ಸೆಕ್ಯೂರಿಟಿ ಗಾರ್ಡ್ ಈಗ ಕೋಟ್ಯಾಧಿಪತಿ, ಬೆಳಗಾಗೋದ್ರೊಳಗೆ ಬದಲಾಯ್ತು ಅದೃಷ್ಟ

Published : Jun 10, 2026, 01:43 PM IST
Security Guard

ಸಾರಾಂಶ

ನೇಪಾಳಿ ಸೆಕ್ಯೂರಿಟಿ ಗಾರ್ಡ್ ಅದೃಷ್ಟ ಬದಲಾಗಿದೆ. ಸೆಕ್ಯೂರಿಟಿ ಕೆಲ್ಸಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ. ನಾಲ್ಕು ವರ್ಷಗಳಿಂದ ಕಾಯ್ತಿದ್ದ ಆ ಕಾಲ ಕೊನೆಗೂ ಕೂಡಿ ಬಂದಿದೆ. ಸಾವಿರಕ್ಕೆ ಕಷ್ಟಪಡ್ತಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ.  

ಉತ್ತಮ ಅವಕಾಶ ಹುಡ್ಕೊಂಡು ಅಬುಧಾಬಿಗೆ ತೆರಳಿದ 26 ವರ್ಷದ ನೇಪಾಳಿ ವ್ಯಕ್ತಿ ಭವಿಷ್ಯ ಬದಲಾಗಿದೆ. ದೇವರು ಕೊಡೊವಾಗ ಕೈ ತುಂಬಿ ಕೊಡ್ತಾನೆ ಅನ್ನೋದಕ್ಕೆ ಈ ಸೆಕ್ಯೂರಿಟಿ ಗಾರ್ಡ್ ಉತ್ತಮ ನಿದರ್ಶನ. ನೇಪಾಳದ ಭದ್ರತಾ ಸಿಬ್ಬಂದಿ ಖಾನ್, ಯುಎಇ ಲಾಟರಿ ಗೆದ್ದಿದ್ದಾರೆ. ಒಂದಲ್ಲ ಎರಡಲ್ಲ 30 ಮಿಲಿಯನ್ ದಿರ್ಹಮ್ ಅಂದ್ರೆ ಸುಮಾರು 78 ಕೋಟಿ ಜಾಕ್ಪಾಟ್ ಗೆದ್ದಿದ್ದಾರೆ.

ಆ ಕ್ಷಣ ಕೈ ಕಾಲು ನಡುಗಿತ್ತು

ಖಾನ್, ಲಾಟರಿ (Lottery) ವಿನ್ನರ್ ಸಂಖ್ಯೆ ಘೋಷಣೆ ಮಾಡೋವಾಗ ಅಲ್ಲಿರಲಿಲ್ಲ. ನಂತ್ರ ಇಮೇಲ್ ರಿಸೀವ್ ಮಾಡಿದ್ದಾರೆ. ಇಮೇಲ್ ನಲ್ಲಿ ಬಂದ ಮೆಸ್ಸೇಜನ್ನು ಆರಂಭದಲ್ಲಿ ಗಂಭೀರವಾಗಿ ಪರಿಗಣಿಸಲಿಲ್ಲ. ಹಿಂದೆ ಅನೇಕ ಬಾರಿ ಖಾನ್ ಸಣ್ಣಪುಟ್ಟ ಬಹುಮಾನ ಗೆದ್ದಿದ್ದರು. ಅದೇ ರೀತಿ ಇದೂ ಒಂದು ಅಂತ ಭಾವಿಸಿದ್ದರು. ಆದ್ರೆ ಇಮೇಲ್ ಓಪನ್ ಮಾಡಿದಾಗ ಲಾಟರಿ ಮೊತ್ತ ನೋಡಿ ದಂಗಾಗಿದ್ದಾರೆ.ಕೈ ಕಾಲುಗಳು ನಡುಗಲು ಶುರುವಾಗಿದೆ. ಇದು ಕನಸಿನಂತೆ ಭಾಸವಾಗಿದೆ.

ಜೂನ್ ತಿಂಗಳಿನಲ್ಲೇ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ! ಇಂದು ಒಂದೇ ದಿನ ₹4300 ರುಪಾಯಿ ಇಳಿಕೆ

2024 ರ ಆರಂಭದಿಂದಲೂ ಸೆಕ್ಯೂರಿಟಿ ಗಾರ್ಡ್ (Security Guard) ಲಾಟರಿ ಖರೀದಿ ಮಾಡ್ತಿದ್ದರು. ಸಣ್ಣಪುಟ್ಟ ಬಹುಮಾನ ಸಿಕ್ಕಿದ್ರೂ ಖರೀದಿ ಮುಂದುವರೆದಿತ್ತು. ಖಾನ್ ಬಂದ ಹಣದಲ್ಲಿ ಮನೆ ಖರೀದಿ ನಿರ್ಧಾರ ಮಾಡಿದ್ದಾರೆ. ನೇಪಾಳದಲ್ಲಿ ಕುಟುಂಬಸ್ಥರಿಗಾಗಿ ಮನೆ ಖರೀದಿ ಮಾಡೋದು ಅವರ ಉದ್ದೇಶವಾಗಿದೆ. ಸೆಕ್ಯೂರಿಟಿ ಗಾರ್ಡ್ ಹುದ್ದೆಯಲ್ಲಿ ಮುಂದುವರೆಯುವ ಉದ್ದೇಶ ಅವರಿಗಿಲ್ಲ. ಲಾಟರಿಯಲ್ಲಿ ಸಿಕ್ಕ ಹಣವನ್ನು ಅವರು ರಿಯಲ್ ಎಸ್ಟೇಟ್ ನಲ್ಲಿ ಬಳಸುವ ಪ್ಲಾನ್ ಮಾಡ್ತಿದ್ದಾರೆ. ದುಬೈನಲ್ಲಿ ಅಪಾರ್ಟ್ ಮೆಂಟ್ ಖರೀದಿ ಯೋಚನೆ ಮಾಡಿದ್ದಾರೆ. ಇಷ್ಟೇ ಅಲ್ಲ, ತಮ್ಮ ಬಹುದಿನದ ಆಸೆಯಾದ ಮಹೀಂದ್ರಾ ಥಾರ್ ಎಸ್ಯುವಿ ಮತ್ತು ರೋಲೆಕ್ಸ್ ವಾಚ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

1 ಲೀಟರ್ ಎಥನಾಲ್‌ ತಯಾರಿಸಲು ಎಷ್ಟು ಕಬ್ಬು ಬೇಕು?: ದೇಶಕ್ಕೆ

ಲಾಟರಿ ತಮ್ಮ ಜೀವನದ ದಿಕ್ಕನ್ನು ಬದಲಿಸಿದೆ ಎಂದು ಖಾನ್ ಭಾವಿಸಿದ್ದಾರೆ. ಹೊಸ ಹೂಡಿಕೆ, ಬ್ಯುಸಿನೆಸ್ ಮೇಲೆ ಗಮನ ಹರಿಸುವ ಆಲೋಚನೆ ಅವರಿಗಿದೆ. ಸೆಕ್ಯೂರಿಟಿ ಗಾರ್ಡ್ ಒಬ್ಬರೇ ಲಾಟರಿ ಖರೀದಿ ಮಾಡಿರಲಿಲ್ಲ. ಅವರ ನಾಲ್ವರು ಸ್ನೇಹಿತರು ಸೇರಿ ಲಾಟರಿ ಖರೀದಿ ಮಾಡಿದ್ರು. ಹಾಗಾಗಿ ಖಾನ್ ಬಂದ ಹಣವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಲಿದ್ದಾರೆ. ಬಹುಶಃ ಖಾನ್ ಅವರ ಗೆಲುವಿನ ಅತ್ಯಂತ ಗಮನಾರ್ಹ ಅಂಶವೆಂದರೆ ಅದು ಸ್ನೇಹ ಮತ್ತು ಪರಿಶ್ರಮದ ಮೇಲೆ ನಿರ್ಮಿಸಲ್ಪಟ್ಟಿದೆ. ಭವಿಷ್ಯದ ಮಿಲಿಯನೇರ್ಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದ ಈ ಐವರು ಸ್ನೇಹಿತರು, ಸಾಂದರ್ಭಿಕವಾಗಿ ಸಣ್ಣ ಗೆಲುವುಗಳನ್ನು ಗಳಿಸಿದರೂ ಒಟ್ಟಿಗೆ ಟಿಕೆಟ್ಗಳನ್ನು ಖರೀದಿಸುವುದನ್ನು ಮುಂದುವರೆಸಿದ್ದರು. ಅವರ ತಾಳ್ಮೆ ಫಲ ನೀಡಿದೆ. ಆದ್ರೆ ಲಾಟರಿ ಖರೀದಿ ಚಟವಾದ್ರೆ ಅದು ಮನೆ ನಿರ್ಮಿಸುವ ಬದಲು ಮನೆ ಹಾಳು ಮಾಡ್ಬಹುದು. ಇದು ನೆನಪಿರಲಿ.

 

PREV
Read more Articles on
click me!

Recommended Stories

ನಿವೃತ್ತಿ ಜೀವನಕ್ಕೆ 1 ಅಥವಾ 2 ಕೋಟಿ ರೂಪಾಯಿ ಸಾಕೇ? ನಿಮ್ಮ ನಿವೃತ್ತಿ ಸುಲಭ ಪ್ಲಾನ್‌ ಹೇಗಿರಬೇಕು?
Balen Sha: ನೇಪಾಳ್‌ಗೆ ಮಗ್ಗಲು ಮುಳ್ಳಾಯ್ತು ಚೀನಾದ ಮೇಲಿನ ಕುರುಡು ಪ್ರೀತಿ; ಸ್ನೇಹದ ಆಸೆಯಲ್ಲಿ ಬಾಲೆನ್ ಶಾ ತಮ್ಮವರಿಗೇ ಮಾಡಿದ್ರಾ ಅನ್ಯಾಯ?