ನಾಲ್ಕು ದಿನ ಚಾರ್ಜ್, 50MP ಕ್ಯಾಮೆರಾ, ಕೈಗೆಟುಕುವ ಬೆಲೆ ರೆಡ್‌ಮಿ ನೋಟ್ ಪ್ರೋ 17 ನಾಳೆ ಲಾಂಚ್

Published : Sep 14, 2026, 04:37 PM IST
Redmi Note Pro 17 Set to Launch Tomorrow

ಸಾರಾಂಶ

ಒಮ್ಮೆ ಚಾರ್ಜ್ ಮಾಡಿದರೆ ನಾಲ್ಕು ದಿನ ಟೆನ್ಶನ್ ಇಲ್ಲ, ಇನ್ನು 50ಎಂಪಿ ಕ್ಯಾಮೆರಾ, 12 ಜಿಬಿ RAM ಸೇರಿದಂತೆ ಹಲವು ವಿಶೇಷತೆಗಳ ರೆಡ್‌ಮಿ ನೋಟ್ 17 ಪ್ರೋ ನಾಳೆ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಬೆಂಗಳೂರು (ಸೆ.14) ಭಾರತದ ಮಾರುಕಟ್ಟೆಗೆ ಇದೀಗ ರೆಡ್‌ಮಿ ನೋಟ್ 17 ಪ್ರೋ ಫೋನ್ ಲಾಂಚ್ ಆಗುತ್ತಿದೆ. ವಿಶೇಷ ಅಂದರೆ ಐಫೋನ್ ರೀತಿಯ ಫೀಚರ್, ಕ್ವಾಲಿಟಿ ಅತೀ ಕಡಿಮೆ ಬೆಲೆಯಲ್ಲಿ ರೆಡ್‌ಮಿ ನೋಟ್ ನೀಡುತ್ತಿದೆ. ಬರೋಬ್ಬರಿ 10,000mAh ಬ್ಯಾಟರಿ ನೀಡಲಾಗಿದೆ. ಒಂದು ದಿನ ಚಾರ್ಜ್ ಮಾಡಿದರೆ ಸಾಕು ನಾಲ್ಕು ದಿನ ಚಾರ್ಜಿಂಗ್ ನಿಲ್ಲಲಿದೆ. ಇನ್ನು ಅತ್ಯುತ್ತಮ ಕ್ವಾಲಿಟಿ ಫೋನ್ ಸೇರಿದಂತೆ ಹಲವು ವಿಶೇಷತೆಗಳ ರೆಡ್‌ಮಿ ನೋಟ್ 17 ಪ್ರೋ ನಾಳೆ (ಸೆ.15) ಭಾರತದಲ್ಲಿ ಲಾಂಚ್ ಆಗುತ್ತಿದೆ.

ರೆಡ್‌ಮಿ ನೋಟ್ 17 ಪ್ರೋ ಬೆಲೆ

ಹೊಸ ರೆಡ್‌ಮಿ ನೋಟ್ 17 ಪ್ರೋ ಅತ್ಯಂತ ಆಕರ್ಷಕ ವಿನ್ಯಾಸದಲ್ಲಿದೆ. ಡ್‌ಮಿ ನೋಟ್ 17 ಪ್ರೋ ಫೋನ್ ಬೆಲೆ 40,000 ರೂಪಾಯಿ. ಇನ್ನು ಡ್‌ಮಿ ನೋಟ್ 17 ಪ್ರೋ ಮ್ಯಾಕ್ಸ್ ಫೋನ್ ಬೆಲೆ 47,999 ರೂಪಾಯಿ. ಇತರ ಐಫೋನ್ ಸೇರಿದಂತೆ ಇತರ ಫೋನ್‌ಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆಯ ಫೋನ್ ಆಗಿದೆ. ವಿಶೇಷ ಅಂದರೆ ಗರಿಷ್ಠ ಎಲ್ಲಾ ಫೀಚರ್ಸ್ ಈ ಫೋನ್‌ನಲ್ಲಿದೆ.

ರೆಡ್‌ಮಿ ನೋಟ್ 17 ಪ್ರೋ ಮ್ಯಾಕ್ಸ್ ಫೋನ್ ಕ್ವಾಲ್ಕಾಂ ಸ್ನಾಪ್‌ಡ್ರಾಗನ್ 6 ಜೆನರೇಶನ್ 5 ಪ್ರೊಸೆಸರ್ ಹೊಂದಿದೆ. ಇನ್ನು ಬರೋಬ್ಬರಿ 12ಜಿಬಿ LPDDR5X RAM ಹಾಗೂ 512 ಜಿಬಿ ಸ್ಟೋರೇಜ್ ಹೊಂದಿದೆ. ಹೀಗಾಗಿ ಫೋನ್ ಹ್ಯಾಂಗ್ ಸಮಸ್ಯೆ, ಸ್ಪೀಡ್ ಸಮಸ್ಯೆಗಳಿಲ್ಲ. ಸುಲಭವಾಗಿ ಹ್ಯಾಂಡಲ್ ಮಾಡಲು ಸಾಧ್ಯವಿದೆ. TUV SUD 5 ಸ್ಟಾರ್ ಟೈಟಾನ್ ಕ್ವಾಲಿಟಿ ಸರ್ಟಿಫಿಕೇಶನ್ ಸಪೋರ್ಟ್, 6.83 ಇಂಚಿನ 1.5ಕೆ AMOLED ಡಿಸ್‌ಪ್ಲೇ, 120Hz ರೀಫ್ರೆಶ್ ರೇಟ್, 3,500nits ಬ್ರೈಟ್‌ನೆಸ್ ಹಾಗೂ ಗೋರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಲಭ್ಯವಿದೆ.

ಕ್ವಾಲಿಟಿ ಕ್ಯಾಮೆರಾ

ಸೀಕ್ರೆಟ್ ಸನ್‌ರೈಸ್ ಕಲರ್ ಫೋನ್ ಶೋಕೇಸ್ ಮಾಡಲಾಗಿದೆ. ಇನ್ನು ಲ್ಯಾವೆಂಡರ್ ಸೇರಿದಂತೆ ಕೆಲ ಸ್ಟಾಂಡರ್ಡ್ ಕಲರ್ ಆಯ್ಕೆಗಳು ಇರಲಿದೆ. ಪ್ರೋ ಹಾಗೂ ಪ್ರೋ ಮ್ಯಾಕ್ಸ್ ಎರಡೂ ಫೋನ್‌ಗಳು ಸ್ಕ್ವಾರ್ ಶೇಪ್ ಕ್ಯಾಮೆರಾ ಇರಲಿದೆ. ಎರಡು ಸೆನ್ಸಾರ್ ಹಾಗೂ ಫ್ಲಾಶ್ ಇರಲಿದೆ. 50 ಎಂಪಿ ಕ್ಯಾಮೆರಾ ಅತ್ಯಂತ ಕ್ವಾಲಿಟಿ ಫೋಟೋ ಹಾಗೂ ವಿಡಿಯೋ ತೆಗೆಯಲು ನರೆವಾಗುತ್ತದೆ. ಜೊತೆಗೆ ಎಐ ನೆರವು ಇರಲಿದೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Samsung Galaxy Tab S10+ ಖರೀದಿಸುವವರಿಗೆ ಗುಡ್‌ ನ್ಯೂಸ್‌; ಬೆಲೆ ₹17,000 ಕಡಿತ!
BSNL ಬ್ರಾಡ್‌ಬ್ಯಾಂಡ್ ಪ್ಲಾನ್ ಬಿಗ್ ಆಫರ್, 200Mbps ಇಂಟರ್ನೆಟ್‌ನಲ್ಲಿ 26 OTT