂಗ್ರೆಸ್ ಮುಳುಗೋ ಹಡುಗು, ಅಲಲ್ಲಿರೋರೇ ಒದ್ದಾಡುತ್ತಿರುವಾಗ ಬಿಜೆಪಿಯವ್ರು ಅಲ್ಲೋಗಿ ಏನ್ಮಾಡ್ತಾರೆ ಎಂದು ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಒಂದು ವೇಳೆ ಹೋದರೆ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಂತೆ ಎಂದಿದ್ದಾರೆ.
ಮೈಸೂರು(ಅ.17): ಕಾಂಗ್ರೆಸ್ ಈಗ ಮುಳುಗುವ ಹಡಗು. ಅಲ್ಲಿಗೆ ಬಿಜೆಪಿಯವರು ಹೋಗಿ ಏನು ಮಾಡುತ್ತಾರೆ. ಆ ಪಕ್ಷದಲ್ಲಿರುವವರೇ ಒದ್ದಾಡುತ್ತಿದ್ದಾರೆ. ಹಾಗೆ ಒಂದು ವೇಳೆ ಹೋದರೆ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿದ್ದಾರೆ.
ನಗರ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸಾಂಸ್ಥಿಕ ಚುನಾವಣೆ ಕುರಿತ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
undefined
ಮೈಸೂರು: ಪಿಎಚ್‌ಡಿ ಮಾಡ್ತಿದ್ದಾರೆ ಸಚಿವ ಸಿ. ಟಿ. ರವಿ
ಕೆಲವು ರಾಜಕೀಯ ವಿರೋಧಿಗಳು ಯಡಿಯೂರಪ್ಪ ಅವರನ್ನು ಸೈಡ್‌ಲೈನ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ರಾಜಕೀಯ ಇಳಿ ವಯಸ್ಸಿನಲ್ಲಿರುವ ಯಡಿಯೂರಪ್ಪನವರ ಸಾಮರ್ಥ್ಯವನ್ನು ಪರಿಗಣಿಸಿ ನಾಲ್ಕು ಬಾರಿ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಲಾಗಿದೆ. ಅವರು ಫ್ರೆಂಟ್ ಲೈನ್‌ನಲ್ಲಿಯೇ ಇದ್ದಾರೆ. ಮಧ್ಯದಲ್ಲಿಯೇ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೆಕ್ಕ ಗೊತ್ತು ಎಂದು ತಿಳಿದುಕೊಂಡಿದ್ದೇನೆ. ಅವರ ಸರ್ಕಾರದ ಅವಧಿಯಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ 3,600 ತಾತ್ಕಾಲಿಕ ಪರಿಹಾರ ನೀಡಲಾಗುತ್ತಿತ್ತು. ನಮ್ಮ ಸರ್ಕಾರವು 10 ಸಾವಿರ ನೀಡುತ್ತಿದೆ. ಮನೆ ಕಳೆದುಕೊಂಡವರಿಗೆ 95,100 ನೀಡಲಾಗುತ್ತಿತ್ತು.
'ಸಾ.ರಾ. ಮಹೇಶ್ ತಾಲೂಕನ್ನೇ ಒಡೆದಿದ್ದಾರೆ, ಹುಣಸೂರು ಜಿಲ್ಲೆ ಯಾಕಾಗ್ಬಾರ್ದು'..?
ನಾವು 5 ಲಕ್ಷ ಕೊಡುತ್ತಿದ್ದೇವೆ. ಶೇ. 97 ರಷ್ಟುಮಂದಿ ಸಂತ್ರಸ್ತರಿಗೆ ಪರಿಹಾರ ಮುಟ್ಟಿದೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಂಡರೆ ಆಗುವುದಿಲ್ಲ. ಆದ್ದರಿಂದ ಎಲ್ಲಾ ಕೆಲಸದಲ್ಲಿಯೂ ತಪ್ಪು ಹುಡುಕುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.