ಬೆಳೆಹಾನಿ ಪರಿಹಾರ​: ಆಧಾರ್‌ ಮೂಲಕ ಸಂದಾಯ ವ್ಯವಸ್ಥೆ

By Kannadaprabha News  |  First Published Nov 11, 2019, 2:53 PM IST

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯು 2018-19 ನೇ ಸಾಲಿನ ಹಿಂಗಾರಿನಲ್ಲಿ ಬರದಿಂದಾಗಿ ಹಾಗೂ ಆಗಸ್ಟ್‌ 2019 ರಲ್ಲಿ ಉಂಟಾದ ಪ್ರವಾಹದಿಂದಾದ ಬೆಳೆ ಹಾನಿಗೆ ಪರಿಹಾರವಾಗಿ ಇನ್‌-ಪುಟ್‌ ಸಬ್ಸಿಡಿಯನ್ನು (ಪರಿಹಾರ ಸಹಾಯ ಧನ) ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಆಧಾರ್‌ ಸಂದಾಯ ವ್ಯವಸ್ಥೆ ಮೂಲಕ ಸಂದಾಯ ಮಾಡುತ್ತಿದೆ.


ಮೈಸೂರು(ನ.11): ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯು 2018-19 ನೇ ಸಾಲಿನ ಹಿಂಗಾರಿನಲ್ಲಿ ಬರದಿಂದಾಗಿ ಹಾಗೂ ಆಗಸ್ಟ್‌ 2019 ರಲ್ಲಿ ಉಂಟಾದ ಪ್ರವಾಹದಿಂದಾದ ಬೆಳೆ ಹಾನಿಗೆ ಪರಿಹಾರವಾಗಿ ಇನ್‌-ಪುಟ್‌ ಸಬ್ಸಿಡಿಯನ್ನು (ಪರಿಹಾರ ಸಹಾಯ ಧನ) ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಆಧಾರ್‌ ಸಂದಾಯ ವ್ಯವಸ್ಥೆ ಮೂಲಕ ಸಂದಾಯ ಮಾಡುತ್ತಿದೆ.

ಆಧಾರ್‌ ಸಂಖ್ಯೆಯ ಸಂಯೋಜನೆಯನ್ನು ಖಾತರಿಪಡಿಸಿಕೊಳ್ಳಲು ಹಾಗೂ ಇನ್‌-ಪುಟ್‌ ಸಬ್ಸಿಡಿಯನ್ನು ಶೀಘ್ರವಾಗಿ ಸಂದಾಯ ಮಾಡುವ ಸಲುವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಒಂದು ರುಪಾಯಿಯನ್ನು ಪ್ರಾಯೋಗಿಕವಾಗಿ ಸಂದಾಯ ಮಾಡಲಾಗುತ್ತಿದೆ.

Tap to resize

Latest Videos

undefined

ಮೈಸೂರು: ಅಯೋಧ್ಯೆ ತೀರ್ಪು ಸ್ವಾಗತಿಸಿ ಸಂಭ್ರಮಿಸಿದ ಹಿಂದೂ ಮುಸ್ಲಿಂ ಬಾಂಧವರು

ಫಲಾನುಭವಿ ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಸಂಯೋಜನೆಗೊಂಡಿರುವುದು ಖಾತರಿಯಾದ ನಂತರ ಎರಡು ಕಚೇರಿ ಕೆಲಸದ ದಿನಗಳಲ್ಲಿ ಇನ್‌-ಪುಟ್‌ ಸಬ್ಸಿಡಿಯ ಸಂಪೂರ್ಣ ಮೊತ್ತವನ್ನು ಸಂಧಾಯ ಮಾಡಲಾಗುವುದು.

ಪ್ರಸ್ತುತ ಸಂಧಾಯ ಮಾಡಲಾಗುತ್ತಿರುವ ಒಂದು ರುಪಾಯಿಯನ್ನು ಪ್ರಾಯೋಗಿಕವಾಗಿ ಮಾತ್ರವೆಂದು ಪುನರುಚ್ಚಿಸಾಲಾಗಿದೆ. ಹೀಗಾಗಿ, ರೈತ ಭಾಂದವರು ಈ ಬಗ್ಗೆ ಯಾವುದೇ ಗೊಂದಲಕ್ಕೆ ಈಡಾಗಬಾರದೆಂದು ಮನವಿ ಮಾಡಿದೆ. ಈ ಸಂಬಂಧ ಯಾವುದೇ ಸಂದೇಹ ಬಂದಲ್ಲಿ ರೈತರು ತಮ್ಮ ತಾಲೂಕು ತಹಸೀಲ್ದಾರರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಮಗು ಮಲಗಿರುವಾಗಲೇ ಅಂಗನವಾಡಿ ಬಾಗಿಲು ಹಾಕಿ ತೆರಳಿದ ಶಿಕ್ಷಕಿ

click me!