ಶಾಓಮಿ ಸಿಇಓ ಲೀ ಜೂನ್ (Lei Jun) ಟ್ವೀಟರ್‌ನ ಚೀನೀ ಪರ್ಯಾಯ Weiboನಲ್ಲಿ ಪೋಸ್ಟ್ ಮೂಲಕ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
Tech Desk: ಶಾಓಮಿ ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಸಾಧಿಸಿದ್ದು ಭಾರತದಲ್ಲಿ ನಂ.1 ಸ್ಮಾರ್ಟ್‌ಫೋನ್ ಬ್ರ್ಯಾಂಡಾಗಿ ಹೊರಹೊಮ್ಮಿದೆ. ಆದರೆ ಈಗ ಸ್ಮಾರ್ಟ್‌ಫೋನ್ ತಯಾರಕ ಶಾಓಮಿ ಫ್ಲಾಗ್‌ಶಿಪ್ ವಿಭಾಗದಲ್ಲಿ ಕೂಡ ಪ್ರಾಬಲ್ಯ ಸಾಧಿಸಲು ಮುಂದಾಗಿದೆ. ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಕಂಪನಿಯು ತಯಾರಿಸಿದ ಟಾಪ್ ಎಂಡ್ ಫೋನ್ ಆಗಿರುತ್ತದೆ. ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಸಾಲಿನಲ್ಲಿನ ಅತ್ಯಾಧುನಿಕ ಸಾಧನ ಎಂದು ಹೇಳಬಹುದು.
ಈ ಬಗ್ಗೆ ಮಾತಾನಡಿರುವ ಶಾಓಮಿ ಸಿಇಓ ಲೀ ಜೂನ್ (Lei Jun), Weibo ಪೋಸ್ಟ್ ಮೂಲಕ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಶಾಓಮಿ ಗಮನಹರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಜಾಗತಿಕವಾಗಿ ಫ್ಲ್ಯಾಗ್‌ಶಿಪ್ ಮಾರುಕಟ್ಟೆಯಲ್ಲಿ ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್‌ನಂತಹ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಪ್ರಾಬಲ್ಯ ಹೊಂದಿವೆ.
undefined
ಇದನ್ನೂ ಓದಿ: Redmi Note 11, Redmi Note 11S ಕ್ವಾಡ್ ರಿಯರ್ ಕ್ಯಾಮೆರಾದೊಂದಿಗೆ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?
ಜೀವನ ಮತ್ತು ಸಾವಿನ ಯುದ್ಧ: ಆ್ಯಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಅಗ್ರ ಬ್ರಾಂಡ್‌ಗಳೊಂದಿಗೆ ಸ್ಪರ್ಧಿಸುವ ಸುಳಿವು ನೀಡಿದ ಜೂನ್, ಇದನ್ನು "ಜೀವನ ಮತ್ತು ಸಾವಿನ ಯುದ್ಧ" ಎಂದು ಉಲ್ಲೇಖಿಸಿದ್ದಾರೆ. "ನಾವು ಉತ್ಪನ್ನ ಮತ್ತು ಅನುಭವದ ವಿಷಯದಲ್ಲಿ ಆಪಲ್ ವಿರುದ್ಧ ಸಂಪೂರ್ಣ ಮಾನದಂಡವನ್ನು ಹೊಂದಿದ್ದೇವೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಚೀನಾದ ಅತಿದೊಡ್ಡ ಉನ್ನತ-ಮಟ್ಟದ ಬ್ರ್ಯಾಂಡ್ ಆಗಿದ್ದೇವೆ" ಎಂದು ಅವರು ಹೇಳಿದ್ದಾರೆ.
ಜೂನ್, ಕಂಪನಿಯ ಮುಂದಿನ ಐದು ವರ್ಷಗಳ ಹೂಡಿಕೆ ಯೋಜನೆಯನ್ನು ಸಹ ಹಂಚಿಕೊಂಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶಾಓಮಿ 100 ಬಿಲಿಯನ್ ಯುವಾನ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ ಎಂದು ಆಂಡ್ರಾಯ್ಡ್ ಹೆಡ್‌ಲೈನ್ಸ್ ವರದಿ ಮಾಡಿದೆ.
ಇದನ್ನೂ ಓದಿ: Redmi Smart Band Pro: 110 ಕ್ಕೂ ಹೆಚ್ಚು ವರ್ಕೌಟ್ ಮೋಡ್, SpO2 ಟ್ರ್ಯಾಕಿಂಗ್‌ನೊಂದಿಗೆ ಲಾಂಚ್!
ಪ್ರಸ್ತುತ ಶಾಓಮಿ ಭಾರತದಲ್ಲಿ ತನ್ನ ಫ್ಲ್ಯಾಗ್‌ಶಿಪ್ ಸಾಧನವಾಗಿ Mi 11 ಅನ್ನು ಮಾರಾಟ ಮಾಡುತ್ತಿದೆ. ಕಂಪನಿಯು Mi 11 ಸರಣಿಯ ಅಡಿಯಲ್ಲಿ ಮೂರು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು Mi 11 Pro, Mi 11 Ultra, ಮತ್ತು Mi 11 ಖರೀದಿಗೆ ಲಭ್ಯವಿವೆ. ಇದು ಪ್ರಬಲವಾದ ಸ್ನಾಪ್‌ಡ್ರಾಗನ್ 888 ನೊಂದಿಗೆ ಆಗಮಿಸಿದ ಮೊದಲ ಫೋನಾಗಿದೆ.
ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.81-ಇಂಚಿನ QHD+ ಡಿಸ್ಪ್ಲೇಯನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾಗೆ ಸಣ್ಣ ಕಟೌಟ್ ಇದೆ. Mi 11 55W ವೇಗದ ಚಾರ್ಜಿಂಗ್‌ನೊಂದಿಗೆ 4600mAh ಬ್ಯಾಟರಿಯನ್ನು ಹೊಂದಿದೆ. ಇತರ MI 11 ಫೋನ್‌ಗಳು ಸ್ವಲ್ಪ ದೊಡ್ಡದಾದ 5000mAh ಬ್ಯಾಟರಿಯೊಂದಿಗೆ ಬರುತ್ತವೆ.
ಮೂರು ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ವಿಶೇಷಣಗಳು ಹೆಚ್ಚು ಕಡಿಮೆ ಒಂದೇ ಆಗಿದೆ. Mi 11 ಅಲ್ಟ್ರಾ ದೊಡ್ಡ ಕ್ಯಾಮೆರಾ ಬಂಪನ್ನು ಒಳಗೊಂಡಿದೆ. ಇದು ಟ್ರಿಪಲ್ 48, 48 ಮತ್ತು 50MP ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ. ಶಾಓಮಿ ಚೀನಾದಲ್ಲಿ Mi 12 ಸರಣಿಯನ್ನು ಸಹ ಬಿಡುಗಡೆ ಮಾಡಿದೆ ಆದರೆ ಇದು ಭಾರತದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. Xiaomi 12 ಚೀನಾದಲ್ಲಿ ಆರಂಭಿಕ ರೂಪಾಂತರಕ್ಕೆ CNY 3699 (ಸುಮಾರು ರೂ 43,000) ಬೆಲೆಯಿದೆ. ಇದು Mi 11 ನ ಮೂಲ ರೂಪಾಂತರದ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆಯಾಗಿದೆ, ಇದರ ಬೆಲೆ CNY 3,999 (ಸುಮಾರು Rs 45,000) ಆಗಿತ್ತು.