ಮೈಸೂರಿನ NTMS ಶಾಲೆ ಉಳಿಸಲು ರಿಷಭ್‌ ಶೆಟ್ಟಿ ಬೆಂಬಲ

By Kannadaprabha NewsFirst Published Oct 17, 2019, 12:37 PM IST
Highlights

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಗಡಿನಾಡಿನ ಕನ್ನಡ ಶಾಲೆಯ ಬವಣೆಯನ್ನು ತೆರೆದಿಟ್ಟ ನಿರ್ದೇಶಕ ರಿಷಭ್ ಶೆಟ್ಟಿ ಮೈಸೂರಿನ ಎನ್‌ಟಿಂಎಎಸ್‌ ಶಾಲೆಯ ಬೆಂಬಲಕ್ಕೆ ನಿಂತಿದ್ದಾರೆ. NTMS ಬಗ್ಗೆ ರಿಷಭ್ ಹೇಳಿದ್ದೇನು ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

ಮೈಸೂರು(ಅ.17): ನಗರದ ಎನ್‌ಟಿಂಎಎಸ್‌ ಶಾಲೆ, ಮೊದಲ ಬಾಲಕಿಯರ ಶಾಲೆ. 138 ವರ್ಷಗಳ ಇತಿಹಾಸ ಇರುವ ಈ ಶಾಲೆಯನ್ನು ಮುಚ್ಚದಂತೆ ರಾಜ್ಯದ ಎಲ್ಲ ಕನ್ನಡ ಪರ ಹೋರಾಟಗಾರರು ಬೆಂಬಲ ನೀಡಬೇಕು ಎಂದು ಚಲನಚಿತ್ರ ನಿರ್ದೇಶಕ ರಿಷಬ್‌ ಶೆಟ್ಟಿಮನವಿ ಮಾಡಿದ್ದಾರೆ.

ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು, 1881ರಲ್ಲಿ ಮೈಸೂರು ಮಹಾರಾಜರು ಜಾಗ ಕೊಟ್ಟು, ಅಲ್ಲಿ ಶಾಲೆ ತೆರೆಯಲು ಅವಕಾಶ ಮಾಡಿಕೊಟ್ಟಿದ್ದರು. ಇಷ್ಟುಸುದೀರ್ಘ ಕಾಲವಾಗಿದ್ದರೂ ಕಟ್ಟಡ ಗಟ್ಟಿಮುಟ್ಟಾಗಿದೆ. ಇದನ್ನು ಮುಚ್ಚದಂತೆ ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

ಎನ್‌ಟಿಎಂಸ್ ಶಾಲೆ ಹಸ್ತಾಂತರವಿಲ್ಲ, ಯಥಾಸ್ಥಿತಿಯಲ್ಲಿ ನಡೆಸಲು ಸೂಚನೆ

ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಹಂತದಲ್ಲಿ ಈ ಶಾಲೆಯಲ್ಲೂ ಮಕ್ಕಳ ಸಂಖ್ಯೆ ಕ್ಷೀಣಿಸಿದ್ದರೂ ಕನ್ನಡ ಮಾಧ್ಯಮ ಶಾಲೆಗೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಸುತ್ತಮುತ್ತಲಿನ ಜನರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸಿದ್ದರು. ಈಗ ಸಾಕಷ್ಟುವಿದ್ಯಾರ್ಥಿಗಳ ಸಂಖ್ಯೆ ಇರುವುದು ಗಮನಾರ್ಹ ಎಂದಿದ್ದಾರೆ.

ಕನ್ನಡ ಶಾಲೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಮೈಸೂರಿನವರು ಮಾತ್ರವಲ್ಲದೆ, ರಾಜ್ಯದ ಎಲ್ಲ ಜನರೂ ಈ ಶಾಲೆ ಮುಚ್ಚದಂತೆ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಬೇಕು. ಸರ್ಕಾರ ಕೂಡ ಈ ಶಾಲೆಯನ್ನು ಮುಚ್ಚದೆ ಕಾಪಾಡಿಕೊಂಡು, ಅದಕ್ಕೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರ ಸಲಹೆ ನೀಡಿದ್ದಾರೆ.

ಮೈಸೂರು: 100 ವರ್ಷ ಹಳೆಯ ಶಾಲೆ ರಾತ್ರೋರಾತ್ರಿ ಹಸ್ತಾಂತರ..?

click me!