ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಬೇಕಿದೆ ಎಂದ್ರು ವಿಶ್ವನಾಥ್‌

By Kannadaprabha NewsFirst Published Oct 18, 2019, 10:45 AM IST
Highlights

ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಬೇಕು ಎಂದು ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಹೇಳಿದ್ದಾರೆ. ಸಾರ್ವಭೌಮ ವಿಧಾನಸೌಧದಲ್ಲಿ ಗುರುತರವಾದ ಆರೋಪ ಮಾಡಿರುವ ಕಾರಣ ಖರೀದಿಸಿದವನ ಜತೆಗೆ ಬರುವಂತೆ ಹೇಳಿದ್ದೇನೆ. ನನ್ನನ್ನು ಕೊಂಡುಕೊಂಡ ಭೂಪನನ್ನು ನಾನು ನೋಡಬೇಡವೇ ಎಂದು ಪ್ರಶ್ನಿಸಿದ್ದಾರೆ.

ಮೈಸೂರು(ಅ.18): ನನ್ನನ್ನು ಕೊಂಡುಕೊಂಡ ಭೂಪನನ್ನು ನಾನು ನೋಡಬೇಡವೇ ಎಂದು ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಪ್ರಶ್ನಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಹೊರಗೆ ಸಾ.ರಾ. ಮಹೇಶ್‌ಗಾಗಿ ಕಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಆಣೆ- ಪ್ರಮಾಣದ ವಿಚಾರವಲ್ಲ ಇದು. ನನ್ನನ್ನು ಕೊಂಡೊಕೊಂಡವನು ಬಂದು 25 ಕೋಟಿ ರು. ಕೊಟ್ಟಿದ್ದೇನೆಂದು ಹೇಳಿದರೆ ನಾನು ಆಗ ಮಾತನಾಡುವೆ. ನಾನು ಮೂರು ದಿನದಿಂದ ಹೇಳುತ್ತಿದ್ದೇನೆ. ನನ್ನ ಅಹವಾಲು ಒಂದೇ. ನನ್ನ ಮೇಲೆ ಸಾರ್ವಭೌಮ ವಿಧಾನಸೌಧದಲ್ಲಿ ಗುರುತರವಾದ ಆರೋಪ ಮಾಡಿರುವ ಕಾರಣ ಖರೀದಿಸಿದವನ ಜತೆಗೆ ಬರುವಂತೆ ಹೇಳಿದ್ದೇನೆ. ನನ್ನನ್ನು ಕೊಂಡುಕೊಂಡ ಭೂಪನನ್ನು ನಾನು ನೋಡಬೇಡವೇ ಎಂದು ಪ್ರಶ್ನಿಸಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ

ಆಣೆ ಮಾಡುವಂತೆ ಸಾ.ರಾ.ಮಹೇಶ್‌ ಸಾವಿರ ಕೇಳ್ತಾನೆ. ನನ್ನ ವಯಸ್ಸೇನು, ಅನುಭವವೇನು? 25 ಕೋಟಿ ರು. ಕೊಟ್ಟು ಕೊಂಡವನು ಬರಲಿಲ್ಲ ಅಂದ್ರೆ ಸುಮ್ಮ ಸುಮ್ಮನೇ ಪ್ರಮಾಣ ಯಾಕೆ ಮಾಡಲಿ. ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು. ಬರೀ ಸುಳ್ಳಿನ ಮಾತು. ಇನ್ನು ಹುಸಿ ರಾಜೀನಾಮೆ ಪತ್ರ ಕಳುಹಿಸಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ ಎಂದರು.

ವಿಧಾನಸೌಧದಲ್ಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಡಿ ಪಡೆದಿದ್ದೇನೆ. ಕಾನೂನಿನ ಮೂಲಕವೂ ಹೋರಾಟ ಮಾಡುತ್ತೇನೆ. ಸಾರ್ವಭೌಮ ಸದನದಲ್ಲಿ ಪ್ರಸ್ತಾಪಿಸಿದ್ದನ್ನು ನೋಡಿ ಸುಮ್ಮನೇ ಇರಲೇನು? ಸುಮ್ಮನೇ ಬಿಡಬೇಕಾ ಎಂದು ಗುಡುಗಿದ್ದಾರೆ.

ಮಂಡ್ಯ: ಕಾರು ಅಡ್ಡಗಟ್ಟಿ ದೋಚಿದ್ರು 80 ಲಕ್ಷ

click me!