ಬೆಸ್ಟ್‌ ಫೋನ್‌ ಹುಡುಕುತ್ತಿದ್ದೀರಾ? ಇಲ್ಲಿದೆ ಬಜೆಟ್‌ ಫ್ರೆಂಡ್ಲಿ ಲಾವಾ ಶಾರ್ಕ್‌ 2: ಏನಿದರೆ ವಿಶೇಷತೆ?

Published : Nov 25, 2025, 08:47 AM IST
Lava Shark 2

ಸಾರಾಂಶ

ಲಾವಾ ಶಾರ್ಕ್‌ 2 4ಜಿ ಸ್ಮಾರ್ಟ್‌ಫೋನ್‌ ಎಷ್ಟು ಸಾಮರ್ಥ್ಯ ಹೊಂದಿದೆ, ಯಾರು ಇದನ್ನು ಭರಿಸಬಹುದು ಎಂಬುದು ಗೊತ್ತಾಗುತ್ತದೆ. ಲಾವಾ ಉದ್ದೇಶವೂ ಅದೇ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಬೇಕು ಅನ್ನುವುದು.

ಲಾವಾ ಶಾರ್ಕ್‌ 2 4ಜಿ ಸ್ಮಾರ್ಟ್‌ಫೋನ್‌ನ ವಿಶೇಷತೆಗಳಿವು. ಇವಿಷ್ಟು ಓದಿದರೆ ಈ ಫೋನ್‌ ಎಷ್ಟು ಸಾಮರ್ಥ್ಯ ಹೊಂದಿದೆ, ಯಾರು ಇದನ್ನು ಭರಿಸಬಹುದು ಎಂಬುದು ಗೊತ್ತಾಗುತ್ತದೆ. ಲಾವಾ ಉದ್ದೇಶವೂ ಅದೇ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಬೇಕು ಅನ್ನುವುದು. ಅದಕ್ಕೆ ತಕ್ಕಂತೆ ಈ ಸ್ಮಾರ್ಟ್‌ಫೋನ್‌ ರೂಪುಗೊಂಡಿದೆ. ವಿದ್ಯಾರ್ಥಿಗಳು, ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ ತಗೋಬೇಕು ಎಂದು ಆಲೋಚಿಸುತ್ತಿರುವವರು, ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಹೊಂದುವ ಆಸೆ ಇರುವವರು ಲಾವಾ ಶಾರ್ಕ್‌ 2 ಗಮನಿಸಬಹುದು.

ಆಕ್ಟಾಕೋರ್‌ ಯುನಿಸಾಕ್‌ ಟಿ7250 ಪ್ರೊಸೆಸರ್‌ ಹೊಂದಿರುವ ಈ ಫೋನ್‌ ಇದರ ಘನತೆಗೆ ತಕ್ಕಂತೆ ವೇಗವಾಗಿ ಕಾರ್ಯನಿರ್ವಹಿಸುತ್ತದೆ. 6.75 ಇಂಚಿನ ಇದರ ಡಿಸ್‌ಪ್ಲೇ ಅದರ ಶಕ್ತ್ಯಾನುಸಾರ ಉತ್ತಮ ದೃಶ್ಯಗಳನ್ನು ಪ್ರಸ್ತುತ ಪಡಿಸುತ್ತದೆ. ಸಿನಿಮಾ ನೋಡಲು, ವಿಡಿಯೋ ವೀಕ್ಷಿಸಲು ಸೂಕ್ತವಾಗಿದೆ. ಉತ್ತಮ ಬ್ಯಾಟರಿ ಸಾಮರ್ಥ್ಯ ಕೂಡ ಇರುವುದರಿಂದ ದೀರ್ಘ ಸಮಯದ ಬಳಕೆಗೆ ಸೂಕ್ತವಾಗಿದೆ. ಧೂಳು ಮತ್ತು ನೀರು ನಿರೋಧಕ ಸಾಮರ್ಥ್ಯ ಇದನ್ನು ನಿರಾಳವಾಗಿ ಬಳಸಲು ಅನುವು ಮಾಡಿಕೊಡುತ್ತದೆ.

ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌

ಡ್ಯುಯಲ್‌ ಸಿಮ್‌ ಸೌಲಭ್ಯ ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸಿದೆ. 2 ವರ್ಷದ ಸೆಕ್ಯುರಿಟಿ ಅಪ್‌ಡೇಟ್‌ಗಳು ಲಭ್ಯವಿದ್ದು, ಎರಡು ವರ್ಷ ಯಾವುದೇ ತಲೆಬಿಸಿ ಇಲ್ಲದೆ ಬಳಸಿಕೊಳ್ಳಬಹುದು. ಕ್ಯಾಮೆರಾದಲ್ಲಿ ಎಐ ಫೀಚರ್‌ಗಳನ್ನು ಕೊಟ್ಟಿರುವುದು ಇದರ ಪ್ಲಸ್ಸು. ಹೀಟ್‌ ಆಗುವುದನ್ನು ಮತ್ತು ಸ್ಟೋರೇಜ್‌ ಸಮಸ್ಯೆಯನ್ನು ಇಲ್ಲಿ ನಿವಾರಿಸುವ ಪ್ರಯತ್ನ ಮಾಡಲಾಗಿದೆ. ಲಾವಾ ತನ್ನ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನ ಗಡಿಯನ್ನು ತಾನೇ ಮೀರಲು ಯತ್ನಿಸುತ್ತದೆ. ಅದಕ್ಕೆ ಶಾರ್ಕ್‌ 2 ಮತ್ತೊಂದು ಪುರಾವೆಯಾಗಿದೆ.

-ಎಐ ಸಾಮರ್ಥ್ಯದ 50ಎಂಪಿ ಮೇನ್ ಕ್ಯಾಮೆರಾ.
-8ಎಂಪಿ ಫ್ರಂಟ್‌ ಕ್ಯಾಮೆರಾ.
-5000 ಎಂಎಎಚ್ ಬ್ಯಾಟರಿ.
-4ಜಿಬಿ ರ್‍ಯಾಮ್ + 4 ಜಿಬಿ ವರ್ಚುವಲ್ ರ್‍ಯಾಮ್ + 64 ಜಿಬಿ ಸ್ಟೋರೇಜ್
-ಬೆಲೆ: ರೂ.6999.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್