Samsung Galaxy S26 FE ಭಾರತದಲ್ಲಿ ಲಾಂಚ್‌; 50MP ಕ್ಯಾಮೆರಾ, 4,900mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌!

Published : Sep 16, 2026, 04:10 PM IST
Samsung Galaxy S26 FE

ಸಾರಾಂಶ

ಸ್ಯಾಮ್‌ಸಂಗ್ ಕಂಪನಿಯು ಭಾರತದಲ್ಲಿ ಹೊಸ ಗ್ಯಾಲಕ್ಸಿ S26 FE ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು 6.7 ಇಂಚಿನ ಡಿಸ್‌ಪ್ಲೇ, Exynos 2500 ಪ್ರೊಸೆಸರ್, 50MP ಕ್ಯಾಮೆರಾ ಮತ್ತು ಗ್ಯಾಲಕ್ಸಿ AI ಫೀಚರ್‌ಗಳನ್ನು ಒಳಗೊಂಡಿದೆ. 79,999 ರೂ. ಬೆಲೆಯ ಈ ಫೋನ್‌ಗೆ ಆಕರ್ಷಕ ಎಕ್ಸ್‌ಚೇಂಜ್ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಿವೆ.

ಸ್ಯಾಮ್‌ಸಂಗ್ ಕಂಪನಿ ತನ್ನ ಗ್ಯಾಲಕ್ಸಿ S26 ಸೀರೀಸ್‌ಗೆ ಹೊಸ ಮಾಡೆಲ್ ಸೇರಿಸಿದೆ. ಗ್ಯಾಲಕ್ಸಿ S26 FE ಫೋನ್ ಅನ್ನು ಕಂಪನಿ ಭಾರತದಲ್ಲಿ ಲಾಂಚ್ ಮಾಡಿದೆ. ಪ್ರೀಮಿಯಂ ಫೋನ್‌ಗಳ ಬೆಸ್ಟ್ ಫೀಚರ್ಸ್ ಅನ್ನು ಸಾಮಾನ್ಯ ಗ್ರಾಹಕರಿಗೂ ತಲುಪಿಸುವ ಉದ್ದೇಶದಿಂದ ಈ ಹೊಸ FE ಮಾಡೆಲ್ ಬಂದಿದೆ. ಬೆಸ್ಟ್ ಕ್ಯಾಮೆರಾ, ಗ್ಯಾಲಕ್ಸಿ AI ಫೀಚರ್ಸ್ ಹಾಗೂ ಡೈಲಿ ಯೂಸ್‌ಗೆ ಬೇಕಾದ ಪವರ್‌ಫುಲ್ ಪರ್ಫಾರ್ಮೆನ್ಸ್ ಈ ಫೋನ್‌ನಲ್ಲಿದೆ. 120Hz ರಿಫ್ರೆಶ್ ರೇಟ್ ಇರುವ 6.7 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ, Exynos 2500 ಪ್ರೊಸೆಸರ್ ಹಾಗೂ 4,900 mAh ಬ್ಯಾಟರಿ ಈ ಫೋನ್‌ನಲ್ಲಿದೆ.

ಗ್ಯಾಲಕ್ಸಿ S26 FE ಬೆಲೆ ಮತ್ತು ಆಫರ್ಸ್

ಭಾರತದಲ್ಲಿ 8GB RAM ಮತ್ತು 256GB ಸ್ಟೋರೇಜ್ ಮಾಡೆಲ್‌ಗೆ 79,999 ರೂ. ಬೆಲೆ ನಿಗದಿ ಮಾಡಲಾಗಿದೆ. ಪಿಸ್ತಾಶಿಯೋ, ಬ್ಲೂಬೆರ್ರಿ ಮತ್ತು ಗ್ರಾಫೈಟ್ ಬಣ್ಣಗಳಲ್ಲಿ ಈ ಫೋನ್ ಸಿಗಲಿದೆ. ಹೊಸ ಫೋನ್ ಖರೀದಿಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ಭರ್ಜರಿ ಆಫರ್ಸ್ ಕೂಡ ಅನೌನ್ಸ್ ಮಾಡಿದೆ. ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡಿದರೆ 8,000 ರೂ. ವರೆಗೆ ಅಪ್‌ಗ್ರೇಡ್ ಬೋನಸ್ ಸಿಗುತ್ತದೆ. ಆಯ್ದ NBFCಗಳ ಮೂಲಕ 30 ತಿಂಗಳವರೆಗೆ ನೋ-ಕಾಸ್ಟ್ EMI ಆಪ್ಷನ್ ಕೂಡ ಇದೆ. ಇದರ ಜೊತೆಗೆ 3,000 ರೂ. ಎಕ್ಸ್‌ಟ್ರಾ ಅಪ್‌ಗ್ರೇಡ್ ಬೋನಸ್ ಸಿಗಲಿದೆ. ಪ್ರಮುಖ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ 7,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಅಥವಾ 12 ತಿಂಗಳ ನೋ-ಕಾಸ್ಟ್ EMI ಆಪ್ಷನ್ ಕೂಡ ನೀವು ಆಯ್ಕೆ ಮಾಡಬಹುದು.

6.7 ಇಂಚಿನ AMOLED ಡಿಸ್‌ಪ್ಲೇ

ಗ್ಯಾಲಕ್ಸಿ S26 FE ಫೋನ್‌ನಲ್ಲಿ 6.7 ಇಂಚಿನ ಫುಲ್ HD+ ಡೈನಾಮಿಕ್ AMOLED 2X ಡಿಸ್‌ಪ್ಲೇ ಕೊಟ್ಟಿದ್ದಾರೆ. 120Hz ರಿಫ್ರೆಶ್ ರೇಟ್ ಇರುವ ಈ ಸ್ಕ್ರೀನ್ 1,900 ನಿಟ್ಸ್ ಪೀಕ್ ಬ್ರೈಟ್‌ನೆಸ್ ಸಪೋರ್ಟ್ ಮಾಡುತ್ತದೆ. Exynos 2500 ಪ್ರೊಸೆಸರ್ ಈ ಫೋನ್‌ಗೆ ಪವರ್ ಕೊಡುತ್ತದೆ. ಹಾಗೇ, ಬ್ಯಾಟರಿ ಬ್ಯಾಕಪ್‌ಗಾಗಿ 4,900 mAh ಕೆಪಾಸಿಟಿಯ ಬ್ಯಾಟರಿ ಕೂಡ ಇದರಲ್ಲಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ

ಕ್ಯಾಮರಾ ವಿಚಾರಕ್ಕೆ ಬಂದರೆ, ಈ ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. 50 ಮೆಗಾಪಿಕ್ಸೆಲ್ ವೈಡ್ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಹಾಗೂ 3x ಆಪ್ಟಿಕಲ್ ಜೂಮ್ ಸಪೋರ್ಟ್ ಮಾಡುವ 8 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇದರಲ್ಲಿದೆ. ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್‌ಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಕೂಡ ಕೊಟ್ಟಿದ್ದಾರೆ.

ಗ್ಯಾಲಕ್ಸಿ AI ಜೊತೆ ಹೊಸ ಸಾಫ್ಟ್‌ವೇರ್

ಗ್ಯಾಲಕ್ಸಿ S26 FE ಫೋನ್ ಆಂಡ್ರಾಯ್ಡ್ 17 ಆಧಾರಿತ One UI 9 ನಲ್ಲಿ ಕೆಲಸ ಮಾಡುತ್ತದೆ. ಡೈಲಿ ಯೂಸ್ ಅನ್ನು ಇನ್ನಷ್ಟು ಸುಲಭ ಮಾಡುವ ಗ್ಯಾಲಕ್ಸಿ AI ಫೀಚರ್ಸ್ ಈ ಹೊಸ ಸಾಫ್ಟ್‌ವೇರ್‌ನ ಪ್ರಮುಖ ಹೈಲೈಟ್. ಅಪ್‌ಡೇಟ್ ಆಗಿರುವ 'ನೌ ಬ್ರೀಫ್' (Now Brief) ಸಿಸ್ಟಮ್, ಯೂಸರ್‌ಗೆ ಬೇಕಾದ ಮಾಹಿತಿಯನ್ನು ಅವರವರ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿ ಕೊಡುತ್ತದೆ. ಕಸ್ಟಮೈಸ್ ಮಾಡಬಹುದಾದ ಬ್ರೀಫಿಂಗ್ ಕಾರ್ಡ್ಸ್, ಹವಾಮಾನ ವರದಿ, ಹೆಲ್ತ್ ಮತ್ತು ಫಿಟ್‌ನೆಸ್ ಡೀಟೇಲ್ಸ್ ಇದರಲ್ಲಿ ಸಿಗುತ್ತದೆ. ಸಿಂಪಲ್ ಕಮಾಂಡ್ ಕೊಡುವ ಮೂಲಕ ಯೂಸರ್ಸ್ ತಮ್ಮದೇ ಆದ ಕಾರ್ಡ್‌ಗಳನ್ನು ಕೂಡ ಕ್ರಿಯೇಟ್ ಮಾಡಬಹುದು. ಆಯ್ದ ಥರ್ಡ್-ಪಾರ್ಟಿ ಆ್ಯಪ್‌ಗಳು ಮತ್ತು ನೋಟಿಫಿಕೇಶನ್‌ಗಳಿಗೂ ಸಂದರ್ಭಕ್ಕೆ ತಕ್ಕಂತೆ ಸಜೆಷನ್ ಕೊಡಲು 'ನೌ ಬ್ರೀಫ್'ಗೆ ಸಾಧ್ಯವಿದೆ.

IP68 ಸೇಫ್ಟಿ ಮತ್ತು 7 ವರ್ಷದ ಅಪ್‌ಡೇಟ್

161.6 x 76.9 x 7.4 mm ಅಳತೆ ಇರುವ ಈ ಫೋನ್ 193 ಗ್ರಾಂ ತೂಕ ಇದೆ. ನೀರು ಮತ್ತು ಧೂಳಿನಿಂದ ರಕ್ಷಣೆ ಕೊಡಲು IP68 ರೇಟಿಂಗ್ ಕೂಡ ಸಿಕ್ಕಿದೆ. ಸ್ಯಾಮ್‌ಸಂಗ್ ಈ ಫೋನ್‌ಗೆ ದೀರ್ಘಕಾಲದ ಸಾಫ್ಟ್‌ವೇರ್ ಸಪೋರ್ಟ್ ಭರವಸೆ ಕೊಟ್ಟಿದೆ. ಗ್ಲೋಬಲ್ ಮಾರ್ಕೆಟ್‌ಗೆ ಲಾಂಚ್ ಆದ ದಿನಾಂಕದಿಂದ 7 ತಲೆಮಾರಿನ OS ಅಪ್‌ಗ್ರೇಡ್ಸ್ ಮತ್ತು 7 ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ಸ್ ಈ ಫೋನ್‌ಗೆ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

45W ಫಾಸ್ಟ್ ಚಾರ್ಜಿಂಗ್

3 ನ್ಯಾನೋಮೀಟರ್ ಟೆಕ್ನಾಲಜಿಯಲ್ಲಿ ತಯಾರಾದ Exynos 2500 ಪ್ರೊಸೆಸರ್ ಈ ಫೋನ್‌ನಲ್ಲಿದೆ. 5G, LTE, Wi-Fi 6E, Wi-Fi Direct ಮತ್ತು ಬ್ಲೂಟೂತ್ 5.4 ಕನೆಕ್ಟಿವಿಟಿ ಆಪ್ಷನ್ಸ್ ಇವೆ. 4,900 mAh ಬ್ಯಾಟರಿಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. 45W ಅಡಾಪ್ಟರ್ ಬಳಸಿದರೆ ಕೇವಲ 30 ನಿಮಿಷಗಳಲ್ಲಿ ಬ್ಯಾಟರಿ 69% ವರೆಗೆ ಚಾರ್ಜ್ ಆಗುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ. 15W ಫಾಸ್ಟ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಪವರ್ ಶೇರ್ ಫೆಸಿಲಿಟಿ ಕೂಡ ಈ ಫೋನ್‌ನಲ್ಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

iPhone 17 Pro Price Drop: ಐಫೋನ್ 17 ಪ್ರೊ ಬೆಲೆ ಭಾರೀ ಇಳಿಕೆ..! ₹69,990 ಕ್ಕೆ ಐಫೋನ್ 17 ಪ್ರೊ ಸಿಗೋದು ಹೇಗೆ?
ಐಫೋನ್ ಪ್ರಿಯರಿಗೆ ಜಾಕ್‌ಪಾಟ್ ಆಫರ್: ಬಂಪರ್ ಡಿಸ್ಕೌಂಟ್‌ನೊಂದಿಗೆ ಕೇವಲ ₹69,990 ಕ್ಕೆ ಸಿಗಲಿದೆ ಐಫೋನ್ 17 ಪ್ರೋ