ಮೇಲ್ಜಾತಿಯ ಅಂಗಡಿಯಿಂದ ಸಮಾನು ಖರೀದಿಸಿದ ದಲಿತನ ಮೇಲೆ ಹಲ್ಲೆ

Published : Nov 05, 2019, 02:55 PM ISTUpdated : Nov 05, 2019, 03:08 PM IST
ಮೇಲ್ಜಾತಿಯ ಅಂಗಡಿಯಿಂದ ಸಮಾನು ಖರೀದಿಸಿದ ದಲಿತನ ಮೇಲೆ ಹಲ್ಲೆ

ಸಾರಾಂಶ

ಈ ಆಧುನಿಕ ದಿನಗಳಲ್ಲಿಯೂ ಜಾತಿ ಹೆಸರಲ್ಲಿ ಜನ ಬಡಿದಾಡಿಕೊಳ್ಳುತ್ತಿದ್ದಾರೆ ಎಂದರೆ ವಿಪರ್ಯಾಸವೇ ಸರಿ. ಮೈಸೂರಿನ ಎಚ್‌. ಡಿ. ಕೋಟೆಯಲ್ಲಿ ಜಾತಿ ಹೆಸರಲ್ಲಿಯೇ ಎರಡು ಸಮುದಾಯಗಳು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು(ನ.05): ಈ ಆಧುನಿಕ ದಿನಗಳಲ್ಲಿಯೂ ಜಾತಿ ಹೆಸರಲ್ಲಿ ಜನ ಬಡಿದಾಡಿಕೊಳ್ಳುತ್ತಿದ್ದಾರೆ ಎಂದರೆ ವಿಪರ್ಯಾಸವೇ ಸರಿ. ಮೈಸೂರಿನ ಎಚ್‌. ಡಿ. ಕೋಟೆಯಲ್ಲಿ ಜಾತಿ ಹೆಸರಲ್ಲಿಯೇ ಎರಡು ಸಮುದಾಯಗಳು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಜಾತಿ ವೈಷಮ್ಯಕ್ಕೆ ಬಡಿದಾಟ ನಡೆಸಿದ ಹಲವರನ್ನು ಪೊಲೀಶರು ಬಂಧಿಸಿದ್ದಾರೆ. ಒಂದು ಕೋಮಿನ ಜನ ಮತ್ತೊಂದು ಕೋಮಿನ ಜನರ ಮೇಲೆ ಹಲ್ಲೆ ನಡೆಸಿ ಪರಸ್ಪರ ಕಲ್ಲು ತೂರಾಟವನ್ನೂ ನಡೆಸಿದ್ದಾರೆ.

ಮಂಡ್ಯ: 'ಕೆರೆ ನಾಪತ್ತೆಯಾಗಿದೆ, ಹುಡುಕಿ ಕೊಡಿ', ಎಸ್‌ಪಿಗೆ ದೂರು

ರಾತ್ರಿ ನಡೆದ ಘಟನೆಯಿಂದ 6 ಮಂದಿಗೆ ಗಾಯಗಳಾಗಿದ್ದು, 3 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಬ್ಬಲಗುಪ್ಪೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಸುರೇಶ, ಅಶೋಕ ಅಪ್ಪಾಜಿಯ, ಮೂರ್ತಿ, ಶಿವರಾಜು ಹಾಗೂ ನಿಂಗರಾಜು ಅವರಿಗೆ ಗಾಯಗಳಾಗಿವೆ.

ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನಡುವೆ ಗಲಾಟೆ‌ ನಡೆಯುತ್ತಿತ್ತು.ನಾಯಕ ಜನಾಂಗಕ್ಕೆ ಸೇತಿದ ಅಂಗಡಿಯಲ್ಲಿ ದಲಿತರ ಹುಡುಗ ಪದಾರ್ಥ ಖರೀದಿಸಿದ ಎಂಬ ಕಾರಣಕ್ಕೆ ಗಲಾಟೆ ಶುರುವಾಗಿದೆ. ಘಟನೆ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ಪೊಲೀಸ್ ವಿಚಾರಣೆಗೆ ಹೆದರಿ ಆ್ಯಸಿಡ್ ಕುಡಿದ..!

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!