ಹಬ್ಬದ ದಿನ Samsung Galaxy M33 5G ಲಾಂಚ್, ದುಡ್ಡಿಗೆ ತಕ್ಕ ಫೋನ್ ಇದು

By Suvarna NewsFirst Published Apr 3, 2022, 3:17 PM IST
Highlights

*ಯುಗಾದಿ ಹಬ್ಬದ ದಿನ ಭಾರತದಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 ಫೋನ್
*50 ಮೆಗಾ ಪಿಕ್ಸೆಲ್ ಕ್ಯಾಮೆರಾ, 6000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದೆ
*ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ದುಡ್ಡಿಗೆ ತಕ್ಕ ಫೋನ್ ಆಗಿದೆ 

ಭಾರತೀಯ ಮಾರುಕಟ್ಟೆಯಲ್ಲಿ ಅಗ್ರ ಪಾಲು ಹೊಂದಿರುವ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್(Samsung) ಕಂಪನಿಯು ಮತ್ತೊಂದು  ಸ್ಮಾರ್ಟ್‌ಫೋನ್ ನೊಂದಿಗೆ ಮತ್ತೆ ಲಗ್ಗೆ ಇಟ್ಟಿದೆ. ಯುಗಾದಿ ಹಬ್ಬದ ದಿನದಂದೇ ಕಂಪನಿಯು ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 (Samsung Galaxy M33 5G) 5ಜಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಯಾಮ್ಸಂಗ್ ಬೃಹತ್ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿದೆ. ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೇ, ಸ್ಮಾರ್ಟ್ ವಾಚ್, ಟ್ಯಾಬ್ಲೆಟ್, ಲ್ಯಾಪ್‌ಟ್ಯಾಪ್ ಮತ್ತು ಸ್ಮಾರ್ಟ್ ಟಿವಿಗಳ ಮೂಲಕವೂ ಕಂಪನಿಯು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ಇದೀಗ ಹೊಸ ಸ್ಮಾರ್ಟ್‌ಫೋನ್ ಮೂಲಕ ಮತ್ತು ಸದ್ದು ಮಾಡುತ್ತಿದೆ. ಈಗ ಬಿಡಗುಡೆಯಾಗಿರುವ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಸಾಕಷ್ಟು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್, 50 ಮೆಗಾ ಪಿಕ್ಸೆಲ್ ಕ್ಯಾಮೆರಾ, ಅಕ್ಟಾಕೋರ್  Exynos ಪ್ರೊಸೆಸರ್ ಒಳಗೊಂಡಿದೆ. ಈ ಗ್ಯಾಲಕ್ಸಿ ಎಂ33 ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಈ ಮೊದಲೇ ಸಾಕಷ್ಟು ಮಾಹಿತಿಗಳು ಆನ್‌ಲೈನ್ ನಲ್ಲಿ ಹರಿದಾಡಿದ್ದವು. ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಗ್ರೀನ್ ಮತ್ತು ಬ್ಲ್ಯೂ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಏಪ್ರಿಲ್ 8ರಿಂದ ಅಮೆಜಾನ್, ಸ್ಯಾಮ್ಸಂಗ್ ಆನ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ.

ಇದನ್ನೂ ಓದಿ: ಅಬ್ಬಾ... ನಿತ್ಯ 7 ಶತಕೋಟಿ Whatsapp Voice Message ರವಾನೆ!

Latest Videos

ಹೇಗಿದೆ ಫೋನ್?
ಸ್ಯಾಮ್ಸಂಗ್ ಗ್ಯಾಲಕ್ಸಿ M33 5G ಆಂಡ್ರಾಯ್ಡ್ 12 ಅನ್ನು ಒಂದು UI 4.1 ಜೊತೆಗೆ ರನ್ ಮಾಡುತ್ತದೆ ಮತ್ತು ಇದು ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಈ ಪೋನ್ 6.6-ಇಂಚಿನ ಪೂರ್ಣ HD+ ಇನ್ಫಿನಿಟಿ-V ಪ್ರದರ್ಶಕದ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಪ್ರದರ್ಶಕವು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಆಕ್ಟಾ-ಕೋರ್ 5nm Exynos ಪ್ರೊಸೆಸರ್ ಅನ್ನು ಹೊಂದಿದೆ, ಇದು 8 GB RAM ಮತ್ತು 128 GB ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.  ಜೋಡಿಯಾಗಿದೆ. RAM ಅನ್ನು ವರ್ಚುವಲ್ ಆಗಿ 16GB ವರೆಗೆ ವಿಸ್ತರಿಸಬಹುದು.

50 ಮೆಗಾ ಪಿಕ್ಸೆಲ್ ಕ್ಯಾಮೆರಾ
ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Galaxy M33 5G ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಈ ಪೈಕಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇನ್ನು 5-ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಜೊತೆಗೆ 120-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಎಫ್/2.4 ಅಪರ್ಚರ್, ಎಫ್/2.2 ಅಪರ್ಚರ್ ಹೊಂದಿರುವ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಒಳಗೊಂಡಿದೆ. 

ಹಿಂಬದಿಯ ಕ್ಯಾಮೆರಾವು ಬೊಕೆ ಎಫೆಕ್ಟ್, ಸಿಂಗಲ್ ಟೇಕ್, ಆಬ್ಜೆಕ್ಟ್ ಎರೇಸರ್ ಮತ್ತು ವೀಡಿಯೋ TNR (ಟೆಂಪೊರಲ್ ನಾಯ್ಸ್ ರಿಡಕ್ಷನ್) ನಂತಹ ವಿಭಿನ್ನ ವೃತ್ತಿಪರ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ. ಕಂಪನಿಯು ಫೋನ್ ಫ್ರಂಟ್‌ನಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ.

ಇದನ್ನೂ ಓದಿ: Apple iOS 15.4.1 ಅಪ್‌ಡೇಟ್ ಲಭ್ಯ; ಏನೆಲ್ಲ ಇದೆ ಇದರಲ್ಲಿ?

ಬೆಲೆ ಎಷ್ಟು?
6 GB + 128 GB ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಬೆಲೆ 18,999 ರೂ. ಇದೇ ವೇಳೆ, 8 GB + 128 GB ವೆರಿಯೆಂಟ್ ಬೆಲೆ 20,499 ರೂ. ಆಗಿದೆ. ಬೆಲೆ ಗಮನಿಸಿದರೆ, ತೀರಾ ತುಟ್ಟಿಯೇನೂ ಆಗಿಲ್ಲ. ಈ ಫೋನ್ ವ್ಯಾಲ್ಯೂ ಫಾರ್ ಮನೀ ಎಂದು ಹೇಳಬಹುದು. ಹಾಗೆಯೇ ಆರಂಭಿಕ ಆಫರ್ ಆಗಿ ಕಂಪನಿಯು ಎರಡೂ ವೆರೆಯೆಂಟ್‌ಗಳನ್ನು 17,999 ರೂ. ಮತ್ತು 19,999 ರೂ. ಮಾರಾಟ ಮಾಡುತ್ತಿದೆ. 

click me!