Jio Yearly Plan: ದಿನಕ್ಕೆ 2.5GB ಡೇಟಾ, 365 ದಿನಗಳ ವ್ಯಾಲಿಡಿಟಿಯೊಂದಿಗೆ ಹೊಸ ವಾರ್ಷಿಕ ಯೋಜನೆ!

By Suvarna News  |  First Published Jan 9, 2022, 10:50 PM IST

ರಿಲಯನ್ಸ್ ಜಿಯೋ ದಿನಕ್ಕೆ 2.5GB ಡೇಟಾದೊಂದಿಗೆ ಹೊಸ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು JioMart ನಲ್ಲಿ ರಿಯಾಯಿತಿಗಳನ್ನು ಸಹ ನೀಡುತ್ತದೆ.


Tech Desk: ರಿಲಯನ್ಸ್ ಜಿಯೋ (Reliance Jio) ತನ್ನ ಪಟ್ಟಿಗೆಗೆ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಸೇರಿಸಿದೆ. ಇದು ಹೆಚ್ಚು ಡೇಟಾ ಉಪಯೋಗಿಸುವ ಮತ್ತು ವಾರ್ಷಿಕ ಯೋಜನೆಗಳನ್ನು (Anual Plan) ಹಡುಕುತ್ತಿರುವ ಬಳಕೆದಾರರಿಗೆ ಉಪಯುಕ್ತವಾಗಲಿದೆ. ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ತನ್ನ  ರೂ 2999 ಬೆಲೆಯ ಮತ್ತೊಂದು ವಾರ್ಷಿಕ ಯೋಜನೆಯನ್ನು ಹೊರ ತಂದಿದೆ. ಈ ವಾರ್ಷಿಕ ಯೋಜನೆ 100SMS ಜೊತೆಗೆ ದಿನಕ್ಕೆ 2.5GB ಡೇಟಾವನ್ನು ನೀಡುತ್ತದೆ. ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಸಾಮಾನ್ಯ ಡೇಟಾ ಪ್ರಯೋಜನಗಳ ಹೊರತಾಗಿ, ಯೋಜನೆಯು JioMart ಮತ್ತು ಇತರ Jio ಸೇವೆಗಳಲ್ಲಿ ರಿಯಾಯಿತಿಗಳನ್ನು ಕೂಡ ನೀಡುತ್ತದೆ.

TelecomTalk ನಿಂದ ಮೊದಲು ಗುರುತಿಸಲ್ಪಟ್ಟ ಈ ಪ್ರಿಪೇಯ್ಡ್ ಯೋಜನೆಯನ್ನು ವೆಬ್‌ಸೈಟ್‌ನಲ್ಲಿ “20% JioMart Maha Cashback” ಕೊಡುಗೆಯ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಇದರರ್ಥ ಚಂದಾದಾರರು ಈ ಯೋಜನೆಯನ್ನು ಆರಿಸಿಕೊಂಡರೆ, ಅವರು JioMart ನಿಂದ ವಸ್ತುಗಳನ್ನು ಖರೀದಿಸಿದ ನಂತರ 20 ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಕ್ಯಾಶ್‌ಬ್ಯಾಕ್ ಅನ್ನು JioMart ವ್ಯಾಲೆಟ್‌ಗೆ ಕ್ರೆಡಿಟ್ ಮಾಡಲಾಗುತ್ತದೆ, ಇದನ್ನು ಭವಿಷ್ಯದ ಖರೀದಿಗಳಿಗೂ ಬಳಸಬಹುದು. ರಿಯಾಯಿತಿಗಳ ಹೊರತಾಗಿ, ಬಳಕೆದಾರರು JioTV, JioCinema, JioSecurity ಮತ್ತು JioCloud ಸೇರಿದಂತೆ ನಾಲ್ಕು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

Tap to resize

Latest Videos

undefined

ಜಿಯೋ ಇತರ ವಾರ್ಷಿಕ ಯೋಜನೆಗಳು!

ಜಿಯೋ ಪ್ರಸ್ತುತ ಎರಡು ವಾರ್ಷಿಕ ಯೋಜನೆಗಳನ್ನು ವಿವಿಧ ಪ್ರಯೋಜನಗಳೊಂದಿಗೆ ನೀಡುತ್ತದೆ. ಜಿಯೋದ ಸೂಪರ್ ವ್ಯಾಲ್ಯೂ ಪ್ಲಾನ್‌ನ ಬೆಲೆ ರೂ 2879 ಮತ್ತು ಇತರ ವಾರ್ಷಿಕ ಯೋಜನೆ ರೂ 3119 ಆಗಿದೆ. ರೂ. 2879 ಯೋಜನೆಯು ದಿನಕ್ಕೆ 2GB ದೈನಂದಿನ ಡೇಟಾ ಪ್ರಯೋಜನಗಳನ್ನು, ಅನಿಯಮಿತ ಕರೆಗಳು, ದಿನಕ್ಕೆ 100 sms ಮತ್ತು JioTV, JioCinema, JioSecurity ಮತ್ತು JioCloud 
ಸೇರಿದಂತೆ ನಾಲ್ಕು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. 

ಇದನ್ನೂ ಓದಿ: Jio 499 Recharge: ದೈನಂದಿನ 2GB ಹೈ ಸ್ಪೀಡ್ ಡೇಟಾದೊಂದಿಗೆ ಜನಪ್ರಿಯ ಪ್ರಿಪೇಯ್ಡ್ ಯೋಜನೆ ಮರುಪ್ರಾರಂಭ!

ರೂ 3119 ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2GB ದೈನಂದಿನ ಡೇಟಾ ಪ್ರಯೋಜನಗಳು, ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು JioTV, JioCinema, JioSecurity ಮತ್ತು JioCloud ಸೇರಿದಂತೆ ನಾಲ್ಕು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ನೀಡುತ್ತದೆ. ಯೋಜನೆಯು ದಿನಕ್ಕೆ 100 SMS ಅನ್ನು ಸಹ ಒಳಗೊಂಡಿದೆ. ಆದಾಗ್ಯೂ, ಯೋಜನೆಯು 10GB ಯ ಹೆಚ್ಚುವರಿ ಡೇಟಾ ಪ್ರಯೋಜನಗಳೊಂದಿಗೆ ಬರುತ್ತದೆ ಮತ್ತು ಚಂದಾದಾರರು Disney+ Hotstar ಗೆ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

20 % ಕ್ಯಾಶ್‌ಬ್ಯಾಕ್ ನೀಡುವ ಇತರ ಯೋಜನೆಗಳು!

ರಿಲಯನ್ಸ್ ಜಿಯೋ ಬಳಕೆದಾರರಿಗೆ ರಿಲಯನ್ಸ್ ಜಿಯೋದಿಂದ ಶೇಕಡಾ 20 ರಷ್ಟು ಕ್ಯಾಶ್‌ಬ್ಯಾಕ್ ನೀಡುವ ಇತರ ಯೋಜನೆಗಳನ್ನು ಸಹ ಹೊಂದಿದೆ. ಈ ಪ್ಲಾನ್‌ಗಳು ರೂ.299, ರೂ.666, ಮತ್ತು ರೂ.719 ಬೆಲೆಯಲ್ಲು ಲಭ್ಯಿವಿವೆ.  ರೂ.299 ಪ್ರಿಪೇಯ್ಡ್ ಯೋಜನೆಯು ಮಾಸಿಕ ಪ್ಲಾನ್ ಆಗಿದ್ದು ಅದು ದಿನಕ್ಕೆ 2GB ಡೇಟಾವನ್ನು ಒದಗಿಸುತ್ತದೆ, ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ ಮತ್ತು ದಿನಕ್ಕೆ 100 SMS ನೀಡುತ್ತದೆ. ಯೋಜನೆಯು JioTV, JioCinema, JioSecurity ಮತ್ತು JioCloud ಸೇರಿದಂತೆ ನಾಲ್ಕು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ. 

ಇದನ್ನೂ ಓದಿ: Gaming Platform ಕನ್ನಡ ಸೇರಿ ಬಹುಭಾಷೆಗಳಲ್ಲಿ ಗೇಮ್ಸ್ ನೀಡಲು ರಿಲಯನ್ಸ್ ಜಿಯೋ ಜೊತೆ ಜುಪಿ ಒಪ್ಪಂದ!

ಅದೇ ರೀತಿ, ರೂ 666 ತ್ರೈಮಾಸಿಕ ಯೋಜನೆಯಾಗಿದ್ದು ಅದು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಯೋಜನೆಯು 84 ದಿನಗಳ ಕಾಲ ದಿನಕ್ಕೆ 1.5GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು JioTV, JioCinema, JioSecurity ಮತ್ತು JioCloud ಸೇರಿದಂತೆ ನಾಲ್ಕು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿದೆ. ಸಾಲಿನಲ್ಲಿ ಮೂರನೆಯದು ರೂ 719 ಪ್ರಿಪೇಯ್ಡ್ ಯೋಜನೆಯಾಗಿದ್ದು, ಇದು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಯೋಜನೆಯು JioTV, JioCinema, JioSecurity ಮತ್ತು JioCloud ಸೇರಿದಂತೆ ನಾಲ್ಕು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

click me!