ಎಲ್ಲರನ್ನೂ ಕೊಂಡುಕೊಳ್ಳಲು ನೀನೇನು ಟಾಟಾ ಬಿರ್ಲಾನಾ? ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ಸಾರಾ ಮಹೇಶ್ ಅವರಿಗೆ ವ್ಯಂಗ್ಯ ಮಾಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ವಿರುದ್ಧ ಸಾರಾ ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮೈಸೂರು(ಅ.18): ನನ್ನ 40 ವರ್ಷ ಸಾರ್ವಜನಿಕ ಜೀವನದಲ್ಲಿ ಅತ್ಯುತ್ತಮ ಯೋಜನೆ ಜಾರಿಗೆ ತಂದು ಇಂದಿಗೂ ಜನಮಾನಸದಲ್ಲಿ ಇರುವಂತೆ ಮಾಡಿದ್ದೇನೆ. ನನ್ನ ಬಗ್ಗೆ ಲಘುವಾಗಿ ಮಾತನಾಡ್ತೀರಾ? ಎಲ್ಲರನ್ನೂ ಕೊಂಡುಕೊಳ್ಳಲು ನೀನೇನು ಟಾಟಾ ಬಿರ್ಲಾನಾ? ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ಸಾರಾ ಮಹೇಶ್ ಅವರಿಗೆ ವ್ಯಂಗ್ಯ ಮಾಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಹೊರಗೆ ಸಾ.ರಾ. ಮಹೇಶ್‌ಗಾಗಿ ಕಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕ ಎಚ್. ವಿಶ್ವನಾಥ್ ಸಾರಾ ಮಹೇಶ್‌ಗೆ ಜರಿದಿದ್ದಾರೆ.
ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಬೇಕಿದೆ ಎಂದ್ರು ವಿಶ್ವನಾಥ್
ನೀನೊಬ್ಬ ಹೇಡಿ, ಪಲಾಯನವಾದಿ. ಹಿಟ್ ಆ್ಯಂಡ್ ರನ್ ಕೇಸ್ ಗಿರಾಕಿ. ಸುಳ್ಳಿನ ಸರದಾರ. ನಿನ್ನ ಹುಸಿ ಮಾತು, ಹುಸಿ ಆಪಾದನೆಗೆ ನನ್ನ ಧಿಕ್ಕಾರವಿದೆ. ರಾಜ್ಯದ ಜನರು ಎಲ್ಲವನ್ನೂ ನೋಡುತಿದ್ದಾರೆ. ಆದ್ದರಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಮೇಲಿನ ಆರೋಪ ನಿಜವಾದರೆ ಇಲ್ಲಿಗೆ ಬರಬೇಕಿತ್ತು. ನಾನು ಭ್ರಷ್ಟ, ಅಪ್ರಮಾಣಿಕನಾಗಿದ್ದರೆ ಓಡಿ ಹೋಗುತ್ತಿದ್ದೆ. ಪೊಲೀಸರು ಹೋಗಿ ಎಂದರೂ ನಿಂತಿದ್ದೇನೆ. ನಾಡಿನ ಜನರಿಗೆ ಸತ್ಯದ ಅರಿವಾಗಬೇಕು. ವಿಧಾನಸೌಧದಲ್ಲಿ ಆಣೆ ಮಾಡಿದ ಮೇಲೆ ಈಗ ದೇವಸ್ಥಾನದ ಒಳಗೆ ಏಕೆ ಅವಿತುಕೊಂಡಿದ್ದೀಯಾ? ಅದೇನೂ ವೈಶಂಪಾಯನ ಸರೋವರವೇ? ಎಂದು ಟೀಕಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಪ್ರಮಾಣಿಕವಾಗಿ ಬದುಕಿದ್ದೇನೆ. ಆದ್ದರಿಂದ ಸತ್ಯವಂತನ ಮುಖ ನೋಡುವ ಧೈರ್ಯ ವಿಲ್ಲದೆ ಹೆದರಿಕೊಂಡು ಮುಖ ನೋಡಿಲ್ಲ ಎಂದು ಹೇಳಿರಬೇಕು. ನಿಮ್ಮ ಕುಹಕದ ಮಾತಿಗೆ ವಿಧಾನಸೌಧದಲ್ಲಿ ಚಪ್ಪಾಳೆ ತಟ್ಟಿರಬಹುದು. ಸದನದಲ್ಲಿ ಆರೋಪ ಮಾಡಿರುವುದರಿಂದ ನ್ಯಾಯಾಲಯದ ಮೊರೆ ಹೋಗುತ್ತೇನೆ. ನಿಮಗೆ ಧೈರ್ಯ ಇದ್ದರೆ ಮುಖ ಕೊಟ್ಟು ಸತ್ಯವಂತನ ಬಳಿ ನಿಲ್ಲಬೇಕು ಎಂದು ಸವಾಲು ಹಾಕಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ...