ನಾನಿನ್ನೂ ಯಾವ ಪಕ್ಷದಲ್ಲಿ ಇದ್ದೀನಿ ಎಂಬುದೇ ನನಗೆ ಗೊತ್ತಾಗ್ತಿಲ್ಲ ಎಂದ ಅನರ್ಹ ಶಾಸಕ

By Web DeskFirst Published Nov 12, 2019, 12:33 PM IST
Highlights

ಹುಣಸೂರು ಕ್ಷೇತ್ರ ಉಪ ಚುನಾವಣೆ| ಚುನಾವಣಾ ಆಯೋಗ ಎಲೆಕ್ಷನ್ ಕ್ಯಾಲೆಂಡರ್ ಹಾಕಿದೆ| ಯಾರು ಬೇಕಾದರೂ ಅರ್ಜಿ ಹಾಕಬಹುದು| ಯಾಕಿಷ್ಟು ಆತುರ, ಅರ್ಜಿ ‌ಹಾಕಲು ನ. 18 ರ ವರೆಗೆ ಟೈಂ ಇದೆ| ಇನ್ನೂ ಕಾಲಾವಾಕಾಶ ಇದೆ ಎಂದ ಅನರ್ಹ ಶಾಸಕ ಹೆಚ್. ವಿಶ್ವನಾಥ|

ಮೈಸೂರು[ನ.12]:  ನಾನಿನ್ನೂ ಯಾವ ಪಕ್ಷದಲ್ಲಿ ಇದ್ದೀನಿ ಎಂಬುದೇ ಗೊತ್ತಾಗುತ್ತಿಲ್ಲ. ಇನ್ನು ಉಪ ಚುನಾವಣೆಯಲ್ಲಿ ಯಾವ ಪಕ್ಷದ ಪರ ಸರ್ಧೆ ಮಾಡುತ್ತೇನೆ ಎಂದು ಹೇಗೆ ಹೇಳಲು ಸಾಧ್ಯ ಎಂದು ಜೆಡಿಎಸ್‌ನ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ಹೇಳಿದ್ದಾರೆ. 

ಮಂಗಳವಾರ ನಗರದಲ್ಲಿ ಮಾಧ್ಯಮದವರು ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣಾ ಆಯೋಗ ಎಲೆಕ್ಷನ್ ಕ್ಯಾಲೆಂಡರ್ ಹಾಕಿದೆ. ಹೀಗಿರುವಾಗ ಯಾರು ಬೇಕಾದರೂ ಅರ್ಜಿ ಹಾಕಬಹುದು. ಯಾಕಿಷ್ಟು ಆತುರ, ಅರ್ಜಿ ‌ಹಾಕಲು ನ. 18 ರ ವರೆಗೆ ಟೈಂ ಇದೆ. ಇನ್ನೂ ಕಾಲಾವಾಕಾಶ ಇದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಬಿಜೆಪಿ ಟಿಕೆಟ್ ಗೊಂದಲಗಳ ಬಗ್ಗೆ ಮಾತನಾಡಿದ ಹೆಚ್.ವಿಶ್ವನಾಥ್ ಅವರು, ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ತೀರ್ಮಾನ ಮಾಡಿದ ತೀರ್ಮಾನ‌ ಅಗೋದು. ಆ ಸಂದರ್ಭದಲ್ಲಿ ಯಾರನ್ನು ಹಾಕಬೇಕೋ ಅವರನ್ನು ಹಾಕುತ್ತಾರೆ. ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಮಾನದ ನಂತರದಲ್ಲಿ ಬಿಜೆಪಿ ಹೈ ಕಮಾಂಡ್ ಸಭೆ ನಡೆಸಿ‌ ಸೂಕ್ತ ತೀರ್ಮಾನ ಮಾಡುತ್ತೆ. ಇವತ್ತೇ ಎಲ್ಲವನ್ನೂ ಹೇಳಲು ಆಗೋದಿಲ್ಲ. ನಾವೂ ಕೂಡ ಬುಧವಾರದ ವರೆಗೆ ಕಾಯುತ್ತೇವೆ ಎಂದು ಹೇಳಿದ್ದಾರೆ.

ಅನರ್ಹ ಶಾಸಕರ ಸಂಬಂಧ ಸುಪ್ರೀಂಕೋರ್ಟ್ ಕೂಡ ಐತಿಹಾಸಿಕ ತೀರ್ಪು ಪ್ರಕಟ ಮಾಡಲಿದೆ. ದಯಮಾಡಿ ಅಲ್ಲಿವರೆಗೆ ಕಾಯಿರಿ ಎಂದು ತಿಳಿಸಿದ್ದಾರೆ. 

ಇನ್ನು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಹುಣಸೂರಿನಲ್ಲಿ ಓಡಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು,  ಯೋಗೇಶ್ವರ್ ನನ್ನ ಸ್ನೇಹಿತ, ಅವರ ಓಡಾಟದಿಂದ ಯಾವುದೇ ಗೊಂದಲ‌ ಆಗಿಲ್ಲ. ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಿರ್ಧಾರ ಆಗಿಲ್ಲ ಎಂದು ಹೇಳಿದ್ದಾರೆ. 
 

click me!