ಪ್ರತಾಪ್‌ ಸಿಂಹನ್ನ ನಂಬಬೇಡ, ಹುಷಾರಾಗಿರು: ಸಚಿವ ಸೋಮಣ್ಣಗೆ ಸಿದ್ದು ಎಡ್ವೈಸ್..!

Published : Oct 10, 2019, 08:58 AM IST
ಪ್ರತಾಪ್‌ ಸಿಂಹನ್ನ ನಂಬಬೇಡ, ಹುಷಾರಾಗಿರು: ಸಚಿವ ಸೋಮಣ್ಣಗೆ ಸಿದ್ದು ಎಡ್ವೈಸ್..!

ಸಾರಾಂಶ

ಪ್ರತಾಪ್ ಸಿಂಹನ್ನ ನಂಬಬೇಡ, ಹುಷಾರಾಗಿರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ವಿ. ಸೋಮಣ್ಣ ಅವರಿಗೆ ಎಡ್ವೈಸ್ ಮಾಡಿದ್ದಾರೆ. ದಸರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರತಾಪ್ ಸಿಂಹ ಬಗ್ಗೆ ಇನ್ನೇನೇನು ಹೇಳಿದ್ದಾರೆ ಅನ್ನೋ ಕುತೂಹಲದ ವಿಷಯಗಳು ಇಲ್ಲಿವೆ.

ಮೈಸೂರು(ಅ.10): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ವಿ. ಸೋಮಣ್ಣ ಅವರಿಗೆ ಪ್ರತಾಪ್ ಸಿಂಹ ಜೊತೆ ಹುಷಾರಾಗಿರುವಂತೆ ಹೇಳಿದ್ದಾರೆ.

ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿದ್ದವಾದ್ದರಿಂದ ಬೇಕು ಎಂದೇ ಮೂರ್ನಾಲ್ಕು ಬಾರಿ ಕರೆ ಮಾಡಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ದಸರಾ ಯಶಸ್ವಿ, ಇನ್ನೇನಿದ್ದರೂ ನಿರಾಶ್ರಿತರಿಗೆ ಮನೆ: ಸೋಮಣ್ಣ

ಸಿದ್ದರಾಮಯ್ಯ ಅವರು ಮಾತನಾಡಿ, ಈ ಪ್ರತಾಪಸಿಂಹ ಬಹಳ ಬುದ್ಧಿವಂತ ಇದಾನೆ. ಅವನ ಜೊತೆ ಸ್ವಲ್ಪ ಹುಷಾರಿಗಿರು, ಅವನನ್ನು ಸುಲಭವಾಗಿ ನಂಬಬೇಡ ಎಂದು ಸಲಹೆ ನೀಡಿದ್ದರು. ಅಲ್ಲದೆ ನೀವೆಲ್ಲ ಸೇರಿ ದಸರಾ ಚೆನ್ನಾಗಿ ಮಾಡಿದ್ದೀರಾ ಎಂದು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾಗಿ ಸೋಮಣ್ಣ ತಿಳಿಸಿದ್ದಾರೆ.

ಮೈಸೂರು ಹೇಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಇನ್ನು ಹತ್ತನ್ನೆರಡು ವರ್ಷ ಬಿಟ್ಟರೆ ಬೆಂಗಳೂರಿನಂತೆ ಹಾಳಾಗಿ ಹೋಗುತ್ತದೆ. ಮೈಸೂರು ಹಾಳಾಗಬಾರದು ಎಂದಿದ್ದಾರೆ.

ಜಂಬೂ ಸವಾರಿ ವೀಕ್ಷಕರಿಂದ ಅರಮನೆಗೆ ಪ್ಲಾಸ್ಟಿಕ್‌ ಗಿಫ್ಟ್‌..!

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒಪ್ಪಿಸಿ ನಗರದ ಅಭಿವೃದ್ಧಿಗೆ 1 ಸಾವಿರ ಕೋಟಿ ತರುತ್ತೇನೆ. ಇದಕ್ಕಾಗಿ ಯೋಜನೆ ರೂಪಿಸೋಣ. ಸದ್ಯ ನಾಲ್ಕು ವಿಧಾನಸಭಾ ಕ್ಷೇತ್ರದ ಮೈಸೂರು ಇನ್ನು 10 ರಿಂದ 15 ವರ್ಷದಲ್ಲಿ 10 ರಿಂದ 12 ವಿಧಾನಸಭಾ ಕ್ಷೇತ್ರವಾಗುತ್ತದೆ. ಅದಕ್ಕಾಗಿ ಮೈಸೂರನ್ನು ಸುಂದರ, ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದ್ದಾರೆ.

ಪೊಲೀಸರ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ, ಯಾವ ವಿಚಾರ?

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!