ಬಿಜೆಪಿಗರ ಜೊತೆ ಎಚ್.ವಿಶ್ವನಾಥ್ : ಸುತ್ತೂರು ಮಠದಲ್ಲಿ ರಾಜಕೀಯ ಭವಿಷ್ಯ

Published : Oct 08, 2019, 01:10 PM IST
ಬಿಜೆಪಿಗರ ಜೊತೆ ಎಚ್.ವಿಶ್ವನಾಥ್ : ಸುತ್ತೂರು ಮಠದಲ್ಲಿ ರಾಜಕೀಯ ಭವಿಷ್ಯ

ಸಾರಾಂಶ

ಬಿಜೆಪಿಗರ ಜೊತೆಗೆ ಕಾಣಿಸಿಕೊಂಡ ಅನರ್ಹ ಶಾಸಕ ಎಚ್. ವಿಶ್ವನಾಥ್ ಮೈಸೂರಿನ ಸುತ್ತೂರು ಮಠದಲ್ಲಿ ರಾಜಕೀಯ ಭವಿಷ್ಯ ನುಡಿದಿದ್ದಾರೆ. 

ಮೈಸೂರು [ಅ. 08]: ನಾಡಹಬ್ಬವಾದ ದಸರಾ ವೈಭವದಿಂದ ನಡೆಯುತ್ತಿದೆ. ಸರ್ಕಾರದ ಎಲ್ಲಾ ಅಂಗಗಳೂ ಕೂಡ ಕೆಲಸ ಮಾಡುತ್ತಿವೆ.  ಇಂದು ಜಂಬೂ ಸವಾರಿ ನಡೆಯುತ್ತಿದ್ದು, ನಾಡಿಗೆ ಚಾಮುಂಡಿ ದೇವಿ ಯಶಸ್ಸು ಕರುಣಿಸಲಿ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. 

ಸುತ್ತೂರು ಮಠದಲ್ಲಿ ಬಿಜೆಪಿ ನಾಯಕರ ಜೊತೆಗೆ ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದ ಎಚ್.ವಿಶ್ವನಾಥ್ ಇದು ಬಿಜೆಪಿ ಉಪಹಾರ ಕೂಟ ಅಲ್ಲ. ಮುಖ್ಯಮಂತ್ರಿಗಳು ಬಂದಾಗ ಮಠದಲ್ಲಿ ಉಪಹಾರ ಆಯೋಜಿಸುವುದು ಸಹಜ. ಈ ನಿಟ್ಟಿನಲ್ಲಿ ತಾವು ಪಾಲ್ಗೊಂಡಿರುವುದಾಹಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ವಿಧಾನ ಸಭೆ ಉಪಚುನಾವಣೆ ಬಗ್ಗೆಯೂ ಪ್ರಸ್ತಾಪಿಸಿದ ಎಚ್. ವಿಶ್ವನಾಥ್ ಅನರ್ಹರಾದವರ 15 ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 5ಕ್ಕೆ ಚುನಾವಣೆ ನಿಗದಿಯಾಗಿದೆ. 15 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ಸುತ್ತೂರು ಶ್ರೀ ಮಠದಲ್ಲಿ ಮುಂದಿನ ಚುನಾವಣೆಯ ಬಗ್ಗೆ ವಿಶ್ವನಾಥ್ ಭವಿಷ್ಯ ನುಡಿದರು.  

ಇನ್ನು ಸುಪ್ರೀಂ ಕೋರ್ಟಲ್ಲಿ ಅನರ್ಹ ಶಾಸಕರ ಭವಿಷ್ಯದ ಇದ್ದು, ಅಕ್ಟೋಬರ್ 22ನೇ ತಾರೀಕು ವಿಚಾರಣೆ ನಡೆಯಲಿದೆ. ಈ ಬಗ್ಗೆ ಕಾದು ನೋಡೋಣ ಎಂದು ವಿಶ್ವನಾಥ್ ಹೇಳಿದರು.

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!