ಕ್ಯಾಮೆರಾ ಕೇಂದ್ರಿತ Oppo Reno 7 Pro, Reno 7 ಭಾರತದಲ್ಲಿ ಫೆ.4 ರಂದು ಬಿಡುಗಡೆ ಸಾಧ್ಯತೆ!

By Suvarna NewsFirst Published Jan 24, 2022, 11:21 AM IST
Highlights

Oppo ಮುಂದಿನ ತಿಂಗಳು ಭಾರತದಲ್ಲಿ Reno 7 Pro ಮತ್ತು Reno 7 ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಂಪನಿಯು ಎರಡೂ ಮೊಬೈಲ್‌ಗಳ  ಪ್ರಚಾರವನ್ನು ಕಳೆದ ವಾರ ಪ್ರಾರಂಭಿಸಿದೆ. 

Tech Desk: ಭಾರತದಲ್ಲಿ ಫೆಬ್ರವರಿ 4 ರಂದು  Oppo Reno 7 Pro ಮತ್ತು Reno 7 ಬಿಡುಗಡೆಯಾಗಲಿದೆ. ಹೊಸ ವರದಿಯೊಂದು Oppo ತನ್ನ ಮುಂದಿನ Reno ಸರಣಿಯ ಫೋನ್‌ಗಳನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ ಎಂದು ಸೂಚಿಸಿದೆ. Oppo ಕಳೆದ ವಾರ Reno 7 ಸರಣಿಯ ಬಿಡುಗಡೆ ಬಗ್ಗೆ ಮಾಹಿತಿ ನೀಡಲು ಮಾಡಲು ಪ್ರಾರಂಭಿಸಿದೆ.  ಇದು ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನ ಕಂಪನಿಗೆ ಉತ್ತಮ ಮಾರ್ಕೆಟಿಂಗ್‌ ಸ್ಟ್ರ್ಯಾಟರ್ಜಿಯಾಗಲಿದೆ. Oppo ಮುಂದಿನ ರೆನೋ ಸರಣಿಯ ಫೋನ್ "ಪೋಟ್ರೇಟ್ ಎಕ್ಸ್‌ಪರ್ಟ್" (The Portrait Expert) ಅನ್ನು ಒಳಗೊಂಡಿರುತ್ತದೆ ಎಂದು ಹೇಳುತ್ತಿದೆ. ಇದು ಓಪ್ಪೋ ಮುಂಬರುವ ಫೋನ್‌ಗಳಲ್ಲಿ ಹೊಸ ಕ್ಯಾಮೆರಾ ವೈಶಿಷ್ಟ್ಯವನ್ನು ತರಲಿದೆ ಎಂದು ಸ್ಪಷ್ಟಪಡಿಸುತ್ತದೆ. 

ಫೆಬ್ರವರಿ 4 ರಂದು ಫೋನ್‌ ಬಿಡುಗಡೆಯಾಗಲಿದ್ದು Reno 7 ಸರಣಿಯ ಮಾರಾಟವು ಫೆಬ್ರವರಿ 8 ರಂದು ಅಥವಾ ನಂತರ ಪ್ರಾರಂಭವಾಗುತ್ತದೆ ಎಂದು MySmartPrice ವರದಿ ಮಾಡಿದೆ. Oppo ತನ್ನ ಫೋನ್‌ಗಳ ಮಾರಾಟವನ್ನು ಫ್ಲಿಪ್‌ಕಾರ್ಟ್‌ನಲ್ಲಿ ನಡೆಸಲಾಗುವುದು ಎಂದು ಖಚಿತಪಡಿಸಿದೆ, ಅಂದರೆ ಫೋನ್‌ಗಳು ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲ್ಯೂಸಿವ್‌ ಆಗಿರುತ್ತದೆ. ಆದರೆ Oppo ಇತರ ಶಾಪಿಂಗ್ ವೆಬ್‌ಸೈಟ್‌ಗಳು ಮತ್ತು ತನ್ನದೇ ಆದ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ Reno 7 ಸರಣಿಯನ್ನು ಮಾರಾಟ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Google Pixel 6a 2022 ಮೇನಲ್ಲಿ ಬಿಡುಗಡೆ ಸಾಧ್ಯತೆ: ಏನೆಲ್ಲಾ ಫೀಚರ್ಸ್‌ ಇರಬಹುದು?

Oppo Reno 7 Pro ನಿರೀಕ್ಷೆಗಳೇನು?: ರೆನೋ ಸರಣಿಯು ಯಾವಾಗಲೂ ಲುಕ್ಸ್ ಮತ್ತು ಸ್ಪೆಸಿಫಿಕೇಶನ್‌ಗಳ ಉತ್ತಮ ಮಿಶ್ರಣವಾಗಿದೆ. ಪ್ರತಿ ರೆನೋ ಸರಣಿಯ ಫೋನ್‌ನ  ಸರಣಿಯು ಅತ್ಯುತ್ತಮ ಲುಕ್ಸ್‌ ಹೊಂದಿದ್ದು, ವಿಶೇಷಣಗಳು ಕೆಲವು ಮಾದರಿಗಳಲ್ಲಿ ಎವರೇಜ್‌ ಆಗಿವೆ. Oppo Reno ಸರಣಿಯು ಲಭ್ಯವಿರುವ ಬೆಲೆ ಶ್ರೇಣಿಯಲ್ಲಿ ಸ್ಪರ್ಧೆಯು ಪ್ರಬಲವಾಗಿದೆ. ಹಾಗಾಗಿ ಈ ಫೋನ್‌ಗಳಲ್ಲಿ ಹಾರ್ಡ್‌ವೇರ್ ಕಡಿಮೆ ಅಥವಾ ಕಳಪೆಯಾಗಿರುವುದು ಎವರೇಜ್‌ ಸ್ಪೆಸಿಫಿಕೇಶನ್‌ಗೆ ಕಾರಣವಲ್ಲ. 

ಕಳೆದ ವರ್ಷ ಚೀನಾದಲ್ಲಿ ಬಿಡುಗಡೆ : Oppo Reno 7 Pro ಜೊತೆಗೆ ಹೊಸ ಕ್ಯಾಮರಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು. ಇದು ಬಹುಶಃ ಫೋನಿನ ಪ್ರಮುಖ ವೈಶಿಷ್ಟ್ಯವಾಗಿರಬಹುದು. ಕಳೆದ ವರ್ಷ ಚೀನಾದಲ್ಲಿ ಈ ಫೋನ್‌ ಬಿಡುಗಡೆಯಾಗಿದೆ. ಹಾಗಾಗಿ ಇದರ ವಿಶೇಷಣಗಳು ಈಗಾಗಲೇ ಬಹಿರಂಗಗೊಂಡಿವೆ.  ಭಾರತದಲ್ಲಿ  ಬಿಡುಗಡೆಯಾಗುವ Oppo Reno 7 Pro ಗಾಗಿ ವಿಶೇಷಣಗಳಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸದಿದ್ದರೆ ಚೀನಾ ಮಾದರಿಯ ಎಲ್ಲ ವಿಶೇಷತೆಗಳನ್ನು ಇದು ಪಡೆಯಲಿದೆ.

ಇದನ್ನೂ ಓದಿ: Vivo Y75 5G ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಭಾರತದಲ್ಲಿ ಗಣರಾಜ್ಯೋತ್ಸವದಂದು ಬಿಡುಗಡೆ?

Reno 7 Pro 6.55-ಇಂಚಿನ 90Hz Full-HD+ AMOLED ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಮ್ಯಾಕ್ಸ್ ಪ್ರೊಸೆಸರ್,  256GB ಸಂಗ್ರಹಣೆ ಹಾಗೂ 8GB RAM ವರೆಗೆ ಬರುತ್ತದೆ ಎಂದು ನಿರೀಕ್ಷಿಸಬಹುದು. ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾಗಳು, 32-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್, ಮತ್ತು 65W ವೇಗದ ಚಾರ್ಜಿಂಗ್‌ನೊಂದಿಗೆ 4500mAh ಬ್ಯಾಟರಿಯೊಂದಿಗೆ ಫೋನ್‌ ಬಿಡುಗಡೆಯಾಗಬಹುದು. ಫೋನ್ ಚೀನಾದಲ್ಲಿ ನೀಲಿ, ಕಪ್ಪು ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ. ಆದರೆ Oppo ಭಾರತದಲ್ಲಿ ಕೇವಲ ನೀಲಿ ಮತ್ತು ಕಪ್ಪು ಬಣ್ಣಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.  ಆದ್ದರಿಂದ ಬಹುಶಃ ಇದು ಗೋಲ್ಡ್ ಆವೃತ್ತಿಯನ್ನು ಕೈಬಿಡುವ ಸಾಧ್ಯತೆ ಇದೆ. 

ಭಾರತದಲ್ಲಿ Oppo Reno 7 Pro ಬೆಲೆ: Oppo Reno 7 Pro ನ ಭಾರತೀಯ ಮಾರುಕಟ್ಟೆಯ ಬೆಲೆ ಇತ್ತೀಚೆಗೆ ಸೋರಿಕೆಯಾಗಿದೆ. Reno 7 ಸರಣಿಯ ಬೆಲೆ 28,000 ಮತ್ತು 43,000 ರೂಗಳ ನಡುವೆ ಇರಬಹುದು, ಅಂದರೆ ಉನ್ನತ-ಮಟ್ಟದ Reno 7 Pro ಬೆಲೆ ಸುಮಾರು 43,000 ರೂ ಆಗಿರಬಹುದು ಎಂದು ಟಿಪ್‌ಸ್ಟರ್ ಹೇಳಿದ್ದಾರೆ. ಹಿಂದಿನ Reno ಸರಣಿಯ ಫೋನ್‌ಗಳು ಅದೇ ಬೆಲೆಗೆ ಬಂದಿವೆ, ಆದ್ದರಿಂದ ಟಿಪ್‌ಸ್ಟರ್ ಸೂಚಿಸಿದ ಬೆಲೆ ಬಹುತೇಕ ಸರಿಯಾಗಿರುವ ಸಾಧ್ಯತೆಗಳಿವೆ. 

click me!