ಜಾಸ್ತಿ ಫೀಚರ್‌ಗಳಿರುವ ಸ್ಮಾರ್ಟ್ ಫೋನ್‌ಗಳನ್ನು ಕಡಿಮೆ ಬೆಲೆಗೆ ನೀಡುವುದು ಟೆಕ್ನೋ ಕಂಪನಿಯ ಜನಪ್ರಿಯ ಸ್ಟೈಲು. ಆ ಸ್ಟೈಲ್‌ಗೆ ಬದ್ಧವಾಗಿ ಟೆಕ್ನೋ ಕಂಪನಿ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಹೊಸತೊಂದು ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಅದರ ಹೆಸರು ಟೆಕ್ನೋ ಪೋವಾ 3.
4 ಜಿಬಿ + 64 ಜಿಬಿ ಮತ್ತು 6 ಜಿಬಿ+ 128 ಜಿಬಿ ಮಾದರಿಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. ಬೆಲೆ ಕ್ರಮವಾಗಿ ರು.11,499 ಮತ್ತು ರು. 12,999. 50 ಎಂಪಿ ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮರಾ, 7000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಈ ಎರಡೂ ವಿಚಾರಗಳು ಈ ಟೆಕ್ನೋ ಪೋವಾ 3 ಸ್ಮಾರ್ಟ್ ಫೋನಿನ ವಿಶಿಷ್ಟತೆ. ಅದರೊಂದಿಗೆ ಗೇಮಿಂಗ್‌ಗೆ ಬೇಕಾದಂತೆ ಮೊಬೈಲ್ ರೂಪಿಸಿರುವುದು ಇದರ ವಿಶೇಷತೆ.
undefined
Smartpone ಫ್ಯಾಂಟಮ್ ಎಕ್ಸ್ ಮೊಬೈಲ್ ಬಿಡುಗಡೆ ಮಾಡಿದ ಟೆಕ್ನೊ!
ಮೀಡಿಯಾಟೆಕ್ ಹೀಲಿಯೋ ಜಿ88 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್ ಫೋನ್ 6.9 ಇಂಚಿನ ಡಿಸ್‌ಪ್ಲೇ ಹೊಂದಿದೆ. ಬಹುತೇಕ ಆಧುನಿಕ ಸ್ಮಾರ್ಟ್ ಫೋನ್‌ಗಳ ವಿನ್ಯಾಸದಂತೆ ಸ್ಟೈಲಿಷ್ ಆಗಿರುವ ಮೊಬೈಲ್ ಇದು. ಕೈಯಲ್ಲಿ ಹಿಡಿದುಕೊಳ್ಳಲು ಸುಲಭ ಮತ್ತು ಚಂದ. ಈ ಫೋನಲ್ಲಿ ಸಾಮಾನ್ಯ ವರ್ಷನ್ ಜೊತೆ ಬ್ಲೂ ವೇರಿಯೆಂಟ್ ಎಂಬ ವಿಶೇಷ ಮಾದರಿ ಲಭ್ಯವಿದೆ. ಈ ಮಾದರಿಯ ಮೊಬೈಲ್ ಬೆನ್ನಲ್ಲಿ ಲೈಟು ಸಾಲುಗಳಿದ್ದು, ನೋಟಿಫಿಕೇಷನ್ ಬಂದಾಗೆಲ್ಲಾ ಲೈಟ್ ಆನ್ ಆಗುತ್ತದೆ. ಬ್ಯಾಟರಿ ಲೆವೆಲ್ ಅನ್ನು ಸೂಚಿಸುವ ಸಾಮರ್ಥ್ಯ ಇರುವ ಲೈಟು ಇದೆ. ಬೇಕಾದಷ್ಟು ಚಾರ್ಜ್ ಇದ್ದರೆ ಹಸಿರು ದೀಪ, ಇನ್ನೇನು ಬ್ಯಾಟರಿ ಮುಗಿಯುವಂತಿದ್ದರೆ ಕೆಂಪು ದೀಪ ಉರಿಯುತ್ತದೆ. ದೂರದಿಂದಲೇ ಎಲ್ಲವನ್ನೂ ಕಾಣಿಸುವ ಈ ಫೀಚರ್ ನಿಜವಾಗಲೂ ಆಕರ್ಷಕ. ಈ ಫೀಚರ್ ಎಲ್ಲರಿಗೂ ಇಷ್ಟವಾಗಲೇಬೇಕೆಂದಿಲ್ಲ. ನೋಟಿಫಿಕೇಷನ್ ಲೈಟಿನ ಕುರಿತು ಬೇಸರ ಇರುವವರು ಸಾಮಾನ್ಯ ವರ್ಷನ್ ಫೋನಿಗೆ ಮರುಳಾಗಬಹುದು.
ಹೇಳಿಕೇಳಿ ಟೆಕ್ನೋ ಸಾಮಾನ್ಯ ಜನರ ಪರವಾಗಿ ನಿಂತಿರುವ ಫೋನ್ ಕಂಪನಿ. ಅತಿ ಹೆಚ್ಚು ದುಡ್ಡಿನ ಫೋನ್ ಗಳನ್ನು ಇದು ಕೊಡುವುದಿಲ್ಲ. ಜೇಬು ಹಗುರವಾಗಿರುವವರೂ ಗೇಮಿಂಗ್ ಬಳಸಬಹುದು ಎಂಬ ಉದ್ದೇಶದಿಂದ, ಗೇಮಿಂಗ್‌ಗೆ ಅಂತಲೇ ವಿಶೇಷವಾಗಿ ರೂಪಿಸಿರುವ ಮೊಬೈಲ್ ಆದ್ದರಿಂದ ವೇಗದಲ್ಲಿ ಮುಂದೆ ಇದೆ. ಬೇಗ ಸುಸ್ತಾಗುವುದಿಲ್ಲ. ಬ್ಯಾಟರಿ ಸಾಮರ್ಥ್ಯ ಜಾಸ್ತಿ ಇರುವುದರಿಂದ ಬೇಗ ಬ್ಯಾಟರಿ ಖಾಲಿಯಾಗುವುದೂ ಇಲ್ಲ. ಸದ್ಯದ ಮಟ್ಟಿಗೆ ಎರಡು ದಿನ ಆರಾಮಾಗಿ ಈ ಫೋನ್ ಬಳಸಬಹುದು. 33 ವಾರ್ಪ್ ಚಾರ್ಜರ್ ಇರುವುದರಿಂದ ಶೀಘ್ರ ಚಾರ್ಜ್ ಕೂಡ ಮಾಡಬಹುದು. ಕ್ಯಾಮೆರಾದಲ್ಲಿ ಸೊಗಸಾದ ಫೋಟೋ ಮೂಡಿ ಬರುವುದು ಕೂಡ ಈ ಫೋನಿನ ಮೆಚ್ಚತಕ್ಕ ಅಂಶಗಳಲ್ಲಿ ಒಂದು. 8 ಎಂಪಿ ಫ್ರಂಟ್ ಕ್ಯಾಮೆರಾ ಕೂಡ ಸಶಕ್ತವಾಗಿದೆ. ಸೆಲ್ಫೀ ತೆಗೆಯುವುದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ.
Tecno Spark 8C: 5,000mAh ಬ್ಯಾಟರಿ, ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಭಾರತದಲ್ಲಿ ಲಾಂಚ್!
ಐಪಿಎಕ್ಸ್2 ಸ್ಪ್ಲ್ಯಾಶ್ ರೆಸಿಸ್ಟೆಂಟ್ ಇರುವುದರಿಂದ ಹನಿಹನಿ ಮಳೆಗೆ ತೊಂದರೆಯಾಗುವುದನ್ನು ತಪ್ಪಿಸುತ್ತದೆ. ಒಟ್ಟಾರೆಯಾಗಿ ನೋಡುವುದಾದರೆ ಸಮಾಧಾನಕರ ಮತ್ತು ಆರಾಮದಾಯಕ ಬಳಕೆಗೆ ಒಗ್ಗುವ ಫೋನ್ ಇದು ಅನ್ನುವುದೇ ಇದರ ಹೆಗ್ಗಳಿಕೆ. ಟೆಕ್ನೋ ಕಂಪನಿ ಬಜೆಟ್ ಫ್ರೆಂಡ್ಲಿ ಮೊಬೈಲ್ ನೀಡುವುದರಲ್ಲಿ ಯಾವತ್ತೂ ಮುಂದೆ. ಅದರಲ್ಲೂ ಈ ಬಾರಿ ಯುವಸಮೂಹವನ್ನು ಗುರಿ ಮಾಡಿ ವೇಗದ ಫೋನ್ ತಂದಿದ್ದಾರೆ. ಹಾಗಾಗಿ ಕಡಿಮೆ ಬೆಲೆಗೆ ಗೇಮಿಂಗ್ ಫೋನ್ ಬಳಸುವವರು ಈ ಫೋನ್ ಅನ್ನು ಗಮನಿಸಬಹುದು. ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ.