• ಕಳೆದ ವರ್ಷ ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಶಿಯೋಮಿ 11ಟಿ ಫೋನ್
• ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲ, ಇದೊಂದು ಪ್ರೀಮಿಂಯ ಸ್ಮಾರ್ಟ್‌ಫೋನ್ ಆಗಿರಬಹುದು.
• ಫೋನ್ ಹಿಂಬದಿಯಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿ ಮೂರು ಕ್ಯಾಮೆರಾಗಳಿವೆ
Tech Desk: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿರುವ ಚೀನಾ ಮೂಲದ ಶಿಯೋಮಿ (Xiaomi) ಸ್ಮಾರ್ಟ್‌ಫೋನ್ ಕಂಪನಿ, ಹೊಸ ಹೊಸ ಫೋನುಗಳನ್ನು ಲಾಂಚ್ ಮಾಡುವ ಮೂಲಕ ತನ್ನ ಪ್ರಸ್ತುತೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳು ಸಾಲಿಗೆ ಇದೀಗ ಶಿಯೋಮಿ 11ಟಿ ಪ್ರೋ 5ಜಿ (Xiaomi 11T Pro 5G) ಸೇರಿದೆ. ಈ ಫೋನು ಭಾರತೀಯ ಮಾರುಕಟ್ಟೆಯಲ್ಲಿ ಜನವರಿ 19ರಂದು ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಈಗಾಗಲೇ ಈ ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ಬಿಡುಗಡೆಯ ಬಗ್ಗೆ ಸಾಕಷ್ಟು ಕುತೂಹಲವಿದೆ. ಸಾಮನ್ಯವಾಗಿ ಶಿಯೋಮಿ ಫೋನುಗಳು ಎಂದರೆ, ಕಡಿಮೆ ದರಕ್ಕೆ ಅತ್ಯಂತ ಅತ್ಯಾಧುನಿಕ ಫೋನುಗಳನ್ನು ನೀಡುವುದರಲ್ಲಿ ಹೆಚ್ಚು ಪ್ರಸಿದ್ಧಿ. ಹಾಗೆಯೇ, ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್‌ಫೋನ್ ಕೂಡ ಸಾಕಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ವಿಶೇಷ ಎಂದರೆ, ಯುರೋಪ್ ಮಾರುಕಟ್ಟೆಗೆ ಈ ಫೋನ್ ಕಳೆದ ವರ್ಷವೇ ಲಾಂಚ್ ಆಗಿದೆ.
ಶಿಯೋಮಿ 11ಟಿ ಪ್ರೋ 5ಜಿ (Xiaomi 11T Pro 5G) ಸ್ಮಾರ್ಟ್‌ಫೋನ್ ಬಿಡುಗಡೆ ಸಂಬಂಧ ಕಂಪನಿಯು ಟ್ವಿಟರ್ (Twitter)ನ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿಯನ್ನು ಷೇರ್ ಮಾಡಿಕೊಂಡಿದ್ದು, ಟೀಸರ್ ಕೂಡ ಇದೆ. ಈ ಟೀಸರ್‌ನಲ್ಲಿ ಶಿಯೋಮಿ 11ಟಿ ಪ್ರೋ 5ಜಿ ಫೋನಿನ ಹಿಂಬದಿಯನ್ನು ಪ್ರದರ್ಶಿಸಿದೆ. ಜತೆಗೆ, ಕಂಪನಿಯು ತನ್ನ ಅಧಿಕೃತ ಜಾಲತಾಣದಲ್ಲಿ ಇಧಕ್ಕಾಗಿಯೇ ಪ್ರತ್ಯೇಕ ಪುಟವನ್ನು ಕೂಡ ಸೃಷ್ಟಿಸಿದೆ.
undefined
ಇದನ್ನೂ ಓದಿ: Apple Headset ಬಹುನಿರೀಕ್ಷಿತ ಆ್ಯಪಲ್ AR and VR ಹೆಡ್‌ಸೆಟ್ ಈ ವರ್ಷ ರೆಡಿ, ಇದರಲ್ಲಿದೆ ಹಲವು ವೈಶಿಷ್ಟ್ಯ!
ಈಗಾಗಲೇ ಈ ಫೋನ್ ಅನ್ನು ಕಂಪನಿಯು ಈ ಹಿಂದೆಯೇ ಅಂದರೆ, ಕಳೆದ ವರ್ಷವೇ ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾಗಾಗಿ, ಈ ಫೋನಿನ ಬಗ್ಗೆ ಒಂದಿಷ್ಟು ಮಾಹಿತಿಗಳು ಈಗಾಗಲೇ ಗೊತ್ತಿವೆ. ಆದರೆ, ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವಾಗ ಒಂದಿಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಹಾಗಾಗಿ, ಯಾವೆಲ್ಲ ಫೀಚರ್‌ಗಳಿವೆ, ಏನೆಲ್ಲ ತಂತ್ರಜ್ಞಾನ ಬಗ್ಗೆ ಬಳಸಲಾಗಿದೆ ಎಂಬ ಯಾವುದೇ ಖಚಿತ ಮಾಹಿತಿ ಇಲ್ಲ.
It takes a revolution to create a powerful smartphone like this.
Introducing - Xiaomi 11T Pro
Experience the perfect amalgamation of Design & Power on 19.01.2022
The Revolution continues.
Know more: https://t.co/2syPoOtfsz pic.twitter.com/3MJcrEZzqu
ಆದಾಗ್ಯೂ, ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಶಿಯೋಮಿ 11ಟಿ ಪ್ರೋ 5ಜಿ ಸ್ಮಾರ್ಟ್‌ಫೋನ್ ಆಧರಿಸಿ ಹೇಳುವುದಾದರೆ, ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್ ಕೂಡ 6.67 ಇಂಚ್ ಅಮೋಎಲ್ಇಡಿ (AMOLED) ಪ್ರದರ್ಶಕವನ್ನು ಹೊಂದಿರುವ ಸಾಧ್ಯತೆ ಇದೆ. ಜತೆಗೆ 12 ಜಿಬಿ ರಾಮ್‌ನೊಂದಿಗೆ ಸಂಯೋಜಿತಗೊಂಡಿರುವ ಅಕ್ಟಾ ಕೋರ್ ಕ್ವಾಲಕಾಮನ್ ಸ್ನ್ಯಾಪ್‌ಡ್ರಾಗನ್ 888 ಎಸ್ಒಸಿ (octa-core Qualcomm Snapdragon 888 SoC) ಪ್ರೊಸೆಸರ್ ನಿರೀಕ್ಷಿಸಬಹುದಾಗಿದೆ.
ಶಿಯೋಮಿ 11ಟಿ ಪ್ರೋ 5ಜಿ (Xiaomi 11T Pro 5G) ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನೀವು ಮೂರು ಕ್ಯಾಮೆರಾಗಳ ಸೆಟ್‌ಅಪ್ ಕಾಣಬಹುದು. ಈ ಪೈಕಿ ಮೊದಲನೆಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ. ಜತೆಗೆ 8 ಎಂಪಿ ಅಲ್ಟ್ರಾ ವೈಡ್ ಶೂಟರ್ ಹಾಗೂ ಟೆಲೆಫೋಟೋ ಶೂಟರ್ ಕೂಡ ಇರಲಿದೆ. ಫೋನ್ ಮುಂಬದಿಯಲ್ಲಿ ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ ಕಂಪನಿಯು 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಿದೆ. ಇವುಗಳ ಜತೆಗೆ ಇನ್ನು ಅನೇಕ ವಿಶಿಷ್ಟ ಫೀಚರ್‌ಗಳನ್ನು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: Twitter Features: ಟಿಕ್ ಟಾಕ್, ಇನ್‌ಸ್ಟಾ ರೀತಿಯಲ್ಲೇ ಫೋಟೋ, ವಿಡಿಯೋದೊಂದಿಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿ!
ಶಿಯೋಮಿ 11ಟಿ ಪ್ರೋ 5ಜಿ ಫೋನ್ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, ಯುರೋಪ್ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಅಂದಾಜು 54,500 ರೂ.ನಿಂದ 62,900 ರೂ.ವರೆಗೂ ಇದೆ. ಅಂದರೆ, ಇದೊಂದು ಪ್ರೀಮಿಯಂ ಸ್ಮಾರ್ಟ್‌ಫೋನ ಆಗಿದೆ ಎಂಬುದು ಇದರಿಂದ ಖಚಿತವಾಗುತ್ತದೆ. ಆದರೆ, ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಎಷ್ಟಿರಲಿದೆ ಗೊತ್ತಿಲ್ಲ. ಜನವರಿ 19ರಂದೇ ಈ ಬಗ್ಗೆ ತಿಳಿಯಲಿದೆ.