JioPhone 5G: ಭಾರತದ ಅತಿ ಅಗ್ಗದ ರಿಲಯನ್ಸ್‌ 5G ಫೋನ್ ಬಿಡುಗಡೆ ಸಾಧ್ಯತೆ: ಫೀಚರ್ಸ್‌ ಲೀಕ್!‌

By Suvarna NewsFirst Published Jan 26, 2022, 10:51 AM IST
Highlights

ಭಾರತದಲ್ಲಿ ಅತ್ಯಂತ ಕೈಗೆಟುಕುವ 5G ಫೋನ್ ಕಳೆದ ವರ್ಷ ಸುಮಾರು 13,000 ರೂ.ಗೆ ಬಂದಿತ್ತು, ಆದರೆ JioPhone 5G 10,000 ರೂ ಬೆಲೆಯಲ್ಲಿ ಹೊಸ 5G ಬಿಡುಗಡೆಗೆ ಸಿದ್ದತೆ ನಡೆಸಿದೆ ಎಂದು ಲೀಕ್‌ ವರದಿಗಳು ತಿಳಿಸಿವೆ.

Tech Desk: ಭಾರತದಲ್ಲಿ 5G ಕ್ರಾಂತಿಯು ಈ ವರ್ಷ ಪ್ರಾರಂಭವಾಗುವ ಸಾಧ್ಯತೆಯಿದೆ. ಸಿಲಿಕಾನ್‌ ಸಿಟಿ ಬೆಂಗಳೂರು (Bengaluru), ಮುಂಬೈ, ದೆಹಲಿ, ಅಹಮದಾಬಾದ್‌ ಸೇರಿದಂತೆ ದೇಶದ 13 ಮಹಾ ನಗರಗಳಲ್ಲಿ ಮುಂದಿನ ವರ್ಷದಿಂದಲೇ ಅತೀ ವೇಗದ ಇಂಟರ್ನೆಟ್‌ ಸೇವೆ 5ಜಿ ಸೇವೆ (5G Internet Services) ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ಡಿಜಿಟಲ್‌ ಕ್ರಾಂತಿಯಲ್ಲಿ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ಟೆಲಿಕಾಂ ಕಂಪನಿಯು ಭಾರತದಲ್ಲಿ ವಿವಿಧ ಸ್ಥಳಗಳಲ್ಲಿ 5G ಅನ್ನು ಪರೀಕ್ಷಿಸುವಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದೆ ಅಲ್ಲದೇ  ಸಾಟಿಯಿಲ್ಲದ 5G ವೇಗವನ್ನು ನೀಡಲು ಉತ್ತಮ ಸೇವೆಗಳನ್ನು ಒದಗಿಸಲಿದೆ ಎಂದು ಕಂಪನಿ ಹೇಳಿದೆ. 

ಈ ಹಾದಿಯಲ್ಲೇ ಇನ್ನೊಂದು ಪ್ರಮುಖ ಹೆಜ್ಜೆ ಎಂದರೆ 5G ಬೆಂಬಲಿಸುವ ಸ್ಮಾರ್ಟ್‌ಫೋನ್ ಬಿಡುಗಡೆ. ಜಿಯೋ ಈ ವರ್ಷ್ಯಾಂತ್ಯದಲ್ಲಿ  ಜಿಯೋಫೋನ್ 5ಜಿ ಬಿಡಗಡೆಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೊದ ಮೊದಲ 5G ಫೋನ್ ಭಾರತದಲ್ಲೇ ಅತಿ ಅಗ್ಗದ 5G ಫೋನ್ ಆಗಿರಬಹುದು ಎಂದು ಲೀಕ್‌ಗಳು ತಿಳಿಸಿವೆ.

ಇದನ್ನೂ ಓದಿ: 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್‌!

ಬೆಲೆ ಸುಮಾರು ರೂ 10,000ಕ್ಕೆ ನಿಗದಿ?:  ಆಂಡ್ರಾಯ್ಡ್ ಸೆಂಟ್ರಲ್‌ನ (Android Central) ವರದಿಯು ಜಿಯೋ 5G ಕವರೇಜ್ ಅನುಷ್ಠಾನವನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದೆ. ಇದು ಮೊದಲ ಹಂತದಲ್ಲಿ 13 ನಗರಗಳಿಂದ ಪ್ರಾರಂಭಿಸಿ ನಂತರ ವಿವಧ ಹಂತಗಳಲ್ಲಿ ದೇಶದ ವಿವಿಧ ಭಾಗಗಳಿಗೆ ವಿಸ್ತರಿಸಲಿದೆ. ಈ ಯೋಜನೆಯ ಪ್ರಮುಖ ಭಾಗವಾಗಿ JioPhone 5G ಬಿಡುಗಡೆಯಾಗಲಿದೆ ಹಾಗೂ ಇದು ರಿಲಯನ್ಸ್ ಜಿಯೋ ಈ ಫೋನ್‌ ಬೆಲೆ ಸುಮಾರು ರೂ 10,000ಕ್ಕೆ ನಿಗದಿಪಡಿಸಬಹುದು ಎಂದು ತಿಳಿದುಬಂದಿದೆ.  

ಭಾರತದಲ್ಲಿ ಅತ್ಯಂತ ಕೈಗೆಟುಕುವ 5G ಫೋನ್ ಕಳೆದ ವರ್ಷ ಸುಮಾರು 13,000 ರೂ.ಗೆ ಬಿಡುಗಡೆಯಾಗಿತ್ತು. ಆದರೆ 10,000 ರೂಗಳ ಬೆಲೆಯುಳ್ಳ ಫೋನ್‌  ಈಗ ಹೊಸ 5G ಫೋನ್‌ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಈ ಮೂಲಕ 13,000 ರೂ.ಗಳ ಸಮೀಪದಲ್ಲಿ ತಮ್ಮ ಅಗ್ಗದ 5G ಫೋನ್‌ಗಳನ್ನು ಮಾರಾಟ ಮಾಡುವ Realme ಮತ್ತು Redmi ಜತೆಗೆ  Jio ಸ್ಪರ್ಧಿಲಿದೆ.    

ಇದನ್ನೂ ಓದಿ: Gaming Platform ಕನ್ನಡ ಸೇರಿ ಬಹುಭಾಷೆಗಳಲ್ಲಿ ಗೇಮ್ಸ್ ನೀಡಲು ರಿಲಯನ್ಸ್ ಜಿಯೋ ಜೊತೆ ಜುಪಿ ಒಪ್ಪಂದ!

ಭಾರತದಾದ್ಯಂತ 5G ನೆಟ್‌ವರ್ಕ್‌ ಬೆಂಬಲ:  ಈ ಕಡಿಮೆ ಬೆಲೆಯು ಕಡಿಮೆ ಮಟ್ಟದ ಫೀಚರ್‌ಗಳನ್ನು ನೀಡಬಹುದು ಎಂದು ನೀರೀಕ್ಷಿಸಬಹುದು. ಆದರೆ ವರದಿಯು JioPhone 5G ಯಲ್ಲಿ ಸ್ವಲ್ಪ ಉತ್ತಮವಾದ ಹಾರ್ಡ್‌ವೇರ್‌ಗಾಗಿ ನೀಡುತ್ತಿದೆ ಎಂದು ಹೇಳಿದೆ. ಉದಾಹರಣೆಗೆ, JioPhone 5G ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 ಪ್ರೊಸೆಸರ್ನೊಂದಿಗೆ ಬರಬಹುದು, ಇದು Qualcomm ನಿಂದ ಅಗ್ಗದ 5G ಚಿಪ್ಸೆಟ್ ಆಗಿದ್ದರೂ ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಫೋನ್‌ಗಳಿಗೆ ಉತ್ತಮ ಆಯ್ಕೆಯಾಗಿದೆ. ಫೋನ್ N3, N5, N28, N40 ಮತ್ತು N78 ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ, ಅಂದರೆ ಇದು ಭಾರತದಾದ್ಯಂತ 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ.

JioPhone 5G ಮೈಕ್ರೊ SD ಕಾರ್ಡ್ ಸ್ಲಾಟ್ ಜೊತೆಗೆ 4GB RAM ಮತ್ತು 32GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. JioPhone 5G HD+ ರೆಸಲ್ಯೂಶನ್ ಜೊತೆಗೆ 6.5-ಇಂಚಿನ LCD ಯೊಂದಿಗೆ ಬರಬಹುದು. ಫೋನ್  Android 11 ರನ್‌ ಮಾಡಬಹುದು ಎಂದು ಹೇಳಲಾಗಿದೆ. ಅಲ್ಲದೇ ಜಿಯೋ ತನ್ನ ಇತರ ಅಪ್ಲಿಕೇಶನ್‌ಗಳ ಜತೆಗ  ಫೋನ್ ಪ್ರಿ ಲೋಡ್ ಮಾಡಬಹುದು.  ಇದು ಜಿಯೋಫೋನ್ ನೆಕ್ಸ್ಟ್‌ಗಾಗಿ ಗೂಗಲ್ ಅಭಿವೃದ್ಧಿಪಡಿಸಿದ Android Go forked version ಪ್ರಗತಿ ಓಎಸ್‌ಗಿಂತ ಭಿನ್ನವಾಗಿದ್ದು ಆಂಡ್ರಾಯ್ಡ್‌ನ ಪೂರ್ಣ ಪ್ರಮಾಣದ ಆವೃತ್ತಿಯಾಗಿರಬಹುದು ಎಂದು ಹೇಳಲಾಗಿದೆ. 

ಇದನ್ನೂ ಓದಿ: Mobile Service cost: ಹೊಸ ವರ್ಷದಲ್ಲಿ ಮೊಬೈಲ್ ಬಳಕೆದಾರರು ಹೆಚ್ಚು ದುಡ್ಡು ಕೊಡಬೇಕಾ?

ವಾರ್ಷಿಕ ಷೇರುದಾರರ ಸಭೆಯಲ್ಲಿ ಬಿಡುಗಡೆ ಸಾಧ್ಯತೆ:  ರಿಲಯನ್ಸ್ ಜಿಯೋ ತನ್ನ ಮೊದಲ 5G ಫೋನ್ ಅನ್ನು 13-ಮೆಗಾಪಿಕ್ಸೆಲ್  ಕ್ಯಾಮೆರಾದೊಂದಿಗೆ 2-ಮೆಗಾಪಿಕ್ಸೆಲ್ ಸಹಾಯಕ ಕ್ಯಾಮೆರಾ (auxiliary) ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಬಹುದು.  USB-C ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ JioPhone 5G 5000mAh ಬ್ಯಾಟರಿಯನ್ನು ಬಳಸಬಹುದು. JioPhone 5G ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇರಬಹುದು.

JioPhone 5G ಯ ​​ಲಾಂಚ್ ಟೈಮ್‌ಲೈನ್‌ಗೆ ಸಂಬಂಧಿಸಿದಂತೆ, ಇದೀಗ ಸಾಕಷ್ಟು ಅನಿಶ್ಚಿತತೆಯಿದೆ. ಆದಾಗ್ಯೂ ಜೂನ್‌ನಲ್ಲಿ ನಡೆಯಲಿರುವ ಈ ವರ್ಷದ ವಾರ್ಷಿಕ ಷೇರುದಾರರ ಸಭೆಯಲ್ಲಿ ರಿಲಯನ್ಸ್ ಜಿಯೋ 5G ಯೋಜನೆಗಳು ಮತ್ತು 5G ಫೋನನ್ನು  ಘೋಷಿಸಬಹುದು ಎಂದು ವರದಿ ಹೇಳಿದೆ.

click me!