2015 ರಲ್ಲಿ ಸ್ಥಾಪನೆಯಾದ ಕ್ಯಾಂಪ್ಟೆಕ್ ಇನ್ನೋವೇಟಿವ್ ಟೆಕ್ನಾಲಜೀಸ್| ಕಡಿಮೆ ಪ್ರಮಾಣದ ವೋಲ್ಟೇಜ್ ವಿತರಣಾ ಉತ್ಪನ್ನಗಳನ್ನು ತಯಾರಿಸುವಲ್ಲಿ ನಿಸ್ಸೀಮ| ಕಡಿಮೆ ಶಕ್ತಿಯ ಬಳಕೆಯ ಉದ್ದೇಶದೊಂದಿಗೆ ಕೇರಳದಲ್ಲಿ ಅಸ್ತಿತ್ವಕ್ಕೆ ಬಂದ ಕ್ಯಾಂಪ್ಟೆಕ್| ಭಾರತದ ಇತರ ರಾಜ್ಯಗಳಲ್ಲೂ ತನ್ನ ಜಾಲವನ್ನು ವಿಸ್ತರಿಸಲು ಸಜ್ಜಾದ ಕ್ಯಾಂಪ್ಟೆಕ್|
ತಿರುವನಂತಪುರಂ(ಫೆ.04): 2015 ರಲ್ಲಿ ಸ್ಥಾಪನೆಯಾದ ಕ್ಯಾಂಪ್ಟೆಕ್ ಇನ್ನೋವೇಟಿವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಕಡಿಮೆ ಪ್ರಮಾಣದ ವೋಲ್ಟೇಜ್ ವಿತರಣಾ ಉತ್ಪನ್ನಗಳು, ಎಲೆಕ್ಟ್ರಿಕಲ್ ಐಸೊಲೇಟರ್, ಕರೆಂಟ್ ಸರ್ಕ್ಯೂಟ್ ಬ್ರೇಕರ್ ಇತ್ಯಾದಿಗಳ ವ್ಯಾಪಕ ವಿತರಕ ಹಾಗೂ ಪಾಲುದಾರ ಸಂಸ್ಥೆ.
ಕ್ಯಾಂಪ್ಟೆಕ್ ತಂತ್ರಜ್ಞಾನವನ್ನು ಶಕ್ತಿ ನಿರ್ವಹಣಾ ವ್ಯವಸ್ಥೆಗಳು, ವಿದ್ಯುತ್ ವ್ಯವಸ್ಥೆಗಳು, ಯಾಂತ್ರೀಕೃತಗೊಂಡ ಮತ್ತು ಮಿಂಚಿನ ರಕ್ಷಣಾ ವ್ಯವಸ್ಥೆಗಳಲ್ಲಿ ಉನ್ನತ-ಮಟ್ಟದ ಎಂಜಿನಿಯರಿಂಗ್ ಪರಿಹಾರಗಳನ್ನು ನೀಡಲು ಚಾಲಕವಾಗಿ ಬಳಸಲಾಗುತ್ತದೆ.
undefined
ಕಡಿಮೆ ಶಕ್ತಿಯ ಬಳಕೆಯ ಉದ್ದೇಶದೊಂದಿಗೆ ಕೇರಳದಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ, ಭಾರತದ ಇತರ ರಾಜ್ಯಗಳಲ್ಲೂ ತನ್ನ ಜಾಲವನ್ನು ವಿಸ್ತರಿಸುತ್ತಿದೆ. ಗ್ರಾಹಕರಿಗೆ ವಿದ್ಯುತ್ ಶಕ್ತಿಯ ಜೊತೆಗೆ ವಿಶ್ವಾಸವನ್ನೂ ರವಾನಿಸಲು ಹೆಮ್ಮೆಪಡುವುದಾಗಿ ಸಂಸ್ಥೆ ಹೇಳಿದೆ.
ಭಾರತ ಮತ್ತು ವಿದೇಶಗಳಲ್ಲಿ ಯಶಸ್ವಿ ಉದ್ದಿಮೆಯನ್ನು ಮುನ್ನಡೆಸುವ ಇತಿಹಾಸ ಹೊಂದಿರುವ ಕ್ಯಾಂಪ್ಟೆಕ್, ಇದೀಗ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿರುವುದು ಗಮನಾರ್ಹ.
ಎಂಜಿನಿಯರಿಂಗ್, ಉತ್ಪಾದನೆ ಮತ್ತು ಯೋಜನಾ ನಿರ್ವಹಣಾ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ಕ್ಯಾಂಪ್ಟೆಕ್ ಸಿಬ್ಬಂದಿ, ಶಕ್ತಿ ಪರಿಹಾರಗಳನ್ನು ನವೀಕರಿಸಿ ಅದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಶ್ರಮಿಸುತ್ತಿದೆ.