ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!

Published : Dec 09, 2025, 10:38 AM IST
Samsung

ಸಾರಾಂಶ

ಎಐ ಅನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಸಂಸ್ಥೆಗಳಲ್ಲಿ ಸ್ಯಾಮ್‌ಸಂಗ್ ಕೂಡ ಒಂದು. ಗ್ಯಾಲಕ್ಸಿ ಎಐ ಮೂಲಕ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ಗಳನ್ನೂ ಅತ್ಯಂತ ಆಕರ್ಷಕವಾಗಿ ರೂಪಿಸುತ್ತಿದ್ದಾರೆ. ಅದಕ್ಕೆ ಉತ್ತಮ ನಿದರ್ಶನ ಗ್ಯಾಲಕ್ಸಿ ಎ17 5ಜಿ.

ಎಐ ಅನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಸಂಸ್ಥೆಗಳಲ್ಲಿ ಸ್ಯಾಮ್‌ಸಂಗ್ ಕೂಡ ಒಂದು. ಗ್ಯಾಲಕ್ಸಿ ಎಐ ಮೂಲಕ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ಗಳನ್ನೂ ಅತ್ಯಂತ ಆಕರ್ಷಕವಾಗಿ ರೂಪಿಸುತ್ತಿದ್ದಾರೆ. ಅದಕ್ಕೆ ಉತ್ತಮ ನಿದರ್ಶನ ಗ್ಯಾಲಕ್ಸಿ ಎ17 5ಜಿ. 20 ಸಾವಿರ ರೂಪಾಯಿ ಆಸುಪಾಸಲ್ಲಿ ಒಂದು ಒಳ್ಳೆಯ ಫೋನ್ ಇದ್ದರೆ ಹೇಳಿ ಎನ್ನುವವರು ಈ ಫೋನ್ ಅನ್ನು ಗಮನಿಸಬಹುದು. ಯಾಕೆ ಅಂತ ಮುಂದೆ ನೋಡೋಣ.

ಮೊದಲಿಗೆ ಈ ಫೋನ್ ಹಲವು ವರ್ಷ ಹಳತಾಗುವುದಿಲ್ಲ. ಯಾಕೆಂದರೆ ಇದಕ್ಕೆ 6 ಬಾರಿ ಆ್ಯಂಡ್ರಾಯ್ಡ್ ಅಪ್‌ಗ್ರೇಡ್‌ ಮತ್ತು 6 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳು ಲಭ್ಯವಿದೆ. ಇದು ನಿಜಕ್ಕೂ ಗಮನಾರ್ಹ ಸೌಲಭ್ಯ. 7.5 ಮಿಮೀ ದಪ್ಪ, 192 ಗ್ರಾಂ ತೂಕ ಹೊಂದಿರುವ ಈ ಫೋನು ಹಿಂಬದಿಯಲ್ಲಿ ಸೊಗಸಾದ ಪ್ಯಾನೆಲ್‌ ಹೊಂದಿದೆ. ತೆಳುವಾಗಿ ಹಿಡಿಯುವುದಕ್ಕೂ ನೋಡುವುದಕ್ಕೂ ಖುಷಿ ಕೊಡುತ್ತದೆ. 6.7 ಇಂಚಿನ ಸೂಪರ್ ಅಮೋಲ್ಡ್‌ ಡಿಸ್‌ಪ್ಲೇ ವೀಡಿಯೋ ಕಂಟೆಂಟ್‌ಗಳನ್ನು ಶ್ರೀಮಂತವಾಗಿ ತೋರಿಸುತ್ತದೆ. ಅನೇಕ ಎಐ ಫೀಚರ್‌ಗಳನ್ನು ಇದರಲ್ಲಿ ಸಂತೋಷದಿಂದ ಬಳಸಬಹುದು.

ಗೂಗಲ್‌ ಜೆಮಿನಿ ಆಯ್ಕೆ ಕೂಡ ಇದ್ದು, ಎಐ ಬಳಕೆದಾರರಿಗೆ ಒಳ್ಳೆಯ ಆಯ್ಕೆ. ಮೂರು ಕ್ಯಾಮೆರಾ ಸೆಟಪ್‌ ಇದ್ದು, 50 ಎಂಪಿಯ ಮೇನ್‌ ಕ್ಯಾಮೆರಾ ಹಾಗೂ 5 ಎಂಪಿ ಮತ್ತು 2 ಎಂಪಿಯ ವೈಡ್‌, ಮ್ಯಾಕ್ರೋ ಲೆನ್ಸ್‌ಗಳಿವೆ. ಫೋಟೋ ತೆಗೆಯಲು, ವೀಡಿಯೋಗ್ರಫಿಗೆ ಉತ್ತಮವಾಗಿದೆ. ಕಂಂಟೆಂಟ್‌ ಕ್ರಿಯೇಟರ್‌ಗಳು ಕೂಡ ಸೊಗಸಾದ ಕಂಟೆಂಟ್‌ ಅನ್ನು ತಯಾರಿಸಬಹುದು. ಜೂಮ್‌ ಮಾಡಿದರೂ ಫೋಟೋ ಚೆನ್ನಾಗಿಯೇ ಬರುತ್ತದೆ. 13 ಎಂಪಿಯ ಫ್ರಂಟ್‌ ಕ್ಯಾಮೆರಾ ಸೆಲ್ಫೀಗೆ ಸೂಕ್ತವಾಗಿದೆ.

ಬಜೆಟ್‌ನಲ್ಲಿ ಪ್ರೀಮಿಯಂ ಅನುಭವ

ಎಕ್ಸಿನೋಸ್‌ 1330 ಪ್ರೊಸೆಸರ್ ಇರುವುದರಿಂದ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಯೂಟ್ಯೂಬ್‌ ಸ್ಟ್ರೀಮಿಂಗಿಗೂ, ಗೇಮಿಂಗಿಗೂ ಒದಗಿಬರುತ್ತದೆ. 5000 ಎಂಎಎಚ್ ಬ್ಯಾಟರಿ ಇದರ ಮತ್ತೊಂದು ಆಕರ್ಷಣೆ. ಪ್ಯಾಕ್‌ನಲ್ಲಿ ಡೇಟಾ ಕೇಬಲ್‌, ಚಾರ್ಜರ್‌ ಅಡಾಪ್ಟರ್‌ ಕೂಡ ಜೊತೆ ಇರುವುದು ಇದರ ಮತ್ತೊಂದು ಪ್ಲಸ್‌ ಪಾಯಿಂಟ್‌. 6ಜಿಬಿ+128ಜಿಬಿ, 8ಜಿಬಿ+128ಜಿಬಿ ಮತ್ತು 8ಜಿಬಿ+256ಜಿಬಿ ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಬೆಲೆ ಕ್ರಮವಾಗಿ ರು.18999, ರು. 20499 ಮತ್ತು ರು.23499.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಐಫೋನ್‌-17 ಖರೀದಿಗೆ ಬಂಪರ್‌ ಡಿಸ್ಕೌಂಟ್‌.. ಬರೀ ಇಷ್ಟೇ ಹಣದಲ್ಲಿ ಸಿಗಲಿದೆ ಸ್ಮಾರ್ಟ್‌ಫೋನ್‌
75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌